Ad Widget .

ನಾಪತ್ತೆಯಾಗಿರುವ ಇಂಧನ ಸಚಿವ ಕೆ.ಜೆ ಜಾರ್ಜ್​​ರನ್ನು ಹುಡುಕಿ ಕೊಡಿ: ಬಿಜೆಪಿಯಿಂದ ಆಕ್ರೋಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ ಅಂತಾ ಹೇಳಲಾಗುತ್ತಿದೆ. ರಾಜ್ಯದ ಅನೇಕ ಕಡೆಗಳಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಬೆಳೆಯನ್ನೇ ನಂಬಿಕೊಂಡಿದ್ದ ಬದುಕಿಗೆ ಕರೆಂಟ್ ಇಲ್ಲದೇ ಕತ್ತಲಾವರಿಸಿದಂತಾಗಿದೆ. ಸದ್ಯ ಲೋಡ್​ ಶೆಡ್ಡಿಂಗ್ ಹಿನ್ನೆಲೆ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ.ಜೆ.ಜಾರ್ಜ್​​ರನ್ನು ಹುಡುಕಿ ಕೊಡಿ, ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ ಎಂದು ವಾಗ್ದಾಳಿ ಮಾಡಿದೆ.

Ad Widget . Ad Widget .

ಕಾಂಗ್ರೆಸ್​​​ ಕಾಣೆಯಾಗಿದ್ದ ಬಸ್‌ ಸ್ಟಾಂಡ್‌ನನ್ನು ಕೊನೆಗೂ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ. ಇರಲಿ ನಿಮ್ಮ ಸಾಹಸ ನಿಜಕ್ಕೂ ಶ್ಲಾಘನೀಯ! ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ.ಜೆ.ಜಾರ್ಜ್​​ ಅವರನ್ನು ಹುಡುಕಿ ಕೊಡಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

Ad Widget . Ad Widget .

ಕಾಂಗ್ರೆಸ್​ ಬಂತೋ ಕರುನಾಡ ತುಂಬಾ ಕಗ್ಗತ್ತಲು ತಂತೋ’ ಎಲ್ಲೆಲ್ಲೂ ಕತ್ತಲು ನ್ಯಾಯ ನೀಡುವ ನ್ಯಾಯಾಲಯದಲ್ಲೂ ಕತ್ತಲು! ಶಾಸಕರ ಸಭೆಯಲ್ಲೂ ಕತ್ತಲೋ ಕತ್ತಲು! ಸಿಎಂ ಸಿದ್ದರಾಮಯ್ಯ ಅವರೇ, ಮೊದಲ ಅವಧಿಯಲ್ಲೂ ಮೊಬೈಲ್ ಟಾರ್ಚ್ ಹಿಡಿದು ಬಜೆಟ್ ಮಂಡಿಸಿದ ಸಾಧನೆ ನಿಮ್ಮದು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕರುನಾಡಿಗೆ ಕತ್ತಲೆಯ ಗ್ಯಾರಂಟಿ ಕೊಟ್ಟಿದೆ. ಎಲ್ಲಿ ನೋಡಿದರೂ ಪವರ್ ಕಟ್! ನ್ಯಾಯಾಲಯ, ವಿಧಾನಸೌಧ, ಶಾಸಕರ ಸಭೆ, ರೈತರ ಪಂಪ್‌ಸೆಟ್‌, ಸ್ಕೂಲ್, ಕಾಲೇಜುಗಳು, ಕಂಪನಿ, ಕೈಗಾರಿಕೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲೂ ಪವರ್ ಕಟ್!

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ. ಜೆ. ಜಾರ್ಜ್ ಅವರೇ, ನಿಮ್ಮ ಮನೆಯಲ್ಲಿ ಜನರೇಟರ್ ಇದೆಯೋ ಅಥವಾ ಸೀಮೆಎಣ್ಣೆ ಬುಡ್ಡಿ ಹಚ್ಚುತ್ತಿದ್ದೀರೋ ಎಂದು ಬಿಜೆಪಿ ಪ್ರಶ್ನಿಸಿದೆ.

Leave a Comment

Your email address will not be published. Required fields are marked *