Ad Widget .

ಏಷ್ಯನ್ ಗೇಮ್ಸ್ ವಿಜೇತರ ಜೊತೆ ಮೋದಿ ಸಂವಾದ

ಸಮಗ್ರ ನ್ಯೂಸ್: 19ನೇ ಏಷ್ಯನ್ ಗೇಮ್ಸ್ ನಲ್ಲಿ ಅಮೋಘ ಸಾಧನೆ ಮಾಡಿ, ಪದಕಗಳ ಶತಕ ಬಾರಿಸಿದ ಭಾರತದ ಅಥ್ಲೆಟ್‌ಗಳ ಜೊತೆ ನಾಳೆ‌ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ನಾಳೆ‌ ಅಕ್ಟೋಬರ್ 10ರಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Ad Widget . Ad Widget .

ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತವು 107 ಪದಕಗಳನ್ನು ಗೆಲ್ಲುವುದರೊಂದಿಗೆ ಮೊದಲ ಬಾರಿಗೆ ನೂರು ಪದಕಗಳನ್ನು ಗಳಿಸಿದ ಹೊಸದೊಂದು ದಾಖಲೆಯನ್ನು ನಿರ್ಮಿಸಿತ್ತು. 28 ಚಿನ್ನದ ಪದಕ, 38 ಬೆಳ್ಳಿಯ ಪದಕ ಮತ್ತು 41 ಕಂಚಿನ ಪದಕಗಳು ಸೇರಿ ಒಟ್ಟು 107 ಪದಕಗಳನ್ನು ಭಾರತವು ಗೆದ್ದುಕೊಂಡಿತ್ತು.

Ad Widget . Ad Widget .

ಭಾರತೀಯ ತಂಡದ ಅಥ್ಲೀಟ್‌ಗಳು, ತರಬೇತುದಾರರು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ ಅಧಿಕಾರಿಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

Leave a Comment

Your email address will not be published. Required fields are marked *