Ad Widget .

ಶಕ್ತಿಧಾಮ ಮಕ್ಕಳ ಜೊತೆ ಶಿವಣ್ಣ ಗಾಂಧಿ ಜಯಂತಿ ಸಂಭ್ರಮ

ಸಮಗ್ರ ನ್ಯೂಸ್: ಇಂದು ಗಾಂಧಿ ಜಯಂತಿ ಸಂಭ್ರಮ, ಈ ಸಂಭ್ರಮದಲ್ಲಿ ಶಕ್ತಿಧಾಮ ಮಕ್ಕಳ ಜೊತೆ ಶಿವಣ್ಣ ಇಂದು ಗಾಂಧಿ ಜಯಂತಿ ಆಚರಿಸಿದ್ದಾರೆ.

Ad Widget . Ad Widget .

ಮೈಸೂರಿನಲ್ಲಿರುವ ಶಕ್ತಿಧಾಮದ ಮಕ್ಕಳ ಜೊತೆ ಗಾಂಧಿ ಜಯಂತಿ ಆಚರಿಸಿದ್ದಾರೆ. ಗಾಂಧಿ ಜಯಂತಿ ಆಚರಣೆ ಹಿನ್ನೆಲೆ ಶಕ್ತಿಧಾಮದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಾಂಧಿ ಜಯಂತಿ ಆಚರಣೆ, ನಾಯಕರ ಚಿಂತನೆಯನ್ನು ಮಕ್ಕಳು ಅಳವಡಿಸಿಕೊಳ್ಳಲಿ ಎಂದ ಶಿವಣ್ಣ, ಗಾಂಧಿ ಮತ್ತು ಲಾಲ್​ ಬಹದ್ದೂರ್​ ಶಾಸ್ತ್ರಿ ರೀತಿ ವೇಷ ಧರಿಸಿದ ಮಕ್ಕಳ ಜೊತೆ ನಿಂತು ಶಿವರಾಜ್​ಕುಮಾರ್​ ಪೋಟೋ ತೆಗೆಸಿಕೊಂಡಿದ್ದಾರೆ. ಮಕ್ಕಳ ಜೊತೆಗಿನ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ನಾಡಿನ ಜನತೆಗೆ ಶುಭಕೋರಿದ್ದಾರೆ

Ad Widget . Ad Widget .

“ಇಂದು ನಮ್ಮ ಶಕ್ತಿಧಾಮ ಮಕ್ಕಳ ಜೊತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದು ಸಂತೋಷವಾಯ್ತು. ಮಕ್ಕಳು ಈ ಧೀಮಂತ ನಾಯಕರ ಚಿಂತನೆಯನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲಿ” ಎಂದು ಶಿವರಾಜ್​ಕುಮಾರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

Leave a Comment

Your email address will not be published. Required fields are marked *