ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಂಗೀತ ನಿರ್ದೇಶಕ ಗುರುಕಿರಣ್ ಭೇಟಿ

ಸಮಗ್ರ ನ್ಯೂಸ್:ಟಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಮನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಭೇಟಿ ನೀಡಿದರು.

Ad Widget ... ..

ಬೆಂಗಳೂರಿನಲ್ಲಿ ಮೊತ್ತಮೊದಲನೇ ಬಾರಿಗೆ ನಡೆಯುವ ಕರಾವಳಿ ಕ್ರೀಡೆ ನಮ್ಮ ಕಂಬಳದ ನೇತೃತ್ವ ವಹಿಸಿರುವ ಅಶೋಕ್ ಕುಮಾರ್ ರೈ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಅ. 2ರಂದು ಟಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರ ಇಂದಿರಾ ನಗರದ ನಿವಾಸಕ್ಕೆ ಭೇಟಿ ನೀಡಿದರು.

Ad Widget

ಅನುಷ್ಕಾ ಶೆಟ್ಟಿಯವರ ತಂದೆ ವಿಠ್ಠಲ್ ಶೆಟ್ಟಿ, ಸಹೋದರ ಬಿ.ಗುಣರಂಜನ್ ಶೆಟ್ಟಿಯವರ ಮನೆಯಲ್ಲಿ ಶಾಸಕರು ಭೋಜನ ಕೂಟದಲ್ಲಿ ಭಾಗಿಯಾಗಿ ಬೆಂಗಳೂರು ಕಂಬಳದ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ತುಳು ಕೂಟ ಅಧ್ಯಕ್ಷ ಸುಂದರ್ ರಾಜ್ ರೈ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *