Ad Widget .

ಮಹಿಷಾ ದಸರಾ ಆಚರಣೆ/ ಪೋಲೀಸ್ ಭದ್ರತೆಯಲ್ಲಿ ಅದ್ದೂರಿ ಕಾರ್ಯಕ್ರಮ

ಸಮಗ್ರ ನ್ಯೂಸ್: ಮಹಿಷ ದಸರಾ ಆಚರಣೆ ಸಮಿತಿ ವತಿಯಿಂದ ಮೈಸೂರು ಪುರಭವನದಲ್ಲಿ ಆವರಣದಲ್ಲಿ ಮಹಿಷ ದಸರಾ ಹಾಗೂ ದಮ್ಮದೀಕ್ಷಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಪೊಲೀಸ್ ಭದ್ರತೆಯಲ್ಲಿ ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಯಿತು.

Ad Widget . Ad Widget .

ಮಹಿಷ ದಸರಾ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪುರಭವನದ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಪೊಲೀಸರು ಭದ್ರತೆಯನ್ನು ನೀಡಿದ್ದರು. ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ನೀಡಲಿಲ್ಲ. ಬೆಟ್ಟದ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಿಷೇಧಾಜ್ಞೆ ನಡುವೆಯೂ ವಿವಿಧೆಡೆಯಿಂದ ನೀಲಿ ಪಟ್ಟಿಗಳನ್ನು ತೊಟ್ಟು ತಂಡೋಪತಂಡವಾಗಿ ಬೈಕ್‌ಗಳಲ್ಲಿ ಮೆರವಣಿಗೆಯಲ್ಲಿ ಜನರು ಬಂದು ಪುರಭವನದಲ್ಲಿ ಸೇರಿದ್ದರು. ಸ್ತಬ್ದಚಿತ್ರವನ್ನೂ ತರಲಾಗಿತ್ತು.

Ad Widget . Ad Widget .

‘ಮೈಸೂರಿನ ಅಸ್ಮಿತೆಗಾಗಿ ಮಹಿಷ ದಸರಾ’ ಎಂಬ ಫಲಕ ಹಾಕಲಾಗಿತ್ತು. ಮಹಿಷಾಸುರನ ಕಟೌಟ್, ಬುದ್ಧ, ಬಸವ ಹಾಗೂ ಮಹಿಷನ ಚಿಕ್ಕ ಪ್ರತಿಮೆಗಳಿಗೆ ಪುಷ್ಪಾರ್ಚನೆ ನೆರವೇರಿಸಿ, ಭಾರತದ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.

Leave a Comment

Your email address will not be published. Required fields are marked *