Ad Widget .

ಸಿಕ್ಕಿಂ ಪ್ರವಾಹ| ಮೃತರ ಸಂಖ್ಯೆ 56ಕ್ಕೆ ಏರಿಕೆ| 100ಕ್ಕೂ ಅಧಿಕ ಮಂದಿ ನಾಪತ್ತೆ

ಸಮಗ್ರ ನ್ಯೂಸ್: ಸಿಕ್ಕಿಂನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದ್ದು, ನೂರಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

Ad Widget . Ad Widget .

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಇದುವರೆಗೆ ಸಿಕ್ಕಿಂನಲ್ಲಿ 26 ಮೃತದೇಹಗಳು, ಪಶ್ಚಿಮ ಬಂಗಾಳದ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ 30 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು 56 ಮೃತದೇಹಗಳು ಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ.

Ad Widget . Ad Widget .

ಇನ್ನು ಸಿಕ್ಕಿಂನಲ್ಲಿ ಸೇನಾ ಸಿಬ್ಬಂದಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರ ಶೋಧಕಾರ್ಯ ಪ್ರಗತಿಯಲ್ಲಿದೆ. 23 ಮಂದಿ ಸೇನಾ ಸಿಬಂದಿಗಳಲ್ಲಿ 16 ಮೃತದೇಹಗಳನ್ನು ವಿಪತ್ತು ನಿರ್ವಹಣಾ ಅಧಿಕಾರಿಗಳು ಗುರುತಿಸಿದ್ದು. ಮಂಗನ್ ಜಿಲ್ಲೆಯಿಂದ ನಾಲ್ಕು, ಗ್ಯಾಂಗ್ಟಾಕ್ನಿಂದ ಆರು ಮತ್ತು ಪಾಕ್ಯೊಂಗ್ ಜಿಲ್ಲೆಯಿಂದ ಏಳು ಭಾರತೀಯ ಸೇನಾ ಸಿಬ್ಬಂದಿ ಸೇರಿದಂತೆ 16 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.

Leave a Comment

Your email address will not be published. Required fields are marked *