Ad Widget .

ಮುದ್ರಣ ಸ್ಥಗಿತಗೊಳಿಸಿದ “ಮಂಗಳ”|ಅಂತ್ಯ ಕಂಡ ನಾಲ್ಕು ದಶಕಗಳ ಪತ್ರಿಕಾ ಪಯಣ

ಸಮಗ್ರ ನ್ಯೂಸ್: ನಾಲ್ಕು ದಶಕಗಳ ಹಲವಾರು ಓದುಗರ ಮನಗೆದ್ದ ವಾರಪತ್ರಿಕೆ ‘ಮಂಗಳ’ ತನ್ನ ಮುದ್ರಣವನ್ನು ಸ್ಥಗಿತಗೊಳಿಸಿದೆ. ಇದು ಹಲವಾರು ಪತ್ರಿಕಾ ಪ್ರಿಯರ ಮನಸ್ಸಿಗೆ ನೋವುಂಟು ಮಾಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳೆದ ನಲವತ್ತು ವರ್ಷಗಳಿಂದ ಹಲವಾರು ಜನಪ್ರಿಯ ಧಾರಾವಾಹಿಗಳ ತನ್ನ ಪತ್ರಿಕೆಯಲ್ಲಿ ಪ್ರಕಟ ಮಾಡುವ ಮೂಲಕ ಮಂಗಳ ವಾರಪತ್ರಿಕೆ ಯುವಜನರ ಮನಸ್ಸನ್ನು ಗೆದ್ದಿತ್ತು. ಓದಿನ ಹುಚ್ಚು ಹೆಚ್ಚಿಸುವಲ್ಲಿ ಮಂಗಳ ಬಹುಮುಖ್ಯ ಪಾತ್ರ ವಹಿಸಿತ್ತು.

Ad Widget . Ad Widget . Ad Widget .

ಕೊರೋನಾ ಕಾಲದ ನಂತರ ವೆಬ್ ನ್ಯೂಸ್ ಗಳು ಹೆಚ್ಚಿದ ಪರಿಣಾಮ ಮುದ್ರಣ ಮಾಧ್ಯಮ ದುಬಾರಿಯಾಗಿ ಪರಿಣಮಿಸಿದ್ದು, ಇದು ಮಂಗಳ ವಾರಪತ್ರಿಕೆಗೆ ಕೂಡ ಪರಿಣಾಮವನ್ನು ಉಂಟು ಮಾಡಿತು.

ಹೀಗಾಗಿ ಮಂಗಳ ವಾರಪತ್ರಿಕೆಯ ಮುದ್ರಣವನ್ನು ಸ್ಥಗಿತಗೊಳಿಸಿರುವುದಾಗಿ ವ್ಯವಸ್ಥಾಪಕರು ಘೋಷಿಸಿದ್ದಾರೆ. ಚಂದಾದಾರರ ಹಣವನ್ನು ಹಿಂತಿರುಗಿಸುವುದಾಗಿ ಅವರು ತಿಳಿಸಿದ್ದಾರೆ.

ಬದಲಾವಣೆ ಜಗದ ನಿಯಮ. ಮುದ್ರಣ ಮಾಧ್ಯಮಗಳ ಓದುಗರು ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ವಾರಕ್ಕೊಮ್ಮೆ ಪ್ರಕಟವಾಗುವ ಸಂಚಿಕೆಗಳಿಗೆ ಓದುಗರನ್ನು ಹುಡುಕುವುದೂ ಸವಾಲು. ಜನಪ್ರಿಯ ಪಬ್ಲಿಕೇಶನ್​​​ಗಳೇ ದೈನಿಕಗಳೊಂದಿಗೆ ವಾರಪತ್ರಿಕೆಗಳನ್ನು ಒದಗಿಸಲು ಹರಸಾಹಸಪಡುತ್ತಿರುವ ಹೊತ್ತಿನಲ್ಲಿ 40 ವರ್ಷ ಪ್ರಕಟಣೆ ಹೊರಡಿಸಿದ್ದ ಮಂಗಳದ ಕನ್ನಡ ಆವೃತ್ತಿ ಮುದ್ರಣಕ್ಕೆ ಮಂಗಳ ಹಾಡಿದೆ. ಇದನ್ನು ಸಂಪಾದಕ ಎನ್ನೇಬಿ ಮೊಗ್ರಾಲ್ ಪುತ್ತೂರು ಅಧಿಕೃತವಾಗಿಯೇ ಸಾಮಾಜಿಕ ಜಾಲತಾಣವಾದ ಫೇಸ್​​​ಬುಕ್​​ನಲ್ಲಿ ಪ್ರಕಟಿಸಿದ್ದಾರೆ.

ದಕ್ಷಿಣ ಕನ್ನಡವಷ್ಟೇ ಅಲ್ಲ, ರಾಜ್ಯದಾದ್ಯಂತ ಹಲವು ಕವಿಗಳು, ಲೇಖಕರು, ಕತೆಗಾರರನ್ನು ಬೆಳಕಿಗೆ ತಂದ ಕೀರ್ತಿ ಈ ವಾರಪತ್ರಿಕೆಗೆ ಸಲ್ಲುತ್ತದೆ. ಇದರ ಮಕ್ಕಳ ಸಂಚಿಕೆ ‘ಬಾಲಮಂಗಳ’ ಕಣ್ಮುಚ್ಚಿ ವರ್ಷಗಳೇ ಆದವು. ಕೊರೊನೋತ್ತರದ ಬೆಳವಣಿಗೆಯಲ್ಲಿ ಕಣ್ಮುಚ್ಚುತ್ತಿರುವ ವಾರಪತ್ರಿಕೆಗಳ ಸಾಲಿನಲ್ಲಿ ಮಂಗಳ ಪ್ರಮುಖವಾದುದು. ಹೀಗೆಂದು ಅದರ ಅಭಿಮಾನಿ ಓದುಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ದಶಕಗಳ ಹಿಂದೆ ಕನ್ನಡ ಮಾತನಾಡುವ ಕರಾವಳಿಯ ಜನರಿಗೆ ಓದಲು ಕಲಿಸಿದ ಪತ್ರಿಕೆ ಇದು.

ಕೇರಳಕ್ಕೆ ಸೇರಿಕೊಂಡರೂ ಮಲಯಾಳದ ಪ್ರಭಾವದ ನಡುವೆ ಕನ್ನಡವನ್ನು ಉಳಿಸುವ ಕೆಲಸವನ್ನು ಮಂಗಳ ಮಾಡಿತ್ತು ಎಂದರೆ ಅತಿಶಯೋಕ್ತಿಯೇನೂ ಅಲ್ಲ. 80-90ರ ದಶಕದಲ್ಲಿ ”ಮಂಗಳ ಕಲಾ ಸಾಹಿತ್ಯ ವೇದಿಕೆ”ಗಳು ಸೃಷ್ಟಿಯಾಗಿದ್ದವು. ಅವು ಗ್ರಾಮ ಗ್ರಾಮಗಳಲ್ಲಿ ಕವಿಗೋಷ್ಠಿ, ಕತೆ, ಕವನ ಬರೆಯುವ ಕಮ್ಮಟ ಏರ್ಪಡಿಸುವ ಮೂಲಕ ಪುಸ್ತಕ ಓದುವ ವರ್ಗವನ್ನು ಸೃಷ್ಟಿಸಿದವು. ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕೆಲಸವನ್ನು ಈ ಪತ್ರಿಕೆ ಮಾಡಿತ್ತು.

ಮಂಗಳೂರಿನ ಹಂಪನಕಟ್ಟೆಯ ಬೀದಿ ಬದಿಯ ಫುಟ್ಪಾತ್ ಒಂದರಲ್ಲೇ ವಾರಕ್ಕೆ ಸುಮಾರು 10 ಸಾವಿರ ಪ್ರತಿಗಳು ಮಾರಾಟವಾಗುತ್ತಿತ್ತು ಎಂದರೆ ಇದರ ಜನಪ್ರಿಯತೆಯನ್ನು ಊಹಿಸಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಅತ್ಯಧಿಕ ಪ್ರಸರಣ ಇತ್ತು. ಮಧ್ಯಮ ವರ್ಗದ ಜನರ ಅಭಿರುಚಿಗೆ ಹೇಳಿ ಮಾಡಿಸಿದಂತೆ ಪತ್ರಿಕೆ ರೂಪುಗೊಳ್ಳುತ್ತಿತ್ತು. ಅನೇಕ ಬರಹಗಾರರಿಗೆ ಇದು ಮೊದಲ ಮೆಟ್ಟಿಲಾದ ಪತ್ರಿಕೆ. ತಿದ್ದಿ ಬರೆಸಿ ಬೆಳೆಸಿದ ಪತ್ರಿಕೆ ಎನ್ನುತ್ತಾರೆ ಕತೆಗಾರ ವಿವೇಕಾನಂದ ಕಾಮತ್.

Leave a Comment

Your email address will not be published. Required fields are marked *