Ad Widget .

ಸುಳ್ಯ: ಅನುಮತಿ ಇದ್ದರೂ ಸೌಜನ್ಯ ಪರ ಬ್ಯಾನರ್ ತೆರವುಗೊಳಿಸಿದ ನ.ಪಂ| ಅಧಿಕಾರಿಗಳ ನಡೆಗೆ ವ್ಯಾಪಕ ಆಕ್ರೋಶ

ಸಮಗ್ರ ನ್ಯೂಸ್: ನಗರ ಪಂಚಾಯತ್ ನಿಂದ ಸುಳ್ಯದಲ್ಲಿ ಅಳವಡಿಸಲಾಗಿದ್ದ ಸೌಜನ್ಯ ಪರ ಬ್ಯಾನರ್ ಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Ad Widget . Ad Widget .

ಸುಳ್ಯದಲ್ಲಿ ಇಂದು ಗಾಂಧಿಸ್ಮೃತಿ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಯ ನಗರದಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧ ಸಂಘಟನೆಗಳು ಬ್ಯಾನರ್ ಅಳವಡಿಸಿದ್ದರು. ಇದರಲ್ಲಿ ಕೆಲವು ಬ್ಯಾನರ್ ಗಳು ಪರವಾನಗಿ ಪಡೆಯದೆ ಹಾಕಲಾಗಿತ್ತು ಎನ್ನಲಾಗಿದ್ದು, ನ.ಪಂ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬ್ಯಾನರ್ ತೆರವು ಕಾರ್ಯಾಚರಣೆ ಕೈಗೊಂಡಿದ್ದರು.

Ad Widget . Ad Widget .

ಈ ನಡುವೆ ಪರವಾನಗಿ ಪಡೆದುಕೊಂಡ ಬ್ಯಾನರ್ ಗಳನ್ನೂ ತೆರವು‌ ಮಾಡಿದ ನ.ಪಂ ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಂದು ವರ್ಗವನ್ನು ಓಲೈಸಲು ಈ ರೀತಿಯ ನಿಲುವು ತೋರಿದ್ದಾರೆ ಎಂದು ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಲಾಗುತ್ತಿದೆ.

1 thought on “ಸುಳ್ಯ: ಅನುಮತಿ ಇದ್ದರೂ ಸೌಜನ್ಯ ಪರ ಬ್ಯಾನರ್ ತೆರವುಗೊಳಿಸಿದ ನ.ಪಂ| ಅಧಿಕಾರಿಗಳ ನಡೆಗೆ ವ್ಯಾಪಕ ಆಕ್ರೋಶ”

Leave a Comment

Your email address will not be published. Required fields are marked *