ಟಾಲಿವುಡ್​ನಲ್ಲೂ ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಫುಲ್ ಡಿಮ್ಯಾಂಡ್​?

ಸಮಗ್ರ ನ್ಯೂಸ್: ತೆಲುಗು ನಟ ಮಂಚು ವಿಷ್ಣು ಬಿಗ್ ಬಜೆಟ್ ಮೂವಿಗೆ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ ಡ್ರೀಮ್ ಪ್ರಾಜೆಕ್ಟ್ ಭಕ್ತ ಕಣ್ಣಪ್ಪ ಸಿನಿಮಾ ಕೆಲಸದಲ್ಲಿ ವಿಷ್ಣು ಬ್ಯುಸಿ ಆಗಿದ್ದಾರೆ. ಸ್ಟಾರ್ ನಟರು ಈ ಸಿನಿಮಾ ತಂಡ ಸೇರ್ತಿದ್ದು, ಈ ಲಿಸ್ಟ್​ಗೆ ಕನ್ನಡದ ಹ್ಯಾಟ್ರಿಕ್ ಹೀರೋ ಕೂಡ ಸೇರ್ಪಡೆ ಆಗ್ತಿದ್ದಾರೆ.

Ad Widget ... ..

ಇವರು ಇತ್ತೀಚೆಗೆ ಮಂಚು ವಿಷ್ಣು, ಶ್ರೀಕಾಳಹಸ್ತಿ ಪುಣ್ಯಕ್ಷೇತ್ರದಲ್ಲಿ ಭಕ್ತ ಕಣ್ಣಪ್ಪ ಸಿನಿಮಾ ಪೂಜಾ ಕಾರ್ಯ ನಡೆಸಿ ಸಿನಿಮಾ ಕಾರ್ಯಕ್ಕೆ ಚಾಲನೆ ನೀಡಿದ್ರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ವಿಷ್ಣು ಗೆಳೆಯ ನಟ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಪಾತ್ರ 10 ನಿಮಿಷ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾದಲ್ಲಿ ಪ್ರಭಾಸ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾದಲ್ಲಿ ನಟಿಸಲು ಪ್ರಭಾಸ್ ಒಂದು ರೂಪಾಯಿ ಹಣ ಕೂಡ ಪಡೆಯೋದಿಲ್ಲ ಎಂದಿದ್ದಾರಂತೆ. ಮಂಚು ಕುಟುಂಬದ ಜೊತೆ ಪ್ರಭಾಸ್ ಕ್ಲೋಸ್ ಆಗಿದ್ದಾರೆ ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ.

Ad Widget

ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಬರದಿಂದ ಸಾಗಿದೆ. ಈ ಸಿನಿಮಾದಲ್ಲಿ ಮಲಯಾಳಿ ನಟ ಮೋಹನ್ ಲಾಲ್ ಕೂಡ ನಟಿಸುತ್ತಿದ್ದಾರೆಯಂತೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಡೈಲಾಗ್ ಕಿಂಗ್ ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ, ಈ ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಶಿವಣ್ಣಗೂ ಕೂಡ ಪ್ರಮುಖ ಪಾತ್ರ ನೀಡಲಾಗಿದೆಯಂತೆ. ಆದರೆ ಈ ಬಗ್ಗೆ ನಟ ಶಿವರಾಜ್ ಕುಮಾರ್ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರತಂಡದಿಂದ ಶೀಘ್ರವೇ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ

Leave a Comment

Your email address will not be published. Required fields are marked *