Ad Widget .

ಸುಳ್ಯ: ವಿದ್ಯಾಮಾತಾ ಅಕಾಡಮಿಯಲ್ಲಿ ಉಚಿತ ತರಬೇತಿ ಕಾರ್ಯಗಾರ ನೋಂದಣಿ ಪ್ರಾರಂಭ

ಸಮಗ್ರ ನ್ಯೂಸ್: ವಿದ್ಯಾಭ್ಯಾಸದ ನಂತರ ನಾವೇನು ಮಾಡಬೇಕು? ಎಂಬುದಕ್ಕೆ ಉತ್ತರವಾಗಿ ಇದೇ ಬರುವ ದಿನಾಂಕ ಸೆ. 15ರ ಭಾನುವಾರದಂದು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 3:30ರ ವರೆಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್, ಎಸ್.ಡಿ .ಎ ಮತ್ತು ಎಫ್.ಡಿ.ಎ ಇತ್ಯಾದಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡುವುದು ಹೇಗೆ ಮತ್ತು ನೇಮಕಾತಿಗಳ ವಿವರ, ಪ್ರಶ್ನೆಪತ್ರಿಕೆಗಳ ಸ್ವರೂಪ – ಪರೀಕ್ಷೆಗಳು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ತನ್ನ ಸುಳ್ಯ ಶಾಖೆಯಲ್ಲಿ ಉಚಿತ ಮಾಹಿತಿ ಕಾರ್ಯಗಾರದ ಮೂಲಕ ನೀಡಲಿದೆ.

Ad Widget . Ad Widget .

ಅಲ್ಲದೇ ಖಾಸಗಿ ಉದ್ಯೋಗಗಳಿಗೆ ಪ್ರಯತ್ನಿಸುವವರಿಗಾಗಿ ಕಂಪನಿಗಳ ನೇರ ಸಂದರ್ಶನವನ್ನು ಎದುರಿಸುವ ಬಗ್ಗೆ ಉದ್ಯೋಗ ಕೌಶಲ್ಯತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಾರ್ಯಾಗಾರದಲ್ಲಿ ನೀಡಲಾಗುವುದು. ವಿದ್ಯಾಮಾತಾ ಅಕಾಡೆಮಿಯು ಸುಳ್ಯದಲ್ಲಿ ನೂತನವಾಗಿ ಶಾಖೆಯನ್ನು ಪ್ರಾರಂಭಿಸಿದ್ದು ಬ್ಯಾಂಕಿಂಗ್, ಪೊಲೀಸ್, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಿಗೆ ನೂರಾರು ಅಭ್ಯರ್ಥಿಗಳು ತರಬೇತಿಯನ್ನು ಪಡೆದು ಸೇರಿರುವುದನ್ನು ಸ್ಮರಿಸಿಕೊಳ್ಳಬಹುದು. ಇದೀಗ ಸುಳ್ಯ, ಕೊಡಗು, ಕಾಸರಗೋಡು ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಖಾಸಗಿ ಉದ್ಯೋಗಗಳಿಗೆ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕೆಂಬ ಯೋಜನೆಯೊಂದಿಗೆ ಉಚಿತ ಕಾರ್ಯಗಾರವನ್ನು ಆಯೋಜಿಸಲಾಗಿದೆ.

Ad Widget . Ad Widget .

ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು ಸೆ. 12ರ ಒಳಗಾಗಿ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ (ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದಕ್ಷಿಣ ಕನ್ನಡ) ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು.
ಇಲ್ಲವೇ, 9448527606 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

Leave a Comment

Your email address will not be published. Required fields are marked *