ಸಮಗ್ರ ನ್ಯೂಸ್: ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಗೊಂಡ ಪರಿಣಾಮ ಉಂಟಾದ ಪ್ರವಾಹಕ್ಕೆ ಸಿಕ್ಕಿಂನ ಲೊನಾಕ್ ಪ್ರದೇಶದಲ್ಲಿ ಭೀಕರ ಮೇಘಸ್ಫೋಟಕ್ಕೆ (Sikkim cloud burst) 23 ಯೋಧರ ಸಹಿತ ಹಲವು ಸೇನಾ ವಾಹನಗಳು ಕಣ್ಮರೆಯಾಗಿದೆ.
ಚುಂಗ್ಥಾಂಗ್ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಿದ್ದರಿಂದ ತೀಸ್ತಾ ನದಿಯಲ್ಲಿ ನೀರಿನ ಮಟ್ಟವು ಸುಮಾರು 15-20 ಅಡಿಗಳಷ್ಟು ಏರಿಕೆಯಾಗಿದೆ. ಲಾಚೆನ್ ಕಣಿವೆಯ ಉದ್ದಕ್ಕೂ ಕೆಲವು ಸೇನಾ ವಾಹನಗಳ ಮತ್ತು ಸೇನಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಸದ್ಯ ಕೆಲ ವಾಹನಗಳು ಕೆಸರಿನಲ್ಲಿ ಹೂತು ಹೋಗಿದ್ದು, ಕಣ್ಮರೆಯಾದ 23 ಸೇನಾ ಸಿಬ್ಬಂದಿಗಳ ರಕ್ಷಣೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.