ಸಮಗ್ರ ನ್ಯೂಸ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜನ್ಮ ದಿನಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಇಡೀ ಫ್ಯಾನ್ಸ್ ಖುಷಿ ಆಗಿದ್ದಾರೆ. ಮಾರ್ಟಿನ್ ಡೈರೆಕ್ಟರ್ ಎ.ಪಿ.ಅರ್ಜುನ್ ಕೂಡ ತಮ್ಮ ಕಡೆಯಿಂದಲೂ ಒಂದು ಸಿಡಿಪಿ ಮಾಡಿ ಹಾಕಿದ್ದಾರೆ. ಇದರ ಜೊತೆಗೆ ಜೋಗಿ ಪ್ರೇಮ್ ಕೂಡ ಒಂದು ಪ್ಲಾನ್ ಮಾಡಿದ್ದಾರೆ. ಈ ಪ್ಲಾನ್ ಕೆಡಿ ಸಿನಿಮಾಕ್ಕೆ ಸಂಬಂಧಿಸಿದ್ದೇ ಆಗಿದೆ. ಈ ಮೂಲಕ ತಮ್ಮ ನಾಯಕ ನಟನಿಗೆ ಜೋಗಿ ಪ್ರೇಮ್ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.
ಜೋಗಿ ಪ್ರೇಮ್ ತಮ್ಮ ಚಿತ್ರದ ನಾಯಕ ಧ್ರುವ ಸರ್ಜಾ ಜನ್ಮ ದಿನಕ್ಕೆ ಸ್ಪೆಷಲ್ ಗಿಫ್ಟ್ ಅನ್ನ ಪೋಸ್ಟರ್ ರೂಪದಲ್ಲಿಯೇ ಕೊಟ್ಟಿದ್ದಾರೆ. ಕೆಡಿ ಚಿತ್ರದ ಇಲ್ಲಿವರೆಗಿನ ಪೋಸ್ಟರ್ ಗಿಂತಲೂ ಈಗೀನ ಈ ಪೋಸ್ಟರ್ ಸ್ಪೆಷಲ್ ಆಗಿದೆ. ಜೋಗಿ ಪ್ರೇಮ್ ಅವರ ಈ ಒಂದು ಕೆಡಿ ಸಿನಿಮಾದ ಪೋಸ್ಟರ್‌ನಲ್ಲಿ ಧ್ರುವ ಸರ್ಜಾ ಕ್ಯಾರೆಕ್ಟರ್‌ನ ಇನ್ನಷ್ಟು ವಿಷಯ ರಿವೀಲ್ ಆಗಿದೆ. ರೆಟ್ರೋ ದಿನಗಳ ಈ ಚಿತ್ರದಲ್ಲಿ ಧ್ರುವ ಸರ್ಜಾ ಬಳಸೋ ಬೈಕ್ ಯಾವುದು ಅನ್ನುವ ವಿಚಾರವೂ ಇದೇ ಪೋಸ್ಟರ್‌ನಲ್ಲಿ ರಿವೀಲ್ ಆಗಿದೆ.
ಪ್ರೇಮ್ ಮತ್ತು ಧ್ರುವ ಸರ್ಜಾ ಈ ಮೂಲಕ ಫಸ್ಟ್ ಟೈಮ್ ಸಿನಿಮಾ ಮಾಡುತ್ತಿದ್ದಾರೆ. ಈ ಒಂದು ಚಿತ್ರಕ್ಕಾಗಿಯೇ ಧ್ರುವ ಸರ್ಜಾ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ರೆಟ್ರೋ ಫೀಲ್‌ನಲ್ಲಿಯೇ ಕಾಣಿಸಬೇಕು ಅಂತಲೇ ಲಾಂಗ್ ಹೇರ್ ಸ್ಟೈಲ್‌ನಲ್ಲಿಯೇ ಕಾಣಿಸುತ್ತಿದ್ದಾರೆ.