Ad Widget .

ಸುಳ್ಯ: ಸೌಜನ್ಯ ಹೋರಾಟದ ಬ್ಯಾನರ್‌ ತೆರವು ಪ್ರಕರಣ| ನ.ಪಂ ಅಧಿಕಾರಿಗಳ ನಡೆ ಹೀಗೇಕೆ?

ಸಮಗ್ರ ನ್ಯೂಸ್:‌ ಸುಳ್ಯ ನಗರದ ಜ್ಯೋತಿ ಸರ್ಕಲ್‌ ಬಳಿ ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರ್‌ ತೆರವುಗೊಳಿಸಿ ಬಳಿಕ ಅದೇ ಸ್ಥಳದಲ್ಲಿ ಅಳವಡಿಸಲಾಗಿದ್ದು, ನಗರ ಪಂಚಾಯತ್‌ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Ad Widget . Ad Widget .

ಅ.8 ರಂದು ಸೌಜನ್ಯಳಿಗೆ ನ್ಯಾಯ ಕೊಡಿಸಲು ಬೃಹತ್‌ ಪ್ರತಿಭಟನಾ ಸಭೆಯನ್ನು ತಾಲೂಕಿನ ಐವರ್ನಾಡು ಗ್ರಾಮಸ್ಥರು ಹಮ್ಮಿಕೊಂಡಿದ್ದರು. ಈ ಕುರಿತು ಸುಳ್ಯದ ಜ್ಯೋತಿ ಸರ್ಕಲ್‌ ಸೇರಿದಂತೆ ಹಲವೆಡೆ ನಗರ ಪಂಚಾಯತ್‌ ನಿಂದ ಅ.8ರ ತನಕ ಪರವಾನಿಗೆ ಪಡೆದು ಬ್ಯಾನರ್‌ ಅಳವಡಿಸಲಾಗಿತ್ತು. ಆದರೆ ಅ.03 ಗಾಂಧಿಸ್ಮೃತಿ, ಬೃಹತ್‌ ಜನಜಾಗೃತಿ ಜಾಥಾ ಮತ್ತು ಸಮಾವೇಶ ಆಯೋಜನೆಗೊಂಡಿತ್ತು. ಈ ಕಾರಣ ಸುಳ್ಯದ ಜ್ಯೋತಿ ಸರ್ಕಲ್‌ ನಿಂದ ಪರಿವಾರಕಾನದ ಅಮರಶ್ರೀಭಾಗ್‌ ಸಭಾಭವನದವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

Ad Widget . Ad Widget .

ಈ ನಡುವೆ ಇಂದು ಬೆಳ್ಳಂಬೆಳಗ್ಗೆ ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರನ್ನು ತೆರವು ಮಾಡಿ ನಗರ ಪಂಚಾಯತ್‌ ಲಾರಿಯಲ್ಲಿ ಹೊತ್ತೊಯ್ಯಲಾಗಿತ್ತು. ಈ ಬಗ್ಗೆ ‘ಸಮಗ್ರ ಸಮಾಚಾರ’ ವರದಿ ಬಿತ್ತರಿಸಿದ ಬೆನ್ನಲ್ಲೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ನ.ಪಂ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಬಗ್ಗೆ ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಿ ಬಿ ಬಾಲಕೃಷ್ಣ, ನ. ಪಂಚಾಯತ್ ಮುಖ್ಯಾಧಿಕಾರಿಯನ್ನು ವಿಚಾರಿಸಿದಾಗ ಪೊಲೀಸ್‌ ಇಲಾಖೆ ಮೇಲೆ ಆರೋಪ ಹೊರಿಸಿದ್ದರು. ಗೊಂದಲಗಳ‌ ಬಳಿಕ ಗಾಂಧಿಸ್ಮೃತಿ, ಬೃಹತ್‌ ಜನಜಾಗೃತಿ ಜಾಥಾ ಮತ್ತು ಸಮಾವೇಶ ಮುಗಿದು ನಂತರ ಮತ್ತೆ ಅದೇ ಸ್ಥಳದಲ್ಲಿ ಅದೇ ಬ್ಯಾನರನ್ನು ಅಳವಡಿಸಲಾಗಿತ್ತು.

ಈ ಎಲ್ಲಾ ವಿಚಾರವನ್ನು ಗಮನಿಸಿದರೆ ಈ ಬ್ಯಾನರನ್ನು ತೆಗೆದದ್ದು ಗಾಂಧಿಸ್ಮೃತಿ, ಬೃಹತ್‌ ಜನಜಾಗೃತಿ ಜಾಥಾ ಮತ್ತು ಸಮಾವೇಶಕ್ಕಾಗಿಯಾ..? ಎಂಬ ಪ್ರಶ್ನೆ ಸಾರ್ವಜನಿಕೆ ವಲಯದಲ್ಲಿ ಮೂಡಿದೆ. ನ.ಪಂ ವ್ಯಾಪ್ತಿಯಲ್ಲಿ ಬ್ಯಾನರ್‌ ಅಳವಡಿಸಲು ನ.ಪಂ ಅಧಿಕಾರಿಗಳೇ ತೆರಿಗೆ ಪಡೆದು ಅನುಮತಿ ನೀಡಿದ ಬಳಿಕ ಅದನ್ನು ಬೆಳ್ಳಂಬೆಳಗ್ಗೆ ಯಾಕೆ ತೆಗಿಬೇಕಿತ್ತು?. ಪೊಲೀಸ್‌ ಇಲಾಖೆ ಆರೋಪ ಹೊರಿಸುವ ಮುಖ್ಯಾಧಿಕಾರಿ ʼʼಈ ರೀತಿ ನಮಗೆ ಒಂದು ಮಾಹಿತಿ ಬಂದಿದೆ, ಈ ಒಂದು ದಿನ ನಿಮ್ಮ ಬ್ಯಾನರನ್ನು ತೆಗೆದು ಮತ್ತೆ ಅಳವಡಿಸಲಾಗುವುದು ಎಂಬ ಮಾಹಿತಿಯನ್ನು ಯಾಕೆ ಹೇಳಲಿಲ್ಲ?, ಅಥವಾ ಮುಖ್ಯಾಧಿಕಾರಿ ಕಾಣದ ಕೈಗಳ ಒತ್ತಡಕ್ಕೆ ಮಣಿದರೇ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿದೆ. ಇದಕ್ಕೆಲ್ಲಾ ಮುಖ್ಯಾಧಿಕಾರಿ ಉತ್ತರ ನೀಡಬೇಕಿದೆ.

Leave a Comment

Your email address will not be published. Required fields are marked *