ನಾಳೆ (ಸೆ. 29) ಕರ್ನಾಟಕ ಬಂದ್| ಏನಿರುತ್ತೆ? ಏನಿರಲ್ಲ? ಸರ್ಕಾರದ ಬಿಗಿ ಕ್ರಮಗಳೇನು? ಫುಲ್ ಡೀಟೈಲ್ಸ್ ಓದಿ…
ಸಮಗ್ರ ನ್ಯೂಸ್: ಕಾವೇರಿ ನೀರಿನ ಅನ್ಯಾಯ ಖಂಡಿಸಿ ಶುಕ್ರವಾರ (ಸೆ.29) ಘೋಷಿಸಲಾಗಿರುವ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ. ಈ ಮಧ್ಯೆ, ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು(ಸೆ.28) ಮಧ್ಯರಾತ್ರಿಯಿಂದಲೇ ಸೆಕ್ಷನ್ 144 (Section 144) ಜಾರಿ ಮಾಡಲು ನಿರ್ಧರಿಸಲಾಗಿದೆ. ಯಾವುದೇ ರೀತಿಯ ಪ್ರತಿಭಟನಾ ರ‍್ಯಾಲಿಗೆ ಅವಕಾಶ ಸಿಗುವುದು ಬಹುತೇಕ ಅನುಮಾನವೆನಿಸಿದೆ. ನ್ಯಾಯಾಲಯದ ಅದೇಶ ಇರುವುದರಿಂದ ಪ್ರತಿಭಟನಾ ರ‍್ಯಾಲಿಗೆ ಅವಕಾಶ ಸಿಗುವುದು ಅನುಮಾನ. ಜೊತೆಗೆ ಸೆಕ್ಷನ್ 144 ಜಾರಿಯಾದರೆ 5ಕ್ಕಿಂತ ಹೆಚ್ಚು ಜನ ಒಟ್ಟುಗೂಡಲು ಅವಕಾಶವಿಲ್ಲ. […]