ಸಮಗ್ರ ನ್ಯೂಸ್: ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕಾರ್ಯಕ್ರಮ ನಡೆಯುತ್ತಿತ್ತು. ವೇದಿಕೆಯಲ್ಲಿ ಡಿ.ಕೆ ಶಿವಕುಮಾರ್, ಡಾ.ಸಿಎನ್ ಅಶ್ವತ್ ನಾರಾಯಣ್, ಡಿ.ವಿ ಸದಾನಂದ ಗೌಡ ಸೇರಿದಂತೆ ಪಕ್ಷಾತೀತವಾಗಿ ನಾಯಕರು ಭಾಗಿಯಾಗಿದ್ದರು. ಮುಂಬರುವ ಬೆಂಗಳೂರು ಕಂಬಳದ ಬಗ್ಗೆ ನಡೆಯುತ್ತಿದ್ದ ಕಂಬಳದ ಕರೆ ಪೂಜೆಯಲ್ಲಿ ಎಲ್ಲವೂ ಸರಾಗವಾಗಿಯೇ ನಡೆಯುತ್ತಿದ್ದ ಆರ್ ಆರ್ ನಗರ ಶಾಸಕ ಮುನಿರತ್ನ ಎಂಟ್ರಿ ಮಾತ್ರ ಇಡೀ ಕಾರ್ಯಕ್ರಮಕ್ಕೆ ಟ್ವಿಸ್ಟ್ ನೀಡಿದೆ.
ವೇದಿಕೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಭಾಷಣ ಮಾಡುತ್ತಿದ್ದ ವೇಳೆ ಏಕಾಏಕಿ ವೇದಿಕೆಯ ಮುಂಭಾಗಕ್ಕೆ ಬಂದ ಆರ್ ಆರ್ ನಗರ ಶಾಸಕ ಮುನಿರತ್ನ ಹೈಡ್ರಾಮಾ ಸೃಷ್ಟಿಸಿದರು. ಡಿಕೆಶಿ ಭಾಷಣದ ವೇಳೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಶಾಸಕ ಮುನಿರತ್ನ ಬೆಂಬಲಿಗರು ಗದ್ದಲ ಆರಂಭಿಸಿದರು. ಈ ವೇಳೆ ಡಿಕೆ ಶಿವಕುಮಾರ್ ತಮ್ಮ ಭಾಷಣದ ಮಧ್ಯೆಯೇ ಟಾಂಗ್ ನೀಡಿದರು.ಯಾರೋ ಡ್ರಾಮಾ ಮಾಡಲು ಬಂದಿದ್ದಾರೆ. ಡ್ರಾಮಾ ನೋಡೋಣ, ಅಶ್ವಥ್ ನಾರಾಯಣ್ ಅವರೇ ನಿಮ್ಮ ಸಮಸ್ಯೆ ಬಗೆ ಹರಿಸಿಕೊಳ್ಳಿ. ಇದು ಕಂಬಳದ ಕಾರ್ಯಕ್ರಮ. ಮಂಗಳೂರಿನಿಂದ ಬಂದು ಬೆಂಗಳೂರಿನಲ್ಲಿ ಕಂಬಳ ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ತೊಂದರೆ ಆಗೋದು ಬೇಡ. ಫಿಲಂನವ್ರದ್ದು ಏನೋ ಒಂದು ಇರ್ತದೆ. ಆ ಮೇಲೆ ಡ್ರಾಮಾ ಅರ್ಟಿಸ್ಟ್, ಸ್ಕ್ರಿಪ್ಟ್ ನೋಡೋಣ ಎಂದು ಮುನಿರತ್ನಗೆ ತಿರುಗೇಟು ಕೊಟ್ಟರು.
ಇದಾದ ಬಳಿಕ ವೇದಿಕೆಯಿಂದ ಹೊರಬಂದ ಡಿಸಿಎಂ ಕಾಲಿಗೆ ಮುನಿರತ್ನ ಬಿದ್ದು ಮನವಿ ಸಲ್ಲಿಸಿದರು, ನಂತರ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಶಾಸಕ ಮುನಿರತ್ನ ಭೇಟಿ ನೀಡಿ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್.ಆರ್.ಕ್ಷೇತ್ರದ ಕಾಮಗಾರಿ ಪಟ್ಟಿ ಕೊಡಲು ಹೇಳಿದ್ದಾರೆ. ಯಾವುದೇ ತೊಂದರೆ ಆಗದಂತೆ ನಾನು ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದರು.