Ad Widget .

ನಾಳೆ(ಅ.08) ಸುಳ್ಯದ ಐವರ್ನಾಡಿನಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ

ಸಮಗ್ರ ನ್ಯೂಸ್: ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ನಾಳೆ(ಅ.08) ಐವರ್ನಾಡಿನ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ, ತುಳು ಜಾನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ, ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟನವರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Ad Widget . Ad Widget .

ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ಸುಳ್ಯ ತಾಲೂಕು ಸಮಿತಿಯ ಮುಖಂಡರಾದ ಆದ ಎನ್. ಟಿ. ವಸಂತ, ಸರಸ್ವತಿ ಕಾಮತ್, ಪ್ರಶಾಂತ್ ಮುರುಳ್ಯ, ಹರೀಶ್ ಕುಮಾರ್ ಹುದೇರಿ, ರಾಜೇಶ್ ನಿಂತಿಕಲ್ಲು, ಚಂದ್ರಶೇಖರ ಕೊಡ್ಲೆ, ಉದಯಕುಮಾರ್ ಕಾರ್ಯತಡ್ಕ, ಸತೀಶ್ ರೈ ಪೋಗ್ಗೋಳಿ, ಕಿಶೋರ್ ರೈ ಮಾಲ ಸೇರಿದಂತೆ ಹಲವಾರು ಮಂದಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Ad Widget . Ad Widget .

ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರುವ ನಿರೀಕ್ಷೆ ಇದ್ದು, ಕಾರ್ಯಕ್ರಮವನ್ನು ‘ಸಮಗ್ರ ಸಮಾಚಾರ’ ಯೂಟ್ಯೂಬ್ ವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸೌಜನ್ಯ ಪರ ದೂರದ ಅಭಿಮಾನಿಗಳು‌ ನೇರಪ್ರಸಾರ ವೀಕ್ಷಿಸಿ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.

Leave a Comment

Your email address will not be published. Required fields are marked *