ಪೋಲೀಸ್ ಕಾರಿನ ಮೇಲೆ ಏರಿ ಮಹಿಳೆಯ ಡ್ಯಾನ್ಸ್| ರೀಲ್ಸ್ ಗಾಗಿ ಅನುಮತಿ ಕೊಟ್ಟ ಅಧಿಕಾರಿ ಅಮಾನತು

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣದಲ್ಲಿ (Social Media) ರೀಲ್ಸ್‌ ಹವಾ ಜಾಸ್ತಿಯಾಗಿದ್ದು, ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡಲು ಶುರು ಮಾಡಿದ್ದಾರೆ.

Ad Widget ... ..

ಪಂಜಾಬ್‌ನಲ್ಲಿ ಮಹಿಳೆಯೊಬ್ಬಳು ರೀಲ್ಸ್‌ಗಾಗಿ ಪೊಲೀಸ್‌ (Punjab Police) ವಾಹನ ಬಳಸಿಕೊಂಡಿದ್ದಾಳೆ. ಪಾಯಲ್‌ ಪರಮ್‌ ಎಂಬ ಮಹಿಳೆ ತನ್ನ ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಪೊಲೀಸ್‌ ವಾಹನವನ್ನು ಬಳಸಿಕೊಂಡಿದ್ದಾಳೆ. ಈ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಪೊಲೀಸ್‌ ವಾಹವನ್ನು ರೀಲ್ಸ್‌ ಮಾಡಲು ಅನುಮತಿ ನೀಡಿದ್ದ ಜಲಂಧರ್‌ ಪೊಲೀಸ್‌ ಠಾಣೆಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Ad Widget

ಪೊಲೀಸ್‌ ವಾಹವನ್ನು ಬಳಸಿಕೊಂಡು ರೀಲ್ಸ್‌ ಮಾಡಿರುವ ಮಹಿಳೆ ಕಾರಿನ ಮುಂಭಾಗದ ಬಾನೆಟ್‌ ಮೇಲೆ ಕುಳಿತು ಪಂಜಾಬಿ ಹಾಡಿಗೆ ಡಾನ್ಸ್‌ ಮಾಡಿದ್ದಾಳೆ. ಇದೇ ವೇಳೆ ಆಕ್ಷೇಪಾರ್ಹ ರೀತಿಯಲ್ಲಿ ಕೈಸನ್ನೆ ಮಾಡಿದ್ದು, ವೀಡಿಯೋ ಕೊನೆಯಲ್ಲಿ ಓರ್ವ ಪೊಲೀಸ್‌ ಅಧಿಕಾರಿಯೂ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದಂತೆ ಮಹಿಳೆ ಹಾಗೂ ಪೊಲೀಸ್ ಅಧಿಕಾರಿ ಮೇಲೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *