Ad Widget .

ಸುಳ್ಯ: ಏರ್‌ಲೈನ್ ಸಂಸ್ಥೆಯಲ್ಲಿ ಉದ್ಯೋಗ ನೀಡುವ ಭರವಸೆ

ಯುವತಿಗೆ 13 ಲಕ್ಷ ರೂಪಾಯಿ ವಂಚನೆ

Ad Widget . Ad Widget .

ಸಮಗ್ರ ನ್ಯೂಸ್: ಉದ್ಯೋಗ ನೀಡುವುದಾಗಿ ತಿಳಿಸಿ ಯುವತಿಯೋರ್ವಳಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ನಿವಾಸಿ ಯುವತಿ ಈ ಬಗ್ಗೆ ದೂರು ನೀಡಿದ್ದಾರೆ. ಕಳೆದ ಜು.15ರಂದು ಅಪರಿಚಿತ ವ್ಯಕ್ತಿಯಬ್ಬರು ಕರೆಮಾಡಿ ತಾನು ವಿಸ್ತಾರ ಏರ್‌ಲೈನ್ಸ್ ಸಿಂಗಪೂರ್ ಬ್ರಾಂಚ್ ನ ದೇವನಹಳ್ಳಿ ಬೆಂಗಳೂರಿನ ಸಂಸ್ಥೆಯಿಂದ ಕರೆಮಾಡುತ್ತಿರುವುದಾಗಿ ತಿಳಿಸಿ, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು, ಈ ಉದ್ಯೋಗದಲ್ಲಿ ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ಹಾಗೂ ಇದನ್ನು ದೂರುದಾರಿರಿಗೆ ನೀಡುವುದಾಗಿ ತಿಳಿಸಿದ್ದಾರೆ. ಬಳಿಕ ಯುವತಿಯಿಂದ ಹಂತ ಹಂತವಾಗಿ ವಿವಿಧ ನೆಪಗಳನ್ನು ಹೇಳಿ ಒಟ್ಟು ರೂ. 13,00,997 ಗಳನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದು, ಈವರೆಗೆ ಉದ್ಯೋಗ ನೀಡದ ಮೋಸ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *