Ad Widget .

36 ಗಂಟೆ ಸಮುದ್ರದಲ್ಲಿದ್ದು ಬದುಕಿ ಬಂದ ಬಾಲಕ

ಸಮಗ್ರ ನ್ಯೂಸ್: ನಿರಂತರವಾಗಿ 36 ಗಂಟೆಗಳ ಕಾಲ ಸಮುದ್ರದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಲಖನ್ ಎಂಬ ಬಾಲಕ ಕೊನೆಗೆ ಸಾವನ್ನು ಗೆದ್ದು ಬಂದ ಘಟನೆ ಗುಜರಾತ್​ನ​ ಡುಮಾಸ್‌ನಲ್ಲಿ ನಡೆದಿದೆ.

Ad Widget . Ad Widget .

ಗಣೇಶನ ವಿಗ್ರಹಕ್ಕೆ ಜೋಡಿಸಿದ್ದ ಮರದ ಸಹಾಯದಿಂದ ಅವರು 36 ಗಂಟೆಗಳ ಕಾಲ ಸಮುದ್ರದಲ್ಲಿಯೇ ಇದ್ದು, ಜೀವ ಉಳಿಸಿಕೊಂಡು ಬಂದಿದ್ದಾನೆ.
ಸೂರತ್‌ನ ಮೊರಭಾಗಲ್ ಪ್ರದೇಶದ 13 ವರ್ಷದ ಬಾಲಕ ಲಖನ್ ದೇವಿಪೂಜಕ್ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು. ಕುಟುಂಬ ಸಮೇತ ಬಂದಿದ್ದ ಲಖನ್ ಅಂಬಾಜಿ ದರ್ಶನದ ಬಳಿಕ ಡುಮಾಸ್ ಸಮುದ್ರ ತೀರದಲ್ಲಿ ಸ್ನಾನ ಮಾಡುತ್ತಿದ್ದ. ಅಲೆಗಳ ಅಬ್ಬರದಲ್ಲಿ ಅವನ ಕಿರಿಯ ಸಹೋದರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಅವನನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದಾನೆ. ಆದರೆ ಸ್ಥಳೀಯರು ಕಿರಿಯ ಸಹೋದರನನ್ನು ಉಳಿಸಿದ್ದಾರೆ. ಆದರೆ ಲಖನ್ ಕುಟುಂಬದ ಮುಂದೆಯೇ ಸಮುದ್ರದಲ್ಲಿ ನಾಪತ್ತೆಯಾಗಿದ್ದ.

Ad Widget . Ad Widget .

ಈ ದುರಂತದ ಬಗ್ಗೆ ಕುಟುಂಬಸ್ಥರು ಶಾಸಕರು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡ ಲಖನ್‌ಗಾಗಿ ಹುಡುಕಾಟ ಆರಂಭಿಸಿದರೂ ಯಶಸ್ಸು ಸಿಕ್ಕಿರಲಿಲ್ಲ. ಲಖನ್‌ನ ಶವ ಸಿಕ್ಕರೂ ದೇವರ ಆಶೀರ್ವಾದ ಎಂದು ಸ್ವೀಕರಿಸುತ್ತೇವೆ ಎಂದು ಮನೆಯವರು ಹೇಳಿಕೊಂಡಿದ್ದರು. ಆದರೆ ಲಖನ್‌ ಅದೃಷ್ಟ ಮತ್ತೆ ಜೀವಂತವಾಗಿ ಮರಳಿಬಂದಿದ್ದಾನೆ.

Leave a Comment

Your email address will not be published. Required fields are marked *