ಸಮಗ್ರ ನ್ಯೂಸ್: ಭಾರತೀಯರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಹೇಗೆ ಪ್ರಭಾವ ಬೀರುತ್ತಿದಿಯೋ, ಅದೇ ರೀತಿ ಭಾರತೀಯ ಸಂಪ್ರದಾಯ, ಪದ್ದತಿಗಳು ವಿದೇಶಿಗರ ಮೇಲೆ ಪ್ರಭಾವ ಬೀರುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ರಷ್ಯಾದ 3 ಜೋಡಿಗಳು ತಮ್ಮ ದೇಶದಿಂದ ಬಂದು ಇಲ್ಲಿ, ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಹರಿದ್ವಾರದ ಆಶ್ರಮದಲ್ಲಿ ನಡೆದ ವಿವಾಹ, ಎಲ್ಲಾ ಸಂಪ್ರದಾಯಗಳನ್ನು ಅನುಸರಿಸಲಾಯಿತು. ಕೆಂಪು ಶೆರ್ವಾನಿ ಮತ್ತು ಪೇಟವನ್ನು ಧರಿಸಿದ ಮೂವರು ವರಗಳನ್ನು ಮೆರವಣಿಗೆ ಮೂಲಕ ಮಂಟಪಕ್ಕೆ ಕರೆತರಲಾಯಿತು. ವಧು-ವರರು ಮದುವೆ ಮೆರವಣಿಗೆಯೊಂದಿಗೆ ದೇವರ ಗುಡಿಗೆ ತೆರಳಿ ಆಶೀರ್ವಾದ ಪಡೆದು, ವೇದಿಕೆ ಏರಿ ಪರಸ್ಪರ ಹಾರ ಹಾಕಿದರು. ಇಷ್ಟೇ ಅಲ್ಲ, ಅಗ್ನಿಸಾಕ್ಷಿಯಾಗಿ ವೇದ ಮಂತ್ರಗಳೊಂದಿಗೆ ಏಳು ಸುತ್ತು ಹಾಕಿದ ರಷ್ಯಾದ ಜೋಡಿಗಳು ತಮ್ಮ ಜೀವನದುದ್ದಕ್ಕೂ ಪರಸ್ಪರ ಜೊತೆ ಇರುವುದಾಗಿ ಪ್ರಮಾಣ ಮಾಡಿದರು.
ಕುಟುಂಬದ ಅನುಪಸ್ಥಿತಿಯಲ್ಲಿ ಈ ವಿವಾವ ಭಾರತದ ಸಂಪ್ರದಾಯದಂತೆ ನೆರವೇರಿತು. ಪಾಶ್ಚಿಮಾತ್ಯ ಪದ್ಧತಿಯಿಂದ ಬೇಸರಗೊಂಡು ಭಾರತೀಯ ಸಂಸ್ಕೃತಿ, ಇಲ್ಲಿನ ಅವಿಭಕ್ತ ಕುಟುಂಬ ವ್ಯವಸ್ಥೆಯಿಂದ ಪ್ರಭಾವಿತರಾಗಿ ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.