Ad Widget .

ಏಷ್ಯನ್ ಗೇಮ್ಸ್/ ಕಬಡ್ಡಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಜಯ

ಸಮಗ್ರ ನ್ಯೂಸ್: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನ ಕಬಡ್ಡಿ ಪಂದ್ಯಾಟದ ಮೊದಲ ಪಂದ್ಯಾಟದಲ್ಲಿ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿಯೇ ಬಾಂಗ್ಲಾ ತಂಡವನ್ನು 55-18 ಅಂಕಗಳ ಅಂತರದಿಂದ ಸೋಲಿಸುವುದರೊಂದಿಗೆ ಶುಭಾರಂಭ ಮಾಡಿದೆ.

Ad Widget . Ad Widget .

ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ ಭಾರತ ತಂಡ, ನವೀನ್ ಮತ್ತು ಅರ್ಜುನ್ ದೇಸ್ವಾಲ್ ಉತ್ತಮ ಪ್ರದರ್ಶನದೊಂದಿಗೆ ಮೊದಲಾರ್ಧದ ಅಂತ್ಯಕ್ಕೆ 24-9 ಅಂಕಗಳನ್ನು ಗಳಿಸುವುದರೊಂದಿಗೆ 15 ಅಂಕಗಳ ಮುನ್ನಡೆ ಸಾಧಿಸಿತ್ತು.

Ad Widget . Ad Widget .

ದ್ವಿತೀಯಾರ್ಧದಲ್ಲಿ ಹೆಚ್ಚು ಆಕ್ರಮಣಕಾರಿ ಆಟ ಮುಂದುವರಿಸಿದ ಭಾರತ, ಅಂತಿಮವಾಗಿ 55-18 ಅಂಕಗಳ ಅಂತರದಿಂದ ಜಯವನ್ನು ಸಾಧಿಸಿತು. ಏಷ್ಯನ್ ಗೇಮ್ಸ್‍ನ ಕಬಡ್ಡಿ ಪಂದ್ಯಾಟದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಭಾರತ, ಮೊದಲ ಪಂದ್ಯದ ಭರ್ಜರಿ ಜಯ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

Leave a Comment

Your email address will not be published. Required fields are marked *