Ad Widget .

ಯುವ ಸಿನಿಮಾ ಸೆಟ್​ಗೆ ನಿಖಿಲ್ ಭೇಟಿ

ಸಮಗ್ರ ನ್ಯೂಸ್: ಯುವ ರಾಜ್​ಕುಮಾರ್ ಮತ್ತು ನಿಖಿಲ್ ಕುಮಾರಸ್ವಾಮಿ ಪರಸ್ಪರ ಭೇಟಿ ಮಾಡಿ ಸಿನಿಮಾ ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಇಬ್ಬರ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಯುವ ರಾಜ್​ಕುಮಾರ್ ‘ಯುವ’ ಚಿತ್ರದ ಮೂಲಕ ಭರ್ಜರಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಆಗಿದ್ದರೂ ಸಹ ಸ್ಟಾರ್ ನಟರ ಸಿನಿಮಾಗಳಿಗಿರುವಂತೆ ದೊಡ್ಡ ಮಟ್ಟದಲ್ಲಿ ಬಜ್ ಸೃಷ್ಠಿಯಾಗಿದೆ. ಯುವ ರಾಜ್​ಕುಮಾರ್ ಅವರ ಸಿನಿಮಾ ಸೆಟ್​ಗೆ ಸಹ ಒಬ್ಬರ ಹಿಂದೊಬ್ಬರು ಸ್ಟಾರ್ ನಟರು ಭೇಟಿ ನೀಡಿ ಶುಭಾಶಯಗಳನ್ನು ಸಹ ತಿಳಿಸುತ್ತಿದ್ದಾರೆ.

Ad Widget . Ad Widget .

ಕೆಲವು ದಿನಗಳ ಹಿಂದಷ್ಟೆ ‘ಯುವ’ ಸಿನಿಮಾದ ಸೆಟ್​ಗೆ ನಟ ದರ್ಶನ್ ತೂಗುದೀಪ ಭೇಟಿ ನೀಡಿದ್ದರು. ಯುವ ರಾಜ್​ಕುಮಾರ್, ನಿರ್ದೇಶಕ ಸಂತೋಶ್ ಆನಂದ್​ರಾಮ್ ಸಿನಿಮಾದ ನಾಯಕಿ ಸಪ್ತಮಿ ಇನ್ನೂ ಕೆಲವರೊಟ್ಟಿಗೆ ಸಮಯ ಕಳೆಯುವ ಜೊತೆಗೆ ಕೆಲವು ಸಲಹೆಗಳನ್ನು ಸಹ ನೀಡಿದ್ದರು. ಇದೀಗ ಯುವ ರಾಜ್​ಕುಮಾರ್ ಅವರ ಸಿನಿಮಾ ಸೆಟ್​ಗೆ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

Ad Widget . Ad Widget .

ಯುವ ಹಾಗೂ ನಿಖಿಲ್ ಅವರ ಸಿನಿಮಾಗಳು ಪರಸ್ಪರ ಹತ್ತಿರದ ಲೊಕೇಶನ್​ಗಳಲ್ಲೇ ಚಿತ್ರೀಕರಣ ಆಗುತ್ತಿದ್ದ ಕಾರಣ ಸಿನಿಮಾ ಸೆಟ್​ನಲ್ಲಿ ಈ ಇಬ್ಬರೂ ಯುವನಟರು ಪರಸ್ಪರ ಭೇಟಿ ಆಗಿದ್ದಾರೆ. ನಗರದ ಎಚ್.ಎಮ್.ಟಿ ಬಳಿಯ ಸಪೋಟ ತೋಟದ ಬಳಿಯೇ ಈ ಇಬ್ಬರು ನಟರ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಅದೇ ಕಾರಣ ಇಬ್ಬರೂ ನಟರು ಭೇಟಿ ಮಾಡಿ ಪರಸ್ಪರ ಮಾತುಕತೆ ನಡೆಸಿದ್ದಾರೆ.

Leave a Comment

Your email address will not be published. Required fields are marked *