Ad Widget .

‘ನೀವು ನಮ್ಮನ್ನು ಹೊರ ಹಾಕಬಹುದು, ಆದರೆ ಮುಂದೊಮ್ಮೆ ದೇಶವೇ ನಿಮ್ಮನ್ನು ಹೊರಕಳಿಸುತ್ತೆ’ | ಪ್ರಧಾನಿ ಮೋದಿ ವಿರುದ್ದ ಸಂಸದೆ ಆಕ್ರೋಶ

ಸಮಗ್ರ ನ್ಯೂಸ್: ‘ ಮಾನ್ಯ ಪ್ರಧಾನಮಂತ್ರಿಯವರೇ ಕೇಳಿ.. ನೀವು ನಮ್ಮನ್ನು ಎಳೆದು ಹೊರಹಾಕಬಹುದು, ಆದರೆ ನಿಮ್ಮನ್ನು ಇಂಡಿಯಾನೇ ಹೊರಹಾಕುತ್ತೆ…

Ad Widget . Ad Widget .

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್​ನ ನಾಯಕರು ಹೀಗೊಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಈ ವಾಗ್ದಾಳಿ ನಡೆಸಿದ್ದಾರೆ.

Ad Widget . Ad Widget .

ಟಿಎಂಸಿ ನಾಯಕರ ನಿಯೋಗವು ಇಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿಯಾಗಲು ಅವಕಾಶ ಕೋರಿ ಸಮಯ ನಿಗದಿ ಮಾಡಿಕೊಂಡಿದ್ದರು. ಆರು ಗಂಟೆಗೆ ಭೇಟಿ ಎಂದು ಸಮಯ ನಿಗದಿ ಆಗಿದ್ದು, ಬಳಿಕ 7.30ರ ಸುಮಾರಿಗೆ ಇಂದು ಭೇಟಿ ಸಾಧ್ಯವಿಲ್ಲ ಎಂದಿದ್ದರು.

ಆಗ ನಿಯೋಗದಲ್ಲಿದ್ದ ಸದಸ್ಯರು ಕೃಷಿಭವನದಲ್ಲೇ ಧರಣಿ ಕುಳಿತರು. ಆಗ ದೆಹಲಿ ಪೊಲೀಸರು ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವು ಸಂಸದರನ್ನು ಕೃಷಿ ಭವನದಿಂದ ಎಳೆದು ಹೊರಹಾಕಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧ ಮೊಯಿತ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಸಚಿವರ ಸಂದರ್ಶನಕ್ಕೆ ಅಪಾಯಿಂಟ್​ಮೆಂಟ್ ಪಡೆದ ಬಳಿಕವೂ ಜಗತ್ತಿನಲ್ಲೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸಂಸದರನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಮೂರು ಗಂಟೆ ಕಾಯಿಸಿ ಸಂದರ್ಶನಕ್ಕೆ ನಿರಾಕರಿಸಿದ್ದಾರೆ ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಪ್ರಧಾನಿ ಮತ್ತು ಗೃಹ ಸಚಿವರ ಹೆಸರನ್ನು ಉಲ್ಲೇಖಿಸಿ ಶೇಮ್ ಶೇಮ್ ಎಂದು ಕೂಗಿದ್ದಾರೆ.

Leave a Comment

Your email address will not be published. Required fields are marked *