Ad Widget .

ಏಷ್ಯನ್ ಗೇಮ್ಸ್; ಜಾವಲಿನ್ ನಲ್ಲಿ ನೀರಜ್ ಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್

ಸಮಗ್ರ ನ್ಯೂಸ್: ಏಷ್ಯನ್ ಗೇಮ್ಸ್ 2023ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಮತ್ತು ಕಿಶೋರ್ ಜೇನಾ ಬೆಳ್ಳಿ ಪದಕ ಜಯಿಸಿದ್ದಾರೆ.

Ad Widget . Ad Widget .

ಜಾವೆಲಿನ್ ವಿಭಾಗದಲ್ಲಿ ಚಿನ್ನ ತಮ್ಮ ಬಳಿಯೇ ಉಳಿಸಿರುವ ನೀರಜ್, 88.88 ಮೀಟರ್ ದೂರ ಜಾವೆಲಿನ್ ಎಸೆದು ಗಮನ ಸೆಳೆದಿದ್ದಾರೆ.

Ad Widget . Ad Widget .

ನೀರಜ್‌ಗೆ ತಕ್ಕ ಪೈಪೋಟಿ ಒಡ್ಡಿದ ಭಾರತೀಯವರೇ ಆದ ಕಿಶೋರ್ ಜೇನಾ 87.54 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕಕ್ಕೆ ಅರ್ಹರಾದರು.

ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವೀರ ನೀರಜ್, 2018ರ ಏಷ್ಯನ್ ಕ್ರೀಡಾಕೂಟದಲ್ಲೂ ಚಿನ್ನ ಜಯಿಸಿದ್ದರು.

Leave a Comment

Your email address will not be published. Required fields are marked *