ಚೂಂತಾರು ವೇ.ಮೂ. ಲಕ್ಷ್ಮೀನಾರಾಯಣ ಭಟ್ಟರ ಸ್ಮರಣಾರ್ಥ ವೆಂಕಟ್ರಮಣ ಭಟ್ ಮತ್ತು ಪದ್ಮನಾಭ ಭಟ್ಟರಿಗೆ ವೈದಿಕರಿಗೆ ಪುರಸ್ಕಾರ

ಸಮಗ್ರ ನ್ಯೂಸ್:ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಚೂಂತಾರುರವರ ಸ್ಮರಣಾರ್ಥ ವೈದಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಅವರ ಪುಣ್ಯತಿಥಿಯ ದಿನವಾದ ಅ. 3ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಆಶ್ರಯದಲ್ಲಿ ಚೂಂತಾರು ಉಪಾಸನಾದಲ್ಲಿ ನಡೆಯಿತು.

Ad Widget ... ..

ಪ್ರಥಮ ವರ್ಷದ ಪುರಸ್ಕಾರವನ್ನು ಕೊಳ್ತಿಗೆ ಗ್ರಾಮದ ಚೌರ್ಕಾಡು ಮನೆತನದವರಾದ ದರ್ಭೆ ವೆಂಕಟ್ರಮಣ ಭಟ್ ಮತ್ತು ಐವರ್ನಾಡು ದೇವಸ್ಥಾನದ ಅರ್ಚಕ ಪರಕ್ಕಜೆ ಮೂಲದ ಪದ್ಮನಾಭ ಭಟ್ ರಿಗೆ ನೀಡಲಾಯಿತು.
ವಂದಿಸಿದರು. ಪ್ರಶಸ್ತಿಯನ್ನು ರೂ. 5000/- ಮೊತ್ತದೊಂದಿಗೆ, ಸನ್ಮಾನಪತ್ರವನ್ನು ನೀಡಲಾಯಿತು. ನೀರಬಿದಿರೆ ಶಂಕರ ಭಟ್ ಸನ್ಮಾನ ನೆರವೇರಿಸಿದರು.

Ad Widget

ಮಾಧವ ಭಟ್ ಅಭಿನಂದನಾ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಮಹೇಶ್ ಭಟ್ ಚೂಂತಾರು, ಡಾ. ಮುರಲಿಮೋಹನ್ ಚೂಂತಾರು, ನಾಕೇಶ ಚೂಂತಾರು, ದಿ.ಚೂಂತಾರು ಲಕ್ಷ್ಮೀನಾರಾಯಣ ಭಟ್ಟರ ಸೊಸೆಯಂದಿರಾದ ಗಂಗಾಲಕ್ಷ್ಮೀ, ಡಾ. ರಾಜರ್ಷಿ ಮೋಹನ್, ಪುತ್ರಿ ಗೀತಾ, ಹಿರಿಯರಾದ ಆನೆಕಾರ ಗಣಪಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಚೊಕ್ಕಾಡಿ ಶ್ರೀರಾಮ ದೇವಾಲಯಕ್ಕೆ ರೂ. 1ಲಕ್ಷ ಮತ್ತು ಇತರ ಸಂಘಸಂಸ್ಥೆಗಳಿಗೆ ರೂ. 10ಸಾವಿರ ದೇಣಿಗೆ ನೀಡಲಾಯಿತು. ಸನ್ಮಾನ ಸಮಿತಿ ಸಂಚಾಲಕ ಬೆಳಾಲು ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Comment

Your email address will not be published. Required fields are marked *