ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್| ಅ.5ರಿಂದ 13ರರವರೆಗೆ ತಿದ್ದುಪಡಿಗೆ ಅವಕಾಶ

ಸಮಗ್ರ ನ್ಯೂಸ್: ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ ಆಹಾರ ಇಲಾಖೆ ಗುಡ್​ ನ್ಯೂಸ್​ ನೀಡಿದೆ. ಮತ್ತೆ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದ ಆಹಾರ ಇಲಾಖೆ ಆದೇಶ ನೀಡಿದೆ. ಅ.5ರಿಂದ 13ರವರೆಗೆ ಮತ್ತೆ ತಿದ್ದುಪಡಿಗೆ ಅವಕಾಶ ನೀಡಿದೆ.

Ad Widget ... ..

ಆದರೆ, ರಾಜ್ಯದ ಎಲ್ಲಾ ಭಾಗದಲ್ಲಿ ಒಮ್ಮೆಗೆ ಅವಕಾಶ ನೀಡಿದೆ ವಿಭಾಗವಾರು ತಲಾ ಮೂರು ದಿನಗಳ ಕಾಲ ರೇಷನ್​ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಘ್ಯಾನೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ.

Ad Widget

ಮೊದಲ ವಲಯದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಎಪಿಎಲ್​, ಬಿಪಿಎಲ್​ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 5ರಿಂದ 7ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ವಿಶೇಷ ಎಂದರೇ ಬೆಳಗ್ಗೆ 10ರಿಂದ 7 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ರೇಷನ್​ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಕಳೆದ ತಿಂಗಳು ಆಹಾರ ಇಲಾಖೆ ರೇಷನ್ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಿತ್ತು, ಆದರೆ ಸರ್ವರ್ ಡೌನ್ ಆಗಿ‌ ತಿದ್ದುಪಡಿಗೆ ಮಾಡಲು ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸೇವಾ ಕೇಂದ್ರದಲ್ಲಿ‌ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಇನ್ನು, ರೇಷನ್​ ಕಾರ್ಡ್​ ತಿದ್ದುಪಡಿಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಕಂಪ್ಯೂಟರ್ ಅವಶ್ಯವಾಗಿದ್ದು, ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ‌ ತಿದ್ದುಪಡಿ ಮಾಡಿಸಬಹುದಾಗಿದೆ.

ಏನೇನು ತಿದ್ದುಪಡಿ ಮಾಡಬಹುದು? ಫಲಾನುಭವಿ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಕಾರ್ಡ್ ಸದಸ್ಯರ ಹೆಸರು ಡಿಲಿಟ್ & ಸೇರ್ಪಡೆ, ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ, ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಿಕೊಳ್ಳಬಹುದು.

Leave a Comment

Your email address will not be published. Required fields are marked *