ಸಮಗ್ರ ನ್ಯೂಸ್: ಐತಿಹಾಸಿಕ ದಾಖಲೆಗಳ ಪ್ರಕಾರ ಏಕದಿನ ಕ್ರಿಕೆಟ್ ಆರಂಭವಾಗಿದ್ದು 1971ರಲ್ಲಿ. ಮೊದಲ ಏಕದಿನ ವಿಶ್ವಕಪ್ ನಡೆದದ್ದು 1975ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆಯಿತು. ಇಂಗ್ಲೆಂಡ್‍ನ ಪ್ರಸಿದ್ಧ ಕ್ರೀಡಾಂಗಣ ಲಾರ್ಡ್ಸ್ ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‍ನ ನಡುವೆ ಮೊದಲ ಪಂದ್ಯ ನಡುವೆ ನಡೆಯಿತು. ಏಕದಿನ ವಿಶ್ವಕಪ್‍ನ ಪಯಣ ಶುರುವಾಗಿದ್ದು ಹೀಗೆ. ಇದೀಗ ನಾಲ್ಕು ದಶಕಗಳನ್ನು ದಾಟಿ 13ನೇ ಏಕದಿನ ವಿಶ್ವಕಪ್ ಇಂದಿನಿಂದ ಮೊಟೇರಾ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಭಾರತ ಆತಿಥ್ಯ ವಹಿಸಲಿರುವ ಈ ವಿಶ್ವಕಪ್ ಹಬ್ಬದ ಮೊದಲ ಪಂದ್ಯಾಟ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯಲಿದೆ.
ಮೊದಲೆರಡು ವಿಶ್ವಕಪ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡದ್ದೇ ಕಾರುಬಾರು. ಕ್ಲೈವ್ ಲಾಯ್ಡ್ ನಾಯಕತ್ವದಲ್ಲಿ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಹೊಂದಿದ್ದ ವೆಸ್ಟ್ ಇಂಡೀಸ್ ಸುಲಭವಾಗಿ ಎರಡು ವಿಶ್ವಕಪ್ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿತು. 1983ರಲ್ಲಿ ಅಚ್ಚರಿಯ ರೀತಿಯಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. 191987, 1999, 2003, 2007 ಮತ್ತು 2015 ರಲ್ಲಿ ಅಸ್ಟ್ರೇಲಿಯಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, 1992ರಲ್ಲಿ ಪಾಕಿಸ್ತಾನ ಮತ್ತು 1996ರಲ್ಲಿ ಶ್ರೀಲಂಕಾ ಪ್ರಶಸ್ತಿ ಪಡೆದುಕೊಂಡರೆ, 2019ರಲ್ಲಿ ಆತಿಥ್ಯ ವಹಿಸಿದ್ದ ಇಂಗ್ಲೆಂಡ್ ತಂಡ ಪ್ರಶಸ್ತಿ ಪಡೆದುಕೊಂಡಿತು.
ಭಾರತಕ್ಕೆ ವಿಶ್ವಕಪ್ ಟ್ರೋಫಿ: ಭಾರತ ಕ್ರಿಕೆಟ್ ತಂಡ ಈವರೆಗೆ ಎರಡು ಬಾರಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮೊದಲ ಬಾರಿಗೆ ಬಲಿಷ್ಠ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮತ್ತೊಮ್ಮೆ ಪ್ರಶಸ್ತಿ ಗೆದ್ದಿದ್ದು ಭಾರತಕ್ಕೆ ಕ್ರಿಕೆಟ್‍ನ ಇಂದ್ರಚಂದ್ರರನ್ನೆಲ್ಲ ತೋರಿಸಿಕೊಟ್ಟ ಮಹೇಂದ್ರ ಸಿಂಗ್ ನಾಯಕತ್ವದಲ್ಲಿ. 1983ರಲ್ಲಿ ಅನಿರೀಕ್ಷಿತವಾಗಿ ವೆಸ್ಟ್ ಇಂಡೀಸ್‍ನಂತಹ ಬಲಿಷ್ಠ ತಂಡದ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರೆ, 2011ರಲ್ಲಿ ಏಷ್ಯಾದ ಇನ್ನೊಂದು ತಂಡವಾದ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಆಸ್ಟ್ರೇಲಿಯಾಕ್ಕೆ ಅತ್ಯಧಿಕ ಐದು ಬಾರಿ ಟ್ರೋಫಿ: 191987, 1999, 2003, 2007 ಮತ್ತು 2015 ರಲ್ಲಿ ಅಸ್ಟ್ರೇಲಿಯಾ ಅತ್ಯಧಿಕ ಐದು ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಎರಡು ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಏಕದಿನ ವಿಶ್ವಕಪ್ ಪಂದ್ಯಾಟದ ಮೊದಲ ಸರಣಿಯ ಆತಿಥ್ಯ ವಹಿಸಿದ ಕ್ರಿಕೆಟ್‍ನ ಜನಕ ಎಂದೇ ಖ್ಯಾತಿ ಗಳಿಸಿರುವ ಇಂಗ್ಲೆಂಡ್ 2019ರಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯ 13ನೇ ಅಧ್ಯಾಯ ಇಂದಿನಿಂದ ಭಾರತದಲ್ಲಿ ಆರಂಭಗೊಳ್ಳಲಿದೆ. ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಬಲಿಷ್ಠ ತಂಡಗಳು ಈ ಬಾರಿಯ ವಿಶ್ವಕಪ್‍ನಲ್ಲಿ ಸೆಣಸಾಡುತ್ತಿದ್ದು, ಈ ಬಾರಿಯ ಚಾಂಪಿಯನ್ ಯಾರು ಎಂಬುದನ್ನು ಕಾದು ನೋಡಬೇಕಿದೆ.