Ad Widget .

ಪ್ರಯಾಣಿಕರ ಒತ್ತಾಯದ ಮೇರೆಗೆ KSRTCಯಿಂದ ‘ದಸರಾ ದರ್ಶಿನಿ’

ಸಮಗ್ರ ನ್ಯೂಸ್: ದಸರಾ ಹಬ್ಬದ ಸಮಯದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತಿರಿಗೆ ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮವು ದಸರಾ ದೇವಸ್ಥಾನ ದರ್ಶನ ಪ್ಯಾಕೇಜ್ ಘೋಷಿಸಿದೆ. ಕಳೆದ ವರ್ಷ ಮಂಗಳೂರು ವಿಭಾಗದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದ್ದ ಪ್ಯಾಕೇಜ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಕಾರಣ ಈ ಬಾರಿಯೂ ಪ್ಯಾಕೇಜ್ ಇರಲಿದೆ.

Ad Widget . Ad Widget .

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರಾರಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ನರ್ಮ್ ನಗರ ಹಾಗೂ ನಗರ ವೋಲ್ವೋ ಸಾರಿಗೆ ವಾಹನಗಳೊಂದಿಗೆ ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆ ನಡೆಸಲಿದೆ. ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು ಮಾರ್ಗದಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸವ ಅ. 15ರಿಂದ 24 ರವರೆಗೆ ಇರಲಿದೆ. www.ksrtc.in ನಲ್ಲಿ ಮುಂಗದ ಆಸನ ಕಾಯ್ದಿರಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ.

Ad Widget . Ad Widget .

ಪ್ಯಾಕೇಜ್ -1 ಮಂಗಳೂರು ದಸರಾ ದರ್ಶನ (ಈ ಪ್ಯಾಕೇಜ್ ಪ್ರವಾಸಕ್ಕೆ ನರ್ಮ್ ಬಸ್ ನಲ್ಲಿ ಪ್ರತಿ ಪ್ರಯಾಣಿಕರಿಗೆ 400 ರೂ ಇದ್ದರೆ (ಊಟ, ಉಪಹಾರ ಹೊರತುಪಡಿಸಿ), 6ರಿಂದ 12 ವರ್ಷವರೆಗಿನ ಮಕ್ಕಳಿಗೆ ತಲಾ 300 ರೂ ನಿಗದಿ ಪಡಿಸಲಾಗಿದೆ. ಇದೇ ಪ್ಯಾಕೇಜ್ ನ ನಗರ ವೋಲ್ವೊ ಬಸ್ ನಲ್ಲಿ ವಯಸ್ಕರಿಗೆ 500 ರೂ ಮತ್ತು ಮಕ್ಕಳಿಗೆ 400 ರೂ ನಿಗದಿ ಪಡಿಸಲಾಗಿದೆ.

ಪ್ಯಾಕೇಜ್ 2: ಮಂಗಳೂರು- ಮಡಿಕೇರಿ (ಕರ್ನಾಟಕ ಸಾರಿಗೆ ವಯಸ್ಕರಿಗೆ 500 ರೂ ಮತ್ತು ಮಕ್ಕಳಿಗೆ 400 ರೂ)

ಪ್ಯಾಕೇಜ್ 3: ಮಂಗಳೂರು- ಕೊಲ್ಲೂರು (ಕರ್ನಾಟಕ ಸಾರಿಗೆ ವಯಸ್ಕರಿಗೆ 500 ರೂ ಮತ್ತು ಮಕ್ಕಳಿಗೆ 400 ರೂ)

ಪ್ಯಾಕೇಜ್ 4: ಪಂಚದುರ್ಗಾ ದರ್ಶನ (ನರ್ಮ್ ನಗರ ಸಾರಿಗೆ ವಯಸ್ಕರಿಗೆ 400 ರೂ ಮತ್ತು ಮಕ್ಕಳಿಗೆ 300 ರೂ)

ಉಚಿತ ಪ್ರಯಾಣದ ಅವಕಾಶವಿಲ್ಲ!
ಶಕ್ತಿ ಯೋಜನೆ ಮೂಲಕ ಕೆಎಸ್ಸಾರ್ಟಿಸಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದೆ. ಆದರೆ ದಸರಾ ಪ್ಯಾಕೇಜ್‌ ಸಹಿತ ವಿಶೇಷ ಪ್ಯಾಕೇಜ್‌ ರೂಪಿಸುವ ವೇಳೆ ಎಲ್ಲರೂ ದರ ನೀಡಿಯೇ ಪ್ರಯಾಣಿಸಬೇಕಾಗುತ್ತದೆ. ಕಳೆದ ಬಾರಿಯ ಪ್ಯಾಕೇಜ್‌ನಲ್ಲಿಯೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸಿ ಈ ಪ್ಯಾಕೇಜ್‌ನ ಸದುಪಯೋಗ ಮಾಡಿದ್ದರು.

Leave a Comment

Your email address will not be published. Required fields are marked *