Ad Widget .

ಸುಳ್ಯ: ಪಾಟಾಳಿ ಯಾನೆ ಗಾಣಿಗ ಸಮ್ಮಿಲನ ಉದ್ಘಾಟನೆ

ಸಮಗ್ರ ನ್ಯೂಸ್:ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಸುಳ್ಯ ಕೇರ್ಪಳ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಅ.1ರಂದು ನಡೆದ ಗಾಣಿಗ ಸಮ್ಮಿಲನ ಕಾರ್ಯಕ್ರಮ ನಡೆಯಿತು.

Ad Widget . Ad Widget .

ಸುಳ್ಯ ವಿಧಾನಸಭಾ ಶಾಸಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸ್ಪೀಕರ್ ಸುದರ್ಶನ್ ಭಾಗಿಯಾದರು. ಬೆಂಗಳೂರು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿದರು.

Ad Widget . Ad Widget .

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ನಾಟಿವೈದ್ಯ ಮಾನ ಬಂಟ್ರಿಬೈಲ್, ಯಕ್ಷಗಾನ ಕಲಾವಿದ ಬಣ್ಣದ ಸುಬ್ರಾಯ ಸಂಪಾಜೆ, ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ ಸುಬ್ಬ ಪಾಟಾಳಿ ಕಾಂತಮಂಗಲ, ನಿವೃತ್ತ ಯೋಧ ಚಂದ್ರಶೇಖರ ಬೆಳ್ಳಾರೆ, ಲೋಕೇಶ್ ಇರಂತಮಜಲು, ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಆರಕ್ಷಕ ದಿನೇಶ್ ನಾರ್ಣಕಜೆ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಪಾಟಾಳಿ, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕೇರ್ಪಳ, ವಿಜ್ಞಾನಿ ವನಿತಾ ಸಚಿತ್ ಪೆರಿಯಪ್ಪು, ಕ್ರೀಡಾ ಕ್ಷೇತ್ರದಲ್ಲಿ ಮನೋಜ್ ಕುಮಾರ್ ಸಂತೂಡು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಅಧ್ಯಕ್ಷತೆ ವಹಿಸಿ, ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್, ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘದ ಉಪಾಧ್ಯಕ್ಷ ಅಂಕ ಶೆಟ್ಟಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಪಾಟಾಳಿ ಪರಿವಾರಕಾನ, ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪು ಪಾಟಾಳಿ ಜಯನಗರ, ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ದೇರೆಬೈಲು, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಸ್ವಿಗ್ಗಿ ಇಂಡಿಯಾ ನಿರ್ದೇಶಕ ಪ್ರೀತಮ್ ಕೆ.ಎಸ್, ಚಾರ್ಟೆಡ್ ಅಕೌಂಟೆಂಟ್ ದಯಾನಂದ ಕೆ., ಮಂಗಳೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ರಾಮ ಮುಗೋಡಿ, ಪುತ್ತೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಪ್ರಸಾದ್ ಬಾಕಿಮಾರ್, ವಿಟ್ಲ ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಉದಯ ದಂಬೆ, ಈಶ್ವರಮಂಗಲ ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಮಹಾಲಿಂಗ ಈಶ್ವರಮಂಗಲ ಭಾಗವಹಿಸಿದ್ದರು.

ಗಾಣಿಗ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಸುರೇಶ್ ಕರ್ಲಪಾಡಿ, ಕೋಶಾಧಿಕಾರಿ ಗೋಪಾಲಕೃಷ್ಣ ಮೊರಂಗಲ್ಲು, ಸಮ್ಮೇಳನ ಸಮಿತಿ ಆರ್ಥಿಕ ಸಮಿತಿ ಸಂಚಾಲಕ ಚಂದ್ರಶೇಖರ ಪನ್ನೆ ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಮಹಿಳಾ ಘಟಕದ ಸದಸ್ಯೆ ಪ್ರೇಮ ಕುಡೆಕಲ್ಲು, ಸ್ವಾಗತ ಸಮಿತಿ ಸಂಚಾಲಕ ಕೇಶವ ಮೊರಂಗಲ್ಲು ನಿರ್ದೇಶಕ ರಾಧಾಕೃಷ್ಣ ಬೇರ್ಪಡ್ಕ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಸಂಚಾಲಕ ಶಂಕರ ಪಾಟಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಜಯನಗರ ಹಾಗೂ ಉಪನ್ಯಾಸಕಿ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *