ಸಮಗ್ರ ನ್ಯೂಸ್: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು ಸವಲತ್ತುಗಳನ್ನು ಕಡಿತಗೊಳಿಸುವ ಕಾರ್ಯಯೋಜನೆಯಾಗುತ್ತಿದೆ ಎಂದು ಮೂಲದಿಂದ ತಿಳಿದು ಬಂದಿದೆ.
ಕಾರ್ಮಿಕರಿಗೆ ಅನ್ಯಾಯ ಎಸಗುವ ಸಕಲ ಯೋಜನೆಯು ಸಿದ್ಧವಾಗಿದೆ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಅನ್ನು ಕೂಡ ತಡೆ ಹಿಡಿದಿದೆ. ಕಟ್ಟಡ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಸಕಲ ಸಿದ್ಧತೆಯೇ ನಡೆದಿದೆ. ಆದ್ದರಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಅ. 3ರಂದು ಬೆಳಿಗ್ಗೆ ಘಂಟೆ 9.00 ಕ್ಕೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್ ಕಾರ್ಮಿಕರ ಹೋರಾಟ ಸಂಯೋಜಿಸಲಾಗಿತ್ತು. ಆದರೆ, ಅದೇ ದಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಾಂಧಿ ಜಯಂತಿ ಮೆರವಣಿಗೆ ನಡೆಯುವ ಕಾರಣ ಮೇಲಧಿಕಾರಿಗಳಿಂದ ನಮಗೆ ಅನುಮತಿ ಸಿಗಲಿಲ್ಲ.
ಈ ಕಾರಣ ನಾವು ದಿನಾಂಕ ಅ. 9ರ ಬೆಳಗ್ಗೆ 10.00 ಘಂಟೆಗೆ ಸರಿಯಾಗಿ ಪ್ರತಿಭಟನಾ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ. ಈ ಹೋರಾಟಕ್ಕೆ ಅಗತ್ಯವಾಗಿ ತಾಲೂಕಿನ ಸಮಸ್ತ ಕಟ್ಟಡ ವಿಭಾಗದ ಸದಸ್ಯರು ಹಾಗೂ ಬಿಎಂಎಸ್ ಪ್ರಮುಖ ಕಾರ್ಯಕರ್ತರು ಭಾಗವಹಿಸುತ್ತಾರೆ.
ಈ ಹೋರಾಟಕ್ಕೆ ಬಿಎಂಎಸ್ ನಿಕಟಪೂರ್ವ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಹಾಗೂ ಬಿಎಂಎಸ್ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ (ಯುವ ವಕೀಲರು) ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.