Ad Widget .

“ಬಸ್ಸಿಗೆ ಬೆಂಕಿ ಹಾಕ್ತೇನೆ, ವಿಧಾನ ಸೌಧಕ್ಕೆ ಕಲ್ಲೆಸಿತೇನೆ”| ಪುನಿತ್ ಕೆರೆಹಳ್ಳಿ ವಿರುದ್ದ ಮತ್ತೆ ದೂರು ದಾಖಲು

ಸಮಗ್ರ ನ್ಯೂಸ್: ”ರಾಜ್ಯ ಸರಕಾರ ನನ್ನ ಮನವಿ ಸ್ವೀಕರಿಸದಿದ್ದರೆ ಬಸ್ಸಿಗೆ ಬೆಂಕಿ ಹಾಕುತ್ತೇನೆ, ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ” ಎಂದು ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಹೇಳಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೆಂಗಳೂರು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Ad Widget . Ad Widget .

ರಾಜ್ಯ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಪೊಲೀಸರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ಪುತ್ತೂರು‌ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರ ನಿಯೋಗದೊಂದಿಗೆ ಮಾತನಾಡುತ್ತಿದ್ದ ಪುನೀತ್‌, ”ನಾನು ನಿಮಗೆ ನಿಮ್ಮ ತಮ್ಮನಾಗಿ ಬೇಕು ಅಂದ್ರೆ, ಕಾಂಗ್ರೆಸ್‌ ಸರಕಾರದ ಯಾವುದಾದರೂ ಪ್ರತಿನಿಧಿ ನನ್ನನ್ನು ಭೇಟಿಯಾಗಿ, ನನ್ನ ಮನವಿಯನ್ನು ಸೀಕರಿಸಬೇಕು. ಅವರು ಬರದೇ ಇದ್ದರೆ ಬಸ್ಸಿಗೆ ಬೆಂಕಿ ಹಾಕುವ… ಪೊಲೀಸರನ್ನು ಜಾಗ ಬಿಡಲಿಕ್ಕೆ ಹೇಳಿ, ನಾನು ಹೋಗ್ತೇನೆ. ನನ್ನನ್ನು ಇಲ್ಲಿಂದ ಬಿಡುಗಡೆಗೊಳಿಸಿದರೆ ಮತ್ತೆ ಸತ್ಯಾಗ್ರಹ ಏಕೆ ಮಾಡಲಿ? ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ” ಎಂದು ಪುನೀತ್ ಕೆರೆಹಳ್ಳಿ ಹೇಳಿರುವ ವೀಡಿಯೊ ವೈರಲ್ ಆಗಿದೆ.

Ad Widget . Ad Widget .

ಹಿಂದುತ್ವ ಸಂಘಟನೆಯ ನಾಯಕನೆಂದು ಹೇಳಿಕೊಳ್ಳುವ ಪುನೀತ್ ಕೆರೆಹಳ್ಳಿ, ಈಗಾಗಲೇ ಅನೇಕ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಆದರೆ ಈತ ಈಗ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾನೆ. ಈತನಿಗೆ ಅನೇಕ ಹಿಂದುತ್ವ ಸಂಘಟನೆಗಳ ನಾಯಕರು ಹಾಗೂ ಬಿಜೆಪಿ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಎಲ್ಲರ ಎದುರಿಗೆ ಬಹಿರಂಗವಾಗಿ ”ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ ಹಾಗೂ ಬಸ್ಸಿಗೆ ಬೆಂಕಿ ಹಚ್ಚುತ್ತೇನೆ” ಎಂದು ಕಾನೂನು ಸುವ್ಯವಸ್ಥೆಗೆ ಬಹಿರಂಗ ಸವಾಲು ಹಾಕಿದ್ದಾರೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

”ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ ಎಂಬುವ ಪದ ಬಳಿಸಿರುವುದೇ ಅತ್ಯಂತ ಕಾನೂನು ವಿರೋಧಿ ಕೃತ್ಯ. ಆತನ ಹೇಳಿಕೆಯ ಹಿನ್ನೆಲೆಯಲ್ಲಿ ಈ ಕೂಡಲೇ ಪ್ರಕರಣ ದಾಖಲಿಸಿಕೊಂಡು ಅವನಿಗೆ ಬೆಂಬಲ ವ್ಯಕ್ತಪಡಿಸಿರುವ ವ್ಯಕ್ತಿಗಳ ವಿರುದ್ಧವೂ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *