September 2023

ಲೋಕಸಭಾ ಚುನಾವಣೆ ಹಿನ್ನಲೆ| ಬಿಜೆಪಿಯಿಂದ ದೇಶಾದ್ಯಂತ ಕಾಲ್ ಸೆಂಟರ್‌ ಸ್ಥಾಪನೆಗೆ ಸಿದ್ಧತೆ

ಸಮಗ್ರ ನ್ಯೂಸ್: ಮುಂಬರುವ ಪಂಚರಾಜ್ಯ, ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಹೆಚ್ಚು ಮತದಾರರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ದೇಶಾದ್ಯಂತ 200ಕ್ಕೂ ಹೆಚ್ಚು ಕಾಲ್ ​​ಸೆಂಟರ್​ಗಳನ್ನು ತೆರೆಯಲು ಸಿದ್ದತೆ ನಡೆಸಿದೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಮುಂದಾಗಿದೆ. ಹೊಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್​ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್​ ಹಾಗೂ ಸುನೀಲ್​ ಬನ್ಸಾಲ್​ ಇದರ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಕಾಲ್ ​ಸೆಂಟರ್​ಗಳನ್ನು […]

ಲೋಕಸಭಾ ಚುನಾವಣೆ ಹಿನ್ನಲೆ| ಬಿಜೆಪಿಯಿಂದ ದೇಶಾದ್ಯಂತ ಕಾಲ್ ಸೆಂಟರ್‌ ಸ್ಥಾಪನೆಗೆ ಸಿದ್ಧತೆ Read More »

ಭಾರತೀಯ ರೈಲ್ವೆ ಇಲಾಖೆ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ನಾರೀಶಕ್ತಿಗೆ ಒಲಿದ ಪ್ರಮುಖ ಹುದ್ದೆ| ರೈಲ್ವೇ ಮಂಡಳಿ ಅಧ್ಯಕ್ಷರಾಗಿ ಜಯಾ ವರ್ಮಾ ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ರೈಲ್ವೆ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರನ್ನಾಗಿ ಜಯ ವರ್ಮಾ ಸಿನ್ಹಾ ಅವರನ್ನು ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ. ಈ ಮೂಲಕ 166 ವರ್ಷಗಳ ರೈಲ್ವೆ ಇತಿಹಾಸದಲ್ಲೇ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಜಯ ವರ್ಮಾ ಸಿನ್ಹಾ ಪಾತ್ರರಾಗಿದ್ದಾರೆ. ಸಿಇಒ ಮತ್ತು ಅಧ್ಯಕ್ಷರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ದೇಶದ ರೈಲ್ವೆಯ ಅತ್ಯುನ್ನತ ಹುದ್ದೆಯಾಗಿದೆ. ಅನಿಲ್‌ ಕುಮಾರ್‌ ಲಹೋಟಿ ಅವರಿಂದ ತೆರವಾದ ಸ್ಥಾನಕ್ಕೆ ಜಯ ವರ್ಮಾ ಸಿನ್ಹಾ ನೇಮಕಗೊಂಡಿದ್ದು, ಶುಕ್ರವಾರ

ಭಾರತೀಯ ರೈಲ್ವೆ ಇಲಾಖೆ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ನಾರೀಶಕ್ತಿಗೆ ಒಲಿದ ಪ್ರಮುಖ ಹುದ್ದೆ| ರೈಲ್ವೇ ಮಂಡಳಿ ಅಧ್ಯಕ್ಷರಾಗಿ ಜಯಾ ವರ್ಮಾ ಅಧಿಕಾರ ಸ್ವೀಕಾರ Read More »

ಸುಳ್ಯದ ಕುಂ ಕುಂ ಫ್ಯಾಷನ್ ನಲ್ಲಿ ‘ಮಹಾ ಉತ್ಸವ’| ಅತ್ಯಧ್ಬುತ‌ ಕಲೆಕ್ಷನ್ ಇದೀಗ ಆಕರ್ಷಕ ದರದಲ್ಲಿ…

ಸಮಗ್ರ ನ್ಯೂಸ್: ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆ ಕುಂ ಕುಂ ಫ್ಯಾಷನ್ ನಲ್ಲಿ ಸೆ. 1ರಿಂದ ಕುಂ ಕುಂ ಮಹಾ ಉತ್ಸವ ಆರಂಭಗೊಂಡಿದೆ. ಮದುವೆ, ಶುಭ ಸಮಾರಂಭಗಳಿಗೆ ಬೇಕಾದ ಮಕ್ಕಳ, ಮಹಿಳೆಯರ ಹಾಗೂ ಪುರುಷರ ರೆಡಿಮೇಡ್ ಉಡುಪುಗಳ ಆಕರ್ಷಕ ಸಂಗ್ರಹವೇ ಇಲ್ಲಿದೆ. ನವ-ನವೀನ ಶೈಲಿಯ ಮನ ಮೆಚ್ಚುವ ಉಡುಪುಗಳ ಬೃಹತ್ ಸಂಗ್ರಹವೇ ಇಲ್ಲಿದ್ದು, ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಹಾ ಉತ್ಸವದಲ್ಲಿ ವಿವಿಧ ವಿನ್ಯಾಸಗಳ ಚೂಡಿದಾರ್ ಟಾಪ್, ಕಣ್ಮನ ಸೆಳೆಯುವ ಸೀರೆಗಳು ಹಾಗೂ ಪುರುಷರ ಉಡುಪುಗಳ ಮಹಾಪೂರ

ಸುಳ್ಯದ ಕುಂ ಕುಂ ಫ್ಯಾಷನ್ ನಲ್ಲಿ ‘ಮಹಾ ಉತ್ಸವ’| ಅತ್ಯಧ್ಬುತ‌ ಕಲೆಕ್ಷನ್ ಇದೀಗ ಆಕರ್ಷಕ ದರದಲ್ಲಿ… Read More »

ಹವಾಮಾನ ವರದಿ| ಸೆ.8ರವರೆಗೆ ರಾಜ್ಯಾದ್ಯಂತ ಮಳೆ ಸಾಧ್ಯತೆ| ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮತ್ತೆ ವರುಣಾರ್ಭಟ ಶುರುವಾಗಿದ್ದು, ಇಂದಿನಿಂದ ಸೆಪ್ಟೆಂಬರ್ 8 ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ

ಹವಾಮಾನ ವರದಿ| ಸೆ.8ರವರೆಗೆ ರಾಜ್ಯಾದ್ಯಂತ ಮಳೆ ಸಾಧ್ಯತೆ| ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ Read More »

ಇಂದು ಇಸ್ರೋದಿಂದ ಸೂರ್ಯಶಿಕಾರಿ| ಮತ್ತೊಂದು ಐತಿಹಾಸಿಕ ಹೆಜ್ಜೆ ಆದಿತ್ಯ L-1

ಸಮಗ್ರ ನ್ಯೂಸ್: ಚಂದ್ರಯಾನ-3 ಯಶಸ್ಸಿನ ಬಳಿಕ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದ್ದು, ಇಂದು ಬೆಳಗ್ಗೆ 11.50ಕ್ಕೆ ಸೂರ್ಯಯಾನ ಆದಿತ್ಯ ಎಲ್-1 ಉಡಾವಣೆಗೆ ಸಜ್ಹಾಗಿದೆ. ವಿಶ್ವದ ಕಣ್ಣು ಈಗ ಇಸ್ರೋದ ಸೂರ್ಯ ಮಿಷನ್ ಆದಿತ್ಯ ಎಲ್ -1 ಮೇಲೆ ನೆಟ್ಟಿದೆ. ಪಿಎಸ್‌ಎಲ್ವಿ-ಎಕ್ಸ್‌ಎಲ್ ರಾಕೆಟ್ ಸಹಾಯದಿಂದ ಇಸ್ರೋ ಇಂದು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇದರ ನಂತರ, ಅದನ್ನು ಎಲ್ 1 ಪಾಯಿಂಟ್ ಗೆ ಸಾಗಿಸಲಾಗುತ್ತದೆ. ಈ ಹಂತವನ್ನು ತಲುಪಿದ ನಂತರ, ಆದಿತ್ಯ ಎಲ್

ಇಂದು ಇಸ್ರೋದಿಂದ ಸೂರ್ಯಶಿಕಾರಿ| ಮತ್ತೊಂದು ಐತಿಹಾಸಿಕ ಹೆಜ್ಜೆ ಆದಿತ್ಯ L-1 Read More »

ಮೈಸೂರು ದಸರಾ ಗಜಪಯಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ವಿದ್ಯುಕ್ತ ಚಾಲನೆ

ಸಮಗ್ರ ನ್ಯೂಸ್: ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಸೆ. 1ರಂದು ಗಜಪಯಣಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರುತ್ತೆ, ಕಂಜನ್ ಈ ಬಾರಿ ದಸಾರಗೆ ಹೊಸ ಆನೆ ಸೇರ್ಪಡೆ ನಿಶಾನೆ ಆನೆಯನ್ನ ಇನ್ನೂ ನಿರ್ಧಾರ ಮಾಡಿಲ್ಲ. ಒಂದೂವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತದೆ. ನಾಡ ಅದಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ. ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಮೈಸೂರು ದಸರಾ ಗಜಪಯಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ವಿದ್ಯುಕ್ತ ಚಾಲನೆ Read More »

ಸೌಜನ್ಯ ಪರ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಬೆಂಬಲ| ಬೆಳ್ತಂಗಡಿ ಸಭೆಗೆ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧಾರ

ಸಮಗ್ರ ನ್ಯೂಸ್: ಪ್ರಬಲ ಒಕ್ಕಲಿಗ ಮಠ ಆದಿಚುಂಚನಗಿರಿಯ ಬೆಂಬಲ ಸೌಜನ್ಯಳ ನ್ಯಾಯದ ಹೋರಾಟದಲ್ಲಿ ಬೆಂಬಲಕ್ಕೆ ನಿಂತಿದ್ದು, ಭಾನುವಾರ(ಸೆ.3) ಬೆಳ್ತಂಗಡಿಯಲ್ಲಿ ನಡೆಯುವ ಸಭೆಗೆ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧರಿಸಿದ್ದಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿದ್ದರೂ ಒಕ್ಕಲಿಗ ಮಠವು ಅಲಿಪ್ತ ನೀತಿ ವಹಿಸಿತ್ತು. ಇದರಿಂದ ಬೇಸತ್ತ ಹೋರಾಟಗಾರರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿಯಾಗಿ ಬೆಂಬಲ ಸೂಚಿಸಲು ಮನವಿ ಮಾಡಿದ್ದರು. ಇದೀಗ ಬೆಳ್ತಂಗಡಿಯಲ್ಲಿ ಪ್ರಜಾವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ನಡೆಯುವ

ಸೌಜನ್ಯ ಪರ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಬೆಂಬಲ| ಬೆಳ್ತಂಗಡಿ ಸಭೆಗೆ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧಾರ Read More »

ಸುಳ್ಯ: ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡು ಗ್ರಾಮಸ್ಥರಿಂದ ಸಮಿತಿ ರಚನೆ

ಸಮಗ್ರ ನ್ಯೂಸ್: ಧರ್ಮಸ್ಥಳದ ಮಣ್ಣಸಂಕ ಬಳಿ ಕೊಲೆ ಮತ್ತು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಸೌಜನ್ಯ ಪರ ಹೋರಾಟ ಸಮಿತಿಯನ್ನು ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ರಚನೆ ಮಾಡಲಾಯಿತು. ಹೋರಾಟದ ನೇತೃತ್ವ ವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರೊಂದಿಗೆ ಮಾತನಾಡಿ ಯುವಕರೆಲ್ಲಾ ಸೇರಿ ಹೋರಾಟಕ್ಕೆಂದೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ ಮಾಡಲಾಯಿತು. ಯಾವುದೇ ಜಾತಿ ಹಾಗೂ ಪಕ್ಷ ಭೇದವಿಲ್ಲದೆ ಎಲ್ಲೇ ಪ್ರತಿಭಟನೆ ನಡೆದರು ತಿಮರೋಡಿ ಜೊತೆಯಾಗಿ ನಿಲ್ಲುತ್ತೇವೆಂದು ಆಶ್ವಾಸನೆ ನೀಡಿದರು. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ

ಸುಳ್ಯ: ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡು ಗ್ರಾಮಸ್ಥರಿಂದ ಸಮಿತಿ ರಚನೆ Read More »

ಪಡಿತರ ಚೀಟಿ ತಿದ್ದುಪಡಿಗೆ ಇಂದಿನಿಂದ ಕಾಲಾವಕಾಶ

ಸಮಗ್ರ ನ್ಯೂಸ್: ರೇಷನ್ ಕಾರ್ಡ್ ತಿದ್ದುಪಡಿಗೆ ಇಂದಿನಿಂದ ಕಾಲಾವಕಾಶ ನೀಡಲಾಗಿದ್ದು, ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿನ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ವಿವರಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ವಯಸ್ಕ ಮಹಿಳೆ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರಕಲಿದೆ. ಇನ್ನೊಂದೆಡೆ ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಸೇವಾ ಕೇಂದ್ರ ಹಾಗೂ ಸರಕಾರಿ ಕಚೇರಿಗಳ ಮುಂದೆ ಅಲೆದಾಡುತ್ತಿದ್ದಾರೆ. ಹೀಗಾಗಿ

ಪಡಿತರ ಚೀಟಿ ತಿದ್ದುಪಡಿಗೆ ಇಂದಿನಿಂದ ಕಾಲಾವಕಾಶ Read More »

ಚಿಕ್ಕಮಗಳೂರು : ಕಾಫಿ ಬೆಳೆ ನಾಶದಿಂದ ರೈತ ಆತ್ಮಹತ್ಯೆ| ಎರಡೇ ದಿನಕ್ಕೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಕಿನ ರೈತನೊಬ್ಬ ಬೆಳೆ ನಾಶದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.1 ರಂದು ನಡೆದಿದೆ. ಎರಡೇ ದಿನದಲ್ಲಿ ಇಬ್ಬರು ರೈತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಳೆ ಇಲ್ಲದೆ ಬೆಳೆ ನಾಶವಾದ ಹಿನ್ನೆಲೆ ಮನನೊಂದು ರೈತ ಪರಮೇಶ್ವರಪ್ಪ (52) ಆತ್ಮಹತ್ಯೆಗೆ ಶರಣಾಗಿದ್ದಾನೆ.ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. 3 ಎಕರೆ ಜಮೀನನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು. ಬ್ಯಾಂಕ್ ನಲ್ಲಿ ಬಡ್ಡಿ ಹಾಗೂ ಕೈಸಾಲ ಸೇರಿ 5 ಲಕ್ಷ ಸಾಲ

ಚಿಕ್ಕಮಗಳೂರು : ಕಾಫಿ ಬೆಳೆ ನಾಶದಿಂದ ರೈತ ಆತ್ಮಹತ್ಯೆ| ಎರಡೇ ದಿನಕ್ಕೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣು Read More »