ಸಮಗ್ರ ನ್ಯೂಸ್: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐಎಲ್)ಗೆ ಸ್ಟೀಲ್ ಲೋಡ್ ಸಾಗಿಸುತ್ತಿದ್ದ ಸರಕು ರೈಲು ಹಳಿತಪ್ಪಿದ್ದು, ವ್ಯಾಗನ್ ಹಳಿ ಮೇಲೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಈ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. ರೈಲು ಬಳ್ಳಾರಿಯಿಂದ ತಮಿಳುನಾಡಿನ ಕಾಂಚೀಪುರಂಗೆ ತೆರಳುತ್ತಿತ್ತು. ಘಟನೆಯಲ್ಲಿ ಕೆಲವು ಬೈಕ್ಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ಲಭಿಸಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಲಾರಿ ಚಾಲಕರೊಬ್ಬರು ನಾನು ಲಾರಿ ಚಾಲಕ, ಸರಕುಗಳನ್ನು ತುಂಬಿದ ಬಳಿಕ ಬಿಲ್ಲಿಂಗ್ ಪ್ರಕ್ರಿಯೆ ಮಾಡುತ್ತಿದ್ದ ಸಂದರ್ಭದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿತ್ತು. ಸುಮಾರು 3-4 ಗಂಟೆಗಳಲ್ಲಿ ಸಾಮಾನ್ಯ ಸರಕು ಸೇವೆಯನ್ನು ಪುನಸ್ಥಾಪಿಸಲಾಗುತ್ತಿದೆ. ಈ ಘಟನೆ ಪರಿಣಾಮ ಯಾವುದೇ ರೈಲುಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.