ಮದುವೆಗೆ ಬಂದವರಿಗೆಲ್ಲ ಕರ್ಚಿಫ್ ಕೊಟ್ಟ ನಟಿ ಪರಿಣಿತಿ ಚೋಪ್ರಾ!

ಸಮಗ್ರ ನ್ಯೂಸ್: ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವ್ರ ಮದುವೆ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದಲ್ಲಿ ನಡೆದ ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರು ಭಾಗಿಯಾಗಿದ್ದರು. ಇದೀಗ ಈ ಮದುವೆ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ.

Ad Widget ... ..

ಒಂದು ಫೋಟೋದಲ್ಲಿ ಸಾನಿಯಾ ಮಿರ್ಜಾ ಪೇಪರ್ ಹ್ಯಾಂಡ್ ಫ್ಯಾನ್ ಹಿಡಿದಿದ್ದರು. ಅದರೊಂದಿಗೆ ಒಂದು ಬಿಳಿ ಬಣ್ಣದ ಹ್ಯಾಂಡ್​ ಕರ್ಚಿಫ್ ಕೂಡಾ ಇತ್ತು. ಇದು ಎಲ್ಲರ ಗಮನ ಸೆಳೆದಿದೆ.
ನಮ್ಮ ಮದುವೆ ನಿಮ್ಮ ಕಣ್ಣಲ್ಲಿ ನೀರು ತರಿಸಿದರೆ ಈ ಹ್ಯಾಂಡ್​ ಕರ್ಚಿಫ್ ಬಳಸಿಕೊಂಡು ಆ ಕಣ್ಣೀರನ್ನು ಅಳಿಸಿ ಎಂದು ಬಿಳಿ ಬಣ್ಣದ ಕರ್ಚಿಫ್​ನಲ್ಲಿ ಬರೆಯಲಾಗಿತ್ತು.

Ad Widget

ಇದನ್ನು ನೋಡಿದ ನೆಟ್ಟಿಗರು ಇಷ್ಟೊಂದು ಎಮೋಷನಲ್ ಆಗ್ತಿರಾ ಎಂದು ಕಮೆಂಟ್ ಮಾಡ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲಾ ಸ್ವಲ್ಪ ಓವರ್ ಆಯ್ತು ಎಂದು ಕಮೆಂಟ್ ಮಾಡಿ ನಕ್ಕಿದ್ದಾರೆ. ಹಣ ಇದೆ ಎಂದು ಬೇಕಾಬಿಟ್ಟಿಯಾಗಿ ಓವರ್ ಮಾಡ್ತಿದ್ದೀರಿ ಎಂದು ಇನ್ನೂ ಕೆಲವರು ರೇಗಿಸಿದ್ದಾರೆ.

Leave a Comment

Your email address will not be published. Required fields are marked *