Ad Widget .

ಜಾತ್ರಾ ಸಮಯದಲ್ಲಿ ಕರ್ಕಶ ಮಾಡುವಂತಹ ಪಿಪಿಗಳನ್ನು ನಿಷೇಧ ಮಾಡುವಂತೆ ಕರವೇ ಒತ್ತಾಯ

ಸಮಗ್ರ ನ್ಯೂಸ್: ಜಾತ್ರಾ ಸಮಯದಲ್ಲಿ ಕರ್ಕಶ ಹಾಗೂ ಕಿರಿಕಿರಿ ಮಾಡುವಂತಹ ಪಿಪಿಗಳನ್ನು ನಿಷೇಧ ಮಾಡುವಂತೆ ಕರವೇ ಒತ್ತಾಯ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳೆದ ಬಾರಿ ಮಡಿಕೇರಿ ದಸರಾದ ಡಿಜೆ ಅಬ್ಬರದ ಮಧ್ಯೆ ಈ ರೀತಿಯ ಕರ್ಕಶ ಧ್ವನಿ ಮಾಡುವ ಪಿಪಿಗಳದೆ ಧ್ವನಿ ಹೆಚ್ಚಾಗಿದೆ. ಈ ಪಿಪಿಗಳ ಶಬ್ದ ಕೇಳಿ ಎಷ್ಟೋ ಜನ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂದಿತ್ತು. ಕೆಲವು ಮಹಿಳೆಯರು ಹಾಗೂ ಮಕ್ಕಳು ಹೋಗುವ ಸಮಯದಲ್ಲಿ ಕೆಲ ಪುಂಡ ಪೋಕರಿಗಳು ಈ ಪೀಪಿಯನ್ನು ಅವರ ಮುಖದ ಭಾಗದಲ್ಲಿ ಹಾಗೂ ಕಿವಿ ಹತ್ತಿರ ಬಂದು ಊದಿ ಅವರಿಗೆ ತೊಂದರೆ ಕೊಡುವ ಕೆಲವು ಸನ್ನಿವೇಶಗಳು ದಸರಾ ಸಮಯದಲ್ಲಿ ಕಂಡು ಬರುತ್ತಿದ್ದವು.

Ad Widget . Ad Widget . Ad Widget .

ಈ ಪಿಪಿಗಳಿಂದ ಜನರಿಗೆ ಎಷ್ಟು ಕಿರಿಕಿರಿ ಉಂಟಾಗುತ್ತಿತ್ತು ಎಂದರೆ ಜನರು ಇದರ ಶಬ್ದವನ್ನು ಕೇಳಿದರೆ ಇವರಿಗೆ ರೋಗ ಬರುವುದಿಲ್ಲವೆ? ಎಂದು ಹೇಳಿಕೊಂಡು ಮುಂದೆ ಸಾಗುತ್ತಿದ್ದರು. ಈ ರೀತಿಯ ಜನಜಂಗುಳಿಯ ಮಧ್ಯದಲ್ಲಿ ಈ ರೀತಿಯ ಕರ್ಕಶ ಶಬ್ದ ಮಾಡುವ ಪಿಪಿಗಳ ಅವಶ್ಯಕತೆ ಇದೆಯೇ? ದಸರಾ ಸಮಿತಿ ಕೊಡಗು ಜಿಲ್ಲಾ ಆರಕ್ಷಕ ಅಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ದಸರಾ ಹಾಗೂ ಜಾತ್ರಾ ಸಮಯದಲ್ಲಿ ಈ ರೀತಿಯ ಜನರಿಗೆ ಕಿರಿಕಿರಿ ಉಂಟುಮಾಡುವ ಹಾಗೂ ಕರ್ಕಶ ಶಬ್ದ ಮಾಡುವಂತಹ ಪಿಪಿ ಹಾಗೂ ಇನ್ನಿತರ ಇದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಮಾರಾಟ ಮಾಡದಂತೆ ಅವುಗಳನ್ನು ನಿಷೇಧ ಮಾಡಿ ಅವುಗಳುನ್ನು ಜಾತ್ರಾ ಹಾಗೂ ದಸರಾ ಸಮಯದಲ್ಲಿ ಮಾರಾಟ ಮಾಡದಂತೆ ಆದೇಶ ಮಾಡಬೇಕು ದಸರಾ ಸಮಿತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸಭೆಗಳನ್ನು ಕರೆದು, ಈ ನಿರ್ಧಾರವನ್ನು ತೆಗೆದುಕೊಂಡು ದಸರಾ ಹಾಗೂ ಜಾತ್ರಾ ಸಮಯದಲ್ಲಿ ಈ ರೀತಿ ಪಿಪಿ ಮಾರಾಟ ಮಾಡುವವರನ್ನು ನಗರದೊಳಗೆ ಬಿಡದಂತೆ ನಿರ್ಧಾರ ತೆಗೆದುಕೊಳ್ಳಬೇಕು. ಯಾರಾದರೂ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಅವರಿಗೆ ದಂಡ ವಿಧಿಸುವಂತಾಗಬೇಕು.

ಈ ರೀತಿಯ ಕಿರಿಕಿರಿ ಹಾಗೂ ಕರ್ಕಶ ಶಬ್ದ ಮಾಡುವ ಪಿಪಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕಾಗಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಹಿತರಕ್ಷಣಾ ವೇದಿಕೆಯ ವತಿಯಿಂದ ಸಂಬಂಧಪಟ್ಟವರಲ್ಲಿ ಮನವಿ ಸಲ್ಲಿಸಿದರು.

Leave a Comment

Your email address will not be published. Required fields are marked *