Ad Widget .

ಬಿಗ್ ಬಾಸ್ ಸೀಸನ್ 10| ಸ್ಪರ್ಧಿಯಾಗಿ‌‌ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್

ಸಮಗ್ರ ನ್ಯೂಸ್: ‘ಕನ್ನಡ ಬಿಗ್ ಬಾಸ್ ಸೀಸನ್ 10’ ಆರಂಭ ಆಗಿದೆ. ವಿವಿಧ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಎಂಟ್ರಿ ಅನೇಕರಿಗೆ ಅಚ್ಚರಿ ತಂದಿದೆ. ಎಂಎಲ್​ಎ ಆಗಿ ದೊಡ್ಮನೆಗೆ ತೆರಳಿರೋ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಕೆಲವು ದಿನಗಳ ಅತಿಥಿಯೋ ಅಥವಾ ಉಳಿದ ಸ್ಪರ್ಧಿಗಳಂತೆಯೇ ಅವರು ಇರುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

Ad Widget . Ad Widget .

ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರದ ಶಾಸಕ. ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಪ್ರಬಲ ಪ್ರತಿಸ್ಪರ್ಧಿ ಡಾಕ್ಟರ್ ಸುಧಾಕರ್ ಅವರನ್ನು ಸೋಲಿಸಿದ್ದಾರೆ. ಅವರು ಸಭೆಗಳಲ್ಲಿ ಹೇಳುತ್ತಿದ್ದ ಡೈಲಾಗ್ ಗಮನ ಸೆಳೆದಿದೆ. ಅವರ ಬಗ್ಗೆ ಸಾಕಷ್ಟು ಟ್ರೋಲ್ ಕೂಡ ಆಗಿದೆ. ಬಿಗ್ ಬಾಸ್​ಗೆ ಪ್ರದೀಪ್ ಈಶ್ವರ್ ಬರುತ್ತಾರೆ ಎಂಬ ವಿಚಾರ ಮೊದಲೇ ಸುದ್ದಿ ಆಗಿತ್ತು. ಈಗ ಕಲರ್ಸ್ ಕನ್ನಡ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.

Ad Widget . Ad Widget .

ಅಕ್ಟೋಬರ್ 8ರಂದೇ ಅವರು ದೊಡ್ಮನೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಒಂದು ದಿನ ತಡವಾಗಿ ಅವರು ಬಂದಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ನಾವು ಎಂಎಲ್​ಎ ಜೊತೆ ಸ್ಪರ್ಧಿಸಬೇಕಲ್ಲ’ ಎಂದು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ.

ಪ್ರದೀಪ್ ಈಶ್ವರ್ ಎಂಟ್ರಿಗೆ ಅನೇಕರು ತಕರಾರು ತೆಗೆದಿದ್ದಾರೆ. ‘ಎಂಎಲ್​ಎ ಆಗಿ ಕ್ಷೇತ್ರದ ಅಭಿವೃದ್ಧಿ ಮಾಡುವ ಬದಲು ರಿಯಾಲಿಟಿ ಶೋಗೆ ಹೋದರೆ ಸಾಮಾನ್ಯ ಜನರ ಗತಿ ಏನು’ ಎಂದು ಅನೇಕರು ಪ್ರಶ್ನೆ ತೆಗೆದಿದ್ದಾರೆ. ಇನ್ನೂ ಕೆಲವರು, ಡ್ರೋನ್ ಪ್ರತಾಪ್, ಪ್ರದೀಪ್ ಈಶ್ವರ್ ಹಾಗೂ ರಕ್ಷಕ್ ಒಂದು ಕಡೆ ಸೇರಿದ್ದಾರೆ. ಎಂಟರ್​ಟೇನ್​ಮೆಂಟ್ ಹೆಚ್ಚಲಿದೆ ಎಂದು ಹೇಳಿದ್ದಾರೆ.

ಜಿಯೋ ಸಿನಿಮಾ ಒಟಿಟಿ ಹಾಗೂ ಕಲರ್ಸ್​ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ವೀಕ್ಷಣೆಗೆ ಅವಕಾಶ ಇದೆ. ಪ್ರತಿ ದಿನ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ.

Leave a Comment

Your email address will not be published. Required fields are marked *