ಸಮಗ್ರ ನ್ಯೂಸ್:ಮೊಹಿಯದ್ದೀನ್ ರಿಫಾಯಿ ಧಫ್ ಎಸೋಶಿಯೇಶನ್ ಗೂನಡ್ಕ ಇದರ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿಯ ಆಯ್ಕೆ ಸೆ. 28ರಂದು ಪೇರಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಟಿ.ಎಂ.ಶಹೀದ್ ವಹಿಸಿದರು. ದವಾ ನೆರವೇರಿಸಿ ಮಾತನಾಡಿದ ಜಮಾಅತ್ ಖತೀಬರಾದ ರಿಯಾಝ್ ಫೈಝಿ ಎಮ್ಮೆಮಾಡು ಸಂಸ್ಥೆಯನ್ನು ಉತ್ತಮ ರೀತಿ ನಡೆಸಿಕೊಂಡು ಬರುವಂತೆ ಕರೆನೀಡಿದರು.
ನೂತನ ಆಡಳಿತ ಸಮಿತಿ ರಚಿಸಿ ಅದ್ಯಕ್ಷರಾಗಿ ಜಿ.ಕೆ.ಹಮೀದ್, ಉಪಾದ್ಯಕ್ಷರಾಗಿ ಎನ್.ಹೆಚ್.ಆರಿಸ್ ಹಾಗೂ ಸಲೀಂ ಅಲ್ತಾಪ್ ಗೂನಡ್ಕ, ಪ್ರಧಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್, ಕಾರ್ಯದರ್ಶಿ ಇರ್ಫಾನ್, ಸಂಘಟನಾ ಕಾರ್ಯದರ್ಶಿ ಅನೀಫ್ ಮೊಟ್ಟೆಂಗಾರ್, ನಿರ್ದೇಶಕರಾಗಿ ಹಕೀಂ ದರ್ಕಾಸ್ಅಮೀರುದ್ದೀನ್, ಕೆ.ಐ. ಶಾಹಿಲ್ ದರ್ಕಾಸ್ ಸಾದುಮಾನ್ ತೆಕ್ಕಿಲ್ ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಟಿ.ಎಂ.ಶಹೀದ್ ತೆಕ್ಕಿಲ್ ರಿಯಾಝ್ ಫೈಝಿ ಉಸ್ತಾದರು, ಎ.ಎ.ರಝಾಕ್ ಹಾಜಿ ಹಾಗೂ ಟಿ.ಕೆ.ರಝಾಕ್ ಹಾಜಿ ಆಯ್ಕೆಗೊಂಡರು. ಈ ಸಂಧರ್ಭದಲ್ಲಿ ಖಾದರ್ ಮೊಟ್ಟೆಂಗಾರ್ ಕೃತಜ್ಞತೆ ಸಲ್ಲಿಸಿದರು.