ಸುಬ್ರಹ್ಮಣ್ಯ: ಮಹಿಳೆ ಆತ್ಮಹತ್ಯೆ

ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯ ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ಅ.02ರಂದು ನಡೆದಿದೆ.

Ad Widget ... ..

ಇಲ್ಲಿನ ನಿವಾಸಿ ಲಕ್ಷ್ಮಣ ಆಚಾರ್ಯ ಎಂಬವರ ಪತ್ನಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಂದು ಮುಂಜಾನೆ ಮನೆಯಲ್ಲಿ ತನ್ನ ಮಗಳೊಂದಿಗೆ ಮುನಿಸಿಕೊಂಡ ಅವರು ಮನೆಬಿಟ್ಟು ಹೋಗಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

Ad Widget

ಮೃತರು ಪತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುಬ್ರಹ್ಮಣ್ಯ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *