Ad Widget .

ಧರ್ಮಸ್ಥಳ: ರೈಸ್ ಆಯಿಲ್ ಪ್ಲೋರ್ ಮಿಲ್ಸ್ ನ ಕಾರ್ಮಿಕ ಶವವಾಗಿ ಪತ್ತೆ| ತಿಂಗಳ ಹಿಂದೆ ನಡೆದ ಸಾವಿನ ಸುತ್ತ ಅನುಮಾನದ ಹುತ್ತ

ಸಮಗ್ರ ನ್ಯೂಸ್: ಧರ್ಮಸ್ಥಳದ ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣಪ್ಪ ಸಫಲ್ಯ (60ವ) ಎಂಬವರ ಮೃತದೇಹ ಅ.3 ರಂದು ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿಸಿಟ್ಟಿರುವ ದೊಡ್ಡ ಗಾತ್ರದ ಸ್ಟೀಲ್ ಪಾತ್ರೆಯ ಒಳಗೆ ನೀರಿನಲ್ಲಿ ಕವುಚಿ ತೇಲಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget . Ad Widget . Ad Widget .

ಈ ಬಗ್ಗೆ ಮೃತರ ಪುತ್ರ ವಿನಯ್ ಕುಮಾರ್ ರವರ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಕೃಷ್ಣಪ್ಪ ಸಫಲ್ಯ ರವರು ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಪ್ರತಿನಿತ್ಯ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದರು. ಅ.3 ರಂದು ಬೆಳಿಗ್ಗೆ ಸದರಿ ರೈಸ್ ಮಿಲ್ಲಿಗೆ ಹೋದವರು ಮಧ್ಯಾಹ್ನ ಮನೆಗೆ ಬಂದಿರಲಿಲ್ಲ,
ಸಂಜೆ ಅಲ್ಲಿಂದ ಬಂದ ಮಾಹಿತಿಯಂತೆ ಹೋಗಿ ನೋಡಲಾಗಿ ಸ್ಟೀಲ್ ಪಾತ್ರೆಯ ಮೇಲ್ಭಾಗವನ್ನು ಅರ್ಧದಷ್ಟು ಸಿಮೆಂಟ್ ಶೀಟ್ ನ್ನು ಮುಚ್ಚಿದ್ದು, ಕೃಷ್ಣಪ್ಪ ಸಫಲ್ಯ ರವರು ಸ್ಟೀಲ್ನ ದೊಡ್ಡ ಗಾತ್ರದ ಪಾತ್ರೆಯಲ್ಲಿ ತುಂಬಿಸಿಟ್ಟಿದ್ದ ನೀರಿಗೆ ಇಳಿದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಂತೆ ಕಂಡುಬಂದಿದೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ಸಂಖ್ಯೆ 65/2023 ಕಲಂ: 174 (iii)& (iv) ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Ad Widget . Ad Widget .

ತಿಂಗಳ ಹಿಂದೆ ನಡೆದ ಸಾವಿನ ಹಿಂದೆ ಇದೀಗ ಅನುಮಾನ ಭುಗಿಲೆದ್ದಿದ್ದು, ತನಿಖೆಯಿಂದಷ್ಟೇ ನಿಜಾಂಶ ಬಯಲಾಗಬೇಕಿದೆ.

Leave a Comment

Your email address will not be published. Required fields are marked *