Ad Widget .

ರಾಜಸ್ಥಾನದಲ್ಲಿ ನವೆಂಬರ್ 23ರಂದು ಚುನಾವಣೆ/ ಬಿಜೆಪಿ ಮೊದಲ ಪಟ್ಟಿ ಸಿದ್ಧ

ಸಮಗ್ರ ನ್ಯೂಸ್: ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ರಾಜಸ್ಥಾನದಲ್ಲಿ ನವೆಂಬರ್ 23 ರಂದು ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ.

Ad Widget . Ad Widget .

41 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ರಾಜಸ್ಥಾನದಿಂದ ಲೋಕಸಭೆಗೆ ಆಯ್ಕೆಯಾಗಿರುವ 7 ಸಂಸದರಿಗೆ ಟಿಕೆಟ್ ನೀಡಲಾಗಿದೆ.

Ad Widget . Ad Widget .

ರಾಜಸ್ಥಾನದ ಪ್ರಮುಖ 7 ಸಂಸದರು ವಿಧಾನಸಭೆ ಸ್ಪರ್ಧಿಸಿ ಬಿಜೆಪಿ ಅಧಿಕಾರಕ್ಕೆ ತರುವ ಹೊಣೆ ಹೊತ್ತುಕೊಂಡಿದ್ದಾರೆ.ಸಂಸದ ರಾಜ್ಯವರ್ಧನ್ ರಾಥೋಡ್ ಜೋತ್ವಾರ ಕ್ಷೇತ್ರದಿಂದ , ಸಂಸದೆ ದಿವ್ಯ ಕುಮಾರ್ ವಿದ್ಯಾದರ ನಗರ ಕ್ಷೇತ್ರದಿಂದ, ಬಾಲಕನಾಥ್ ತಿಜಾರಾ ಕ್ಷೇತ್ರದಿಂದ, ಸಂಸದ ನರೇಂದ್ರ ಕುಮಾರ್ ಮಂದ್ವಾ ಕ್ಷೇತ್ರದಿಂದ, ಭಾಗಿರತ್ ಚೌಧರಿ ಕಿಶನಘರ ಕ್ಷೇತ್ರದಿಂದ, ಕಿರೋಡಿ ಲಾಲ್ ಮೀನಾ ಸವಾರಿ ಮಾಧೋಪುರ್ ಕ್ಷೇತ್ರದಿಂದ ಹಾಗೂ ಸಂಚೋರ್ ಕ್ಷೇತ್ರದಿಂದ ದೇವಜಿತ್ ಪಟೇಲ್ ಸ್ಪರ್ಧಿಸುತ್ತಿದ್ದಾರೆ.

ಈ ಪಟ್ಟಿಯಲ್ಲಿ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕಿ ವಸುಂದರ ರಾಜೆಗೆ ಸ್ಥಾನ ನೀಡಿಲ್ಲ.
ವಸುಂದರ ರಾಜೆ ಮಾತ್ರವಲ್ಲ, ರಾಜೆ ಆಪ್ತರಾಗಿರುವ ಶಾಸಕ ನರ್ಪತ್ ಸಿಂಗ್ ರಾಜ್ಜಿ, ರಾಜಪಾಲ್ ಸಿಂಖ್ ಶೇಖಾವತ್ ಸೇರಿದಂತೆ ಕೆಲ ಪ್ರಮುಖ ನಾಯಕರಿಗೂ ಕೊಕ್ ನೀಡಲಾಗಿದೆ.

Leave a Comment

Your email address will not be published. Required fields are marked *