Ad Widget .

ಏಷ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಭಾರತೀಯರ ಚಿನ್ನದ ಬೇಟೆ| ತಜೀಂದರ್, ಅವಿನಾಶ್ ಗೆ ಪದಕ

ಸಮಗ್ರ ನ್ಯೂಸ್: 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​​ನಲ್ಲಿ ಭಾರತ ಚಿನ್ನದ ಬೇಟೆ ಮುಂದುವರೆಸಿದೆ. ಭಾನುವಾರ ನಡೆದ ವಿಶ್ವ
ಚಾಂಪಿಯನ್ ಶಿಪ್​ನ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಓಟಗಾರ ಅವಿನಾಶ್ ಸೇಬಲ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮತ್ತೊಂದೆಡೆ ತಜಿಂದರ್ ಪಾಲ್ ಸಿಂಗ್ ತೂರ್ ಪುರುಷರ ಶಾಟ್​ಪುಟ್​ನಲ್ಲಿ ಸ್ವರ್ಣಕ್ಕೆ ಮುತ್ತಿಕ್ಕುವ ಮೂಲಕ ಸತತ 2ನೇ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

Ad Widget . Ad Widget .

ದಾಖಲೆಯ ಸ್ವರ್ಣ ಗೆದ್ದ ಸೇಬಲ್:
ಏಷ್ಯನ್ ಗೇಮ್ಸ್​ನಲ್ಲಿ ತನ್ನ ಅಥ್ಲೆಟಿಕ್ಸ್ ಅಭಿಯಾನ ಆರಂಭಿಸಿದ ಭಾರತಕ್ಕೆ ಟ್ರ್ಯಾಕ್ ಅಂಡ್ ಫೀಲ್ಡ್​ನಲ್ಲಿ ಸೇಬಲ್ ಮೊದಲ ಚಿನ್ನದ ಪದಕ ಗೆದ್ದರು. ಸಾಬ್ಲೆ 3000 ಮೀಟರ್ ಓಟವನ್ನು 8:19.50 ಸೆಕೆಂಡ್​​ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಸಾಧನೆ ಮಾಡಿದರು. ಇದರೊಂದಿಗೆ ಸ್ಟೀಪಲ್​ ಚೇಸ್​​ನಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯ ಪುರುಷ ಅಥ್ಲೀಟ್​​​​ ಎಂಬ ದಾಖಲೆಗೆ ಸೇಬಲ್ ಪಾತ್ರರಾಗಿದ್ದಾರೆ. 2010ರ ಏಷ್ಯಾಡ್​ನಲ್ಲಿ ಮಹಿಳೆಯರ 3 ಸಾವಿರ ಮೀಟರ್ ​​ಸ್ಟೀಪಲ್​ಚೇಸ್ ಸ್ಪರ್ಧೆಯಲ್ಲಿ ಸುಧಾ ಸಿಂಗ್ ಚಿನ್ನ ಗೆದ್ದಿದ್ದರು. ಇದೀಗ ಸೇಬಲ್, ಸುಧಾ ಸಾಲಿಗೆ ಸೇರಿದ್ದಾರೆ.

Ad Widget . Ad Widget .

ತಜಿಂದರ್ ಪಾಲ್​ಗೆ ಸತತ 2ನೇ ಚಿನ್ನ:
ತಜಿಂದರ್​ ಪಾಲ್​ ಸಿಂಗ್​ ತೂರ್ ಸತತ 2ನೇ ಚಿನ್ನ ಗೆಲ್ಲುವ ಮೂಲಕ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ, ಭಾರತದ ಪದಕಗಳ ಸಂಖ್ಯೆಯನ್ನೂ ಏರಿಸಿದರು. ಪುರುಷರ ಫೈನಲ್​​ನಲ್ಲಿ ತೂರ್, ಸೌದಿ ಅರೇಬಿಯಾದ ಪ್ರತಿಸ್ಪರ್ಧಿಯನ್ನು ಮಣಿಸಿದರು. 2018ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್​​ನಲ್ಲಿ ಚಿನ್ನ ಗೆದ್ದಿದ್ದ ತಜಿಂದರ್​​, ಮೊದಲ ಎರಡು ಪ್ರಯತ್ನಗಳಲ್ಲಿ ಫೌಲ್ ಮಾಡಿದ್ದರು. ಇದರ ಹೊರತಾಗಿಯೂ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, 20.36 ಮೀಟರ್ ದೂರ ಎಸೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಮೊಹಮ್ಮದ್ ದಾವುಡಾ ಟೊಲೊ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

Leave a Comment

Your email address will not be published. Required fields are marked *