September 2023

ಚಂದ್ರನ ಅಂಗಳದಲ್ಲಿ ಪ್ರಗ್ಯಾನ್ ತುಂಟಾಟ| ಭಾವುಕ ವಿಡಿಯೋ ಹಂಚಿಕೊಂಡ ಇಸ್ರೋ

ಸಮಗ್ರ ನ್ಯೂಸ್: ಚಂದ್ರಯಾನ-3ರ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲೆ ತನ್ನ ವೈಜ್ಞಾನಿಕ ಸಂಶೋದನೆ ಮುಂದುವರೆಸಿದ್ದು ಇದೀಗ ರೋವರ್‌ನ ಮತ್ತೊಂದು ಡಿವೈಸ್‌ ಚಂದ್ರನ ಮೇಲ್ಲೈನಲ್ಲಿ ಸಲ್ಫರ್‌ ಇರೋದನ್ನ ಕನ್ಫರ್ಮ್‌ ಮಾಡಿದೆ. ರೋವರ್‌ನಲ್ಲಿರುವ Alpha Particle X-ray Spectroscope (APXS) ಸಲ್ಫರ್‌ ಇರುವಿಕೆ ಹಾಗೂ ಇನ್ನಿತರ ಮೈನರ್‌ ಪಾರ್ಟಿಕಲ್‌ಗಳನ್ನ ಪತ್ತೆಮಾಡಿದೆ ಅಂತ ಇಸ್ರೋ ಹೇಳಿದೆ. ಜೊತೆಗೆ ಚಂದ್ರನ ಮೇಲೆ ಸುರಕ್ಷಿತ ಜಾಗಕ್ಕಾಗಿ, ರೋವರ್‌ ಗಿರ ಗಿರ ಅಂತ ತಿರುಗುತ್ತಾ ಇರೋ ವಿಡಿಯೋ ಒಂದನ್ನ ಇಸ್ರೋ ಶೇರ್‌ ಮಾಡಿದೆ. ಈ ತಿರುಗುವಿಕೆಯನ್ನು […]

ಚಂದ್ರನ ಅಂಗಳದಲ್ಲಿ ಪ್ರಗ್ಯಾನ್ ತುಂಟಾಟ| ಭಾವುಕ ವಿಡಿಯೋ ಹಂಚಿಕೊಂಡ ಇಸ್ರೋ Read More »

ರಾಜ್ಯದಲ್ಲಿ ಮದ್ಯ ಮಾರಾಟ ಇಳಿಕೆ| ಅಬಕಾರಿ ಆದಾಯ ಇಳಿಮುಖ| ಕುಡಿಯೋದು ಬಿಟ್ಬಿಟ್ರಾ ಮದ್ಯಪ್ರೇಮಿಗಳು?

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಆದಾಯಗಳಲ್ಲಿ ಒಂದಾದ ಮದ್ಯ ಮಾರಾಟದಲ್ಲಿ ಭಾರಿ ಇಳಿಕೆಯಾಗಿದೆ ಎಂದು ಹಲವು ವರದಿಗಳು ಉಲ್ಲೇಖಿಸಿವೆ. ಮದ್ಯದ ಮೇಲೆ ಶೇ. 20ರಷ್ಟು ತೆರಿಗೆ ಏರಿಕೆ ಮಾಡುತ್ತಿದ್ದಂತೆ ಮದ್ಯ ಮಾರಾಟದಲ್ಲಿ ಭಾರೀ ಕಡಿಮೆಯಾಗಿದೆ. ಅಬಕಾರಿ ಸುಂಕ ಶೇಕಡ 20 ರಷ್ಟರವರೆಗೆ ಏರಿಕೆಯಾಗಿದ್ದು, ತೆರಿಗೆ ಏರಿಕೆ ನಂತರ ಮದ್ಯ ಮಾರಾಟದಲ್ಲಿ ಭಾರಿ ಕಡಿಮೆ ಆಗಿದೆ. ಮದ್ಯದ ದರ ಏರಿಕೆಯಾಗಿರುವುದರಿಂದ ಮದ್ಯ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಆಗಸ್ಟ್ ನಲ್ಲಿ ಶೇಕಡ 10 ರಿಂದ 15

ರಾಜ್ಯದಲ್ಲಿ ಮದ್ಯ ಮಾರಾಟ ಇಳಿಕೆ| ಅಬಕಾರಿ ಆದಾಯ ಇಳಿಮುಖ| ಕುಡಿಯೋದು ಬಿಟ್ಬಿಟ್ರಾ ಮದ್ಯಪ್ರೇಮಿಗಳು? Read More »

ಬೆಂಗಳೂರಿನಲ್ಲಿ ಧಾರಾಕಾರ ಮಳೆ| ತಗ್ಗು ಪ್ರದೇಶಗಳು ಜಲಾವೃತ

ಸಮಗ್ರ ನ್ಯೂಸ್: ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಿದ್ದು, ಬಸವನಗುಡಿ, ಬನಶಂಕರಿ, ಜಯನಗರ, ಕಾರ್ಪೊರೇಷನ್ ಸರ್ಕಲ್, ಸಂಪಂಗಿರಾಮ ನಗರ, ಡಬಲ್ ರೋಡ್, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ಗಾಂಧಿ ನಗರ, ಕೆ.ಆರ್.ಸರ್ಕಲ್, ರಾಜಾಜಿನಗರ ಸೇರಿ ಹಲವು ಕಡೆಗಳಲ್ಲಿ ಮಳೆಯಾಗಿದೆ. ದಿಢೀರ್ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ಅನುಭವಿಸಿದರು.� ಹಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ಭಾರತೀಯ ಹವಾಮಾನ ಇಲಾಖೆ ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ| ತಗ್ಗು ಪ್ರದೇಶಗಳು ಜಲಾವೃತ Read More »

ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ ಒಬಾಮಾ ದಂಪತಿ| ಸರ್ವಧರ್ಮ ಕೇಂದ್ರದ ಶಂಕುಸ್ಥಾಪನೆಗೆ ಅಮೇರಿಕಾ ಮಾಜಿ ಅಧ್ಯಕ್ಷ ಆಗಮನ

ಸಮಗ್ರ ನ್ಯೂಸ್: ರಾಜ್ಯದ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಜಾಗತಿಕ ದೊಡ್ಡಣ್ಣನೆಂದು ಕರೆಸಿಕೊಂಡಿರುವ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಆಗಮಿಸಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ವಧರ್ಮ ಸಮನ್ವಯ ಕೇಂದ್ರವನ್ನು (ಮದರ್ ಅರ್ಥ್ ಆಧ್ಯಾತ್ಮಿಕ ಕೇಂದ್ರ) ಮಂಡ್ಯದಲ್ಲಿ ಸ್ಥಾಪಿಸಲಾಗುತ್ತಿದ್ದು, ಇದಕ್ಕೆ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ದಂಪತಿ ಆಗಮಿಸಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಜಗತ್ತಿನಲ್ಲಿ ಮೊಟ್ಟ ಮೊದಲನೆಯದಾಗಿ ನಿರ್ಮಾಣ ಮಾಡಲಾಗುತ್ತಿರುವ

ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ ಒಬಾಮಾ ದಂಪತಿ| ಸರ್ವಧರ್ಮ ಕೇಂದ್ರದ ಶಂಕುಸ್ಥಾಪನೆಗೆ ಅಮೇರಿಕಾ ಮಾಜಿ ಅಧ್ಯಕ್ಷ ಆಗಮನ Read More »

ಅಪಾಯದ ಅಂಚಿನಲ್ಲಿರುವ ಪಂಜಿಕಲ್ಲು-ಮೈತಡ್ಕ ತೂಗು ಸೇತುವೆ

ಸಮಗ್ರ ನ್ಯೂಸ್: ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಕಲ್ಲು -ಮೈತಡ್ಕ ಎಂಬಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಲಾದ ತೂಗು ಸೇತುವೆಯು ಇದೀಗ ಅಪಾಯದ ಅಂಚಿನಲ್ಲಿದೆ. ಸಾರ್ವಜನಿಕರು ಅನಾಹುತ ಸಂಭವಿಸುವ ಮೊದಲು ದುರಸ್ತಿ ಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಪಂಜಿಕಲ್ಲು – ಮೈತಡ್ಕ ಭಾಗದ ಸಂಪರ್ಕದ ರಸ್ತೆಯು ಇದಾಗಿದ್ದು, ದಿನ ನಿತ್ಯ ನೂರಾರು ಮಂದಿ ಸಾರ್ವಜನಿಕರು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ತೂಗು ಸೇತುವೆಯಲ್ಲಿ ಸಂಚರಿಸುತ್ತಿರುತ್ತಾರೆ. ಇದೀಗ ಈ ಸೇತುವೆಯ ಮೇಲ್ಬಾಗಕ್ಕೆ ನಡೆದುಕೊಂಡು ಹೋಗಲು ಹಾಸಿರುವ ಸಿಮೆಂಟ್ ಸ್ಲ್ಯಾಬ್ ಒಡೆದು ಹೋಗಿ ತಿಂಗಳು

ಅಪಾಯದ ಅಂಚಿನಲ್ಲಿರುವ ಪಂಜಿಕಲ್ಲು-ಮೈತಡ್ಕ ತೂಗು ಸೇತುವೆ Read More »

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2023|ಓದುಗರ ಒತ್ತಾಯದ ಮೇರೆಗೆ ಸೆ.6ರವರೆಗೆ ಮುಂದುವರಿಕೆ

ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಅರ್ಪಿಸುತ್ತಿರುವ ‘ಮುದ್ದು ಕೃಷ್ಣ ಫೋಟೋ ಸ್ಪರ್ಧೆ-2023ನ್ನು ಸೆ.6ರವರೆಗೆ ಮುಂದುವರೆಸಲಾಗಿದೆ. 3 ವರ್ಷದ ಒಳಗಿನ ಪುಟ್ಟ ಕಂದಮ್ಮಗಳಿಗೆ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ನಿಮ್ಮ ಮನೆಯಲ್ಲಿ 3 ವರ್ಷದ ಪುಟ್ಟ ಕಂದಮ್ಮಗಳು ಇದ್ದರೆ ಅವರಿಗೆ ಕೃಷ್ಣನ ವೇಷ ಹಾಕಿ ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಕಳುಹಿಸಬಹುದು. ಪೋಟೋ ಕಳಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 6, ನಂತರ ನೀವು ಕಳುಹಿಸಿದ ಫೋಟೋವನ್ನು ಸಮಗ್ರ ಸಮಾಚಾರ ಇನ್ಸ್ಟಾ

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2023|ಓದುಗರ ಒತ್ತಾಯದ ಮೇರೆಗೆ ಸೆ.6ರವರೆಗೆ ಮುಂದುವರಿಕೆ Read More »