Ad Widget .

ಬೆಂಗಳೂರು ಕಂಬಳಕ್ಕೆ ನಡಿತಿದೆ ಅದ್ಧೂರಿ ತಯಾರಿ..

ಸಮಗ್ರ ನ್ಯೂಸ್: ಬೆಂಗಳೂರು ಕಂಬಳಕ್ಕೆ ಅದ್ದೂರಿಯಾಗಿ ತಯಾರಿ ನಡೆಯುತ್ತಿದೆ. ನವೆಂಬರ್25 ಮತ್ತು 26 ರಂದು ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೆಂಗಳೂರು ಕಂಬಳ ನಡೆಯಲಿದೆ.

Ad Widget . Ad Widget .

ಬೆಂಗಳೂರು ಕಂಬಳದಲ್ಲಿ 125ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಲಿದೆ. ಅಷ್ಟೇ ಅಲ್ಲದೇ ಬೆಂಗಳೂರು ಕಂಬಳದಲ್ಲಿ ವಿಶೇಷ ತಾರಾ ಮೆರಗು ಇರಲಿದೆ. ಅದೇನಂದ್ರೆ ನಟ ರಜನಿಕಾಂತ್,ಬಾಲಿವುಡ್ ನಟಿ ಐಶ್ವರ್ಯಾರೈ ವಿಶೇಷ ತಾರಾ ಮೆರಗು ಇರಲಿದ್ದು ಸ್ಯಾಂಡಲ್ ವುಡ್ ನ ನಟ-ನಟಿಯರೂ ಬೆಂಗಳೂರು ಕಂಬಳದಲ್ಲಿ ಭಾಗಿಯಾಗಲಿದ್ದಾರೆ.ಬೆಂಗಳೂರು ಕಂಬಳವನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.

Ad Widget . Ad Widget .

ಬೆಂಗಳೂರು ಅರಮನೆ ಮೈದಾನದಲ್ಲಿ 145 ಮೀ ಉದ್ದದ ಕಂಬಳದ ಕರೆ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧತೆ ನಡೆದಿದೆ. ಏಕಕಾಲದಲ್ಲಿ ಹದಿನೈದು ಸಾವಿರ ಜನ ಕಂಬಳ ವೀಕ್ಷಿಸಲು ಅವಕಾಶ ಮಾಡಲಾಗಿದೆ. ಕಂಬಳಕ್ಕೆ 9ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.

ಕಂಬಳದಲ್ಲಿ ತುಳುನಾಡಿನ ಆಹಾರ ಮೇಳವೂ ಲಭ್ಯವಾಗಲಿದ್ದು ಸಿಲಿಕಾನ್ ಸಿಟಿ ಜನ ಕರಾವಳಿಯ ಆಹಾರ ಸವಿಯಬಹುದು.

Leave a Comment

Your email address will not be published. Required fields are marked *