September 2023

HEALTH TIPS: ಸದಾ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯ ಬಯಸುವಿರ? ಹಾಗಾದ್ರೆ ಈ ಟ್ರಿಕ್ಸ್ ಫಾಲೋ ಮಾಡಿ

ಸಮಗ್ರ ನ್ಯೂಸ್: ಮನೆಯಲ್ಲೇ ದೊರೆಯುವ ಪದಾರ್ಥಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಬಹುದು. ಅದು ಹೇಗೆ ತಿಳ್ಕೊಬೇಕಾ? ಇದನ್ನು ಪೂರ್ತಿ ಓದಿ. ಇತ್ತೀಚೆಗೆ ಮಧುಮೇಹ, ರಕ್ತದೊತ್ತಡದಂತೆ ಗ್ಯಾಸ್ಟ್ರಿಕ್ ಕೂಡ ಬೆಂಬಿಡದೆ ಕಾಡುತ್ತಿದೆ. ಗ್ಯಾಸ್ಟ್ರಿಕ್ ಅನ್ನು ಲಘುವಾಗಿ ತೆಗೆದುಕೊಳ್ಳದಿರಲು ಸಲಹೆ ನೀಡಲಾಗುತ್ತಿದೆ. ಇದು ಜಠರದ ದುರಿತ ರೂಪದಲ್ಲಿ ಹೊಟ್ಟೆಯ ಉರಿಯೂತದ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ. ಅತಿಯಾದ ಮದ್ಯಪಾನ ಸೇವನೆ, ಕೆಲವು ಸೋಂಕುಗಳು, ಅತಿಯಾಗಿ ತಿನ್ನುವುದು, ತೀರಾ ಕಡಿಮೆ ತಿನ್ನುವುದು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತವೆ. ಇಂತಹ ಅಪಾಯವನ್ನು ಮನೆಮದ್ದುಗಳ ಮೂಲಕ ಪರಿಹರಿಸಿಕೊಳ್ಳಲು […]

HEALTH TIPS: ಸದಾ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯ ಬಯಸುವಿರ? ಹಾಗಾದ್ರೆ ಈ ಟ್ರಿಕ್ಸ್ ಫಾಲೋ ಮಾಡಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನವನ್ನು ಆಧರಿಸಿ ವಾರ ಭವಿಷ್ಯ ನೀಡಲಾಗಿದ್ದು ಸೆಪ್ಟೆಂಬರ್ 3ರಿಂದ 9ರವರೆಗೆ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ… ಮೇಷ ರಾಶಿ:ಈ ವಾರ ನಿಮಗೆ ಉತ್ತಮವಾಗಿರಲಿದೆ. ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಈ ಸಮಯದಲ್ಲಿ, ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ಈ ವಾರ ಕುಟುಂಬದೊಂದಿಗೆ ತುಂಬಾ ಖುಷಿಯಾಗಿರಲಿದೆ. ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಹಣದ ವಿಷಯದಲ್ಲಿ ಈ ವಾರ ಉತ್ತಮವಾಗಿದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡಿದರೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಬೆಳ್ತಂಗಡಿಯಲ್ಲಿ ಸೌಜನ್ಯ ‌ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ| ದ.ಕ ಅಪರ ಜಿಲ್ಲಾಧಿಕಾರಿಗಳಿಂದ ಸಂಚಾರ ಬದಲಾವಣೆ ಮಾಡಿ ಆದೇಶ

ಸಮಗ್ರ ನ್ಯೂಸ್: ಸೌಜನ್ಯ ಪರ ಹೋರಾಟದ ಮುಂಚೂಣಿ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅಧ್ಯಕ್ಷರಾಗಿರುವ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಕು. ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಂಗದ ಸುಪರ್ಧಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬೃಹತ್‌ ಪ್ರತಿಭಟನಾ ಸಭೆಯನ್ನು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಸೆ 3 ರಂದು ಆಯೋಜಿಸಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿಯಲ್ಲಿ ವಾಹನ ಸಂಚಾರ ನಡೆಸುವ ರಸ್ತೆಯಲ್ಲಿ ಬದಲಾವಣೆ ಮಾಡಿ

ಬೆಳ್ತಂಗಡಿಯಲ್ಲಿ ಸೌಜನ್ಯ ‌ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ| ದ.ಕ ಅಪರ ಜಿಲ್ಲಾಧಿಕಾರಿಗಳಿಂದ ಸಂಚಾರ ಬದಲಾವಣೆ ಮಾಡಿ ಆದೇಶ Read More »

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ|

ಸಮಗ್ರ ನ್ಯೂಸ್: 2023-24 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಶನಿವಾರ ಪ್ರಕಟಗೊಂಡಿದೆ. ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಮಹಾಂತಯ್ಯ ಎಸ್ ಹೊಸಮಠ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು (ಓರ್ವ ವಿಶೇಷ ಶಿಕ್ಷಕರೂ ಒಳಗೊಂಡಂತೆ) 2023-24 ನೇ ಸಾಲಿಗೆ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು/ಸಹ ಶಿಕ್ಷಕರು/ವಿಶೇಷ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ| Read More »

ಸೌಜನ್ಯ ಅತ್ಯಾಚಾರ ‌ಮತ್ತು ಕೊಲೆ ಪ್ರಕರಣ| ನ್ಯಾಯಕ್ಕಾಗಿ ಸೆ.3ರಂದು ನಡೆಯಲಿದೆ ಐತಿಹಾಸಿಕ ಪ್ರತಿಭಟನೆ| ಹೋರಾಟಕ್ಕೆ ಪ್ರಬಲ ನಾಯಕರ ಸಾಥ್

ಸಮಗ್ರ ನ್ಯೂಸ್: ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕರೆದಿರುವ ಬೃಹತ್ ಸಮಾವೇಶಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಯವರು ನ್ಯಾಯ ಪರ, ಸತ್ಯದ ಪರ, ಮತ್ತು ಧರ್ಮದ ಪರ ನಿಲ್ಲುವ ಎಲ್ಲಾ ಬಾಂಧವರನ್ನು ಆಹ್ವಾನಿಸಿದ್ದು, ಬೆಳ್ತಂಗಡಿಯತ್ತ ಜನಸಾಗರ ಹರಿದು ಬರುವ ನಿರೀಕ್ಷೆಯಿದೆ. ನಾಳೆ(ಸೆ.3) ನಡೆಯುವ ಐತಿಹಾಸಿಕ ಪ್ರತಿಭಟನೆಗೆ, ಕಂಡು ಕೇಳರಿಯದ ರೀತಿಯಲ್ಲಿ ಜನಪ್ರವಾಹ ಬರಬಹುದಾದ ಸಾಧ್ಯತೆ ‌ಇದ್ದು ಹೋರಾಟಗಾರರಿಗೆ ಸಾಥ್ ನೀಡಲು ರಾಜ್ಯ ಒಕ್ಕಲಿಗ

ಸೌಜನ್ಯ ಅತ್ಯಾಚಾರ ‌ಮತ್ತು ಕೊಲೆ ಪ್ರಕರಣ| ನ್ಯಾಯಕ್ಕಾಗಿ ಸೆ.3ರಂದು ನಡೆಯಲಿದೆ ಐತಿಹಾಸಿಕ ಪ್ರತಿಭಟನೆ| ಹೋರಾಟಕ್ಕೆ ಪ್ರಬಲ ನಾಯಕರ ಸಾಥ್ Read More »

ಇಸ್ರೋ ಸೂರ್ಯಶಿಕಾರಿ ಸಕ್ಸಸ್| ಆದಿತ್ಯ‌ L-1 ಯಾಕೆ ಇಂಪಾರ್ಟೆಂಟ್ ಗೊತ್ತಾ?

ಸಮಗ್ರ ನ್ಯೂಸ್: ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ (PSLV-XLC57) ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ (ISRO) ತಿಳಿಸಿದೆ. ಆ ಮೂಲಕ ಭಾರತವು ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. ಈ ಕ್ಷಣಕ್ಕೆ ಶ್ರೀಹರಿಕೋಟಾದಲ್ಲಿ ಸೇರಿದ್ದ ಸಾವಿರಾರು

ಇಸ್ರೋ ಸೂರ್ಯಶಿಕಾರಿ ಸಕ್ಸಸ್| ಆದಿತ್ಯ‌ L-1 ಯಾಕೆ ಇಂಪಾರ್ಟೆಂಟ್ ಗೊತ್ತಾ? Read More »

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಭೇಟಿ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೆ. 1ರಂದು ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಆಗಮಿಸಿದರು. ಇಸ್ರೋ ಸಂಸ್ಥೆಯಿಂದ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್1 ಉಪಗೃಹವು ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭ ಶ್ರೀ ದೇವಳದ ಆಡಳಿತ ಮಂಡಳಿಯು ಕುಕ್ಕೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಲಾಯಿತು. ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆ. 31ರಂದು ರಾತ್ರಿ ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಆಗಮಿಸಿದರು. ದೇವಳಕ್ಕೆ ಭೇಟಿ ನೀಡಿದ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಭೇಟಿ Read More »

ಕೆ ಎಸ್ ಎಸ್ ಕಾಲೇಜು ಹಿಂದಿ ವಿಭಾಗದ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಾರ್ಯಕ್ರಮ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಸರಕಾರಿ ಪ್ರೌಢಶಾಲೆ ಏನೇಕಲ್ಲು ಇಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳನ್ನು ಸೆ.02 ರಂದು ಹಮ್ಮಿಕೊಂಡರು. ಮಹಾವಿದ್ಯಾಲಯದ ಹಿಂದಿ ವಿಭಾಗದ ವಿದ್ಯಾರ್ಥಿಗಳಾದ ಕಲ್ಪನಾ, ಅನ್ವಿತ, ಅಕ್ಷಯ್, ದೀಕ್ಷಾ, ಸಹನಾ, ಮಧುಶ್ರೀ, ವಿಕಾಸ್, ಕೀರ್ತನ್, ಸುದೀಪ್ ಜಿ. ಇವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಡೆಸಿದರು. ವಿಧ್ಯಾರ್ಥಿಗಳಿಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರಮೇಶ್

ಕೆ ಎಸ್ ಎಸ್ ಕಾಲೇಜು ಹಿಂದಿ ವಿಭಾಗದ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಾರ್ಯಕ್ರಮ Read More »

ಎನ್ಐಎ ನಿಂದ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ದಾಳಿ| ಉಗ್ರ ದಾಳಿಗೆ ಸಂಬಂಧಿಸಿದ ಡಿಜಿಟಲ್ ಉಪಕರಣಗಳ ವಶ

ಸಮಗ್ರ ನ್ಯೂಸ್: ರಾಷ್ಟ್ರೀಯ ತನಿಖಾ ದಳ(NIA) ಕರ್ನಾಟಕ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಉಗ್ರ ಸಂಘಟನೆಗಳ ಚಟುವಟಿಕೆಗೆ ಬಳಕೆ ಮಾಡುತ್ತಿದ್ದ ಡಿಜಿಟಲ್ ಉಪಕರಣಗಳು ಹಾಗೂ ಪ್ರಚೋದನಕಾರಿ ವಸ್ತುಗಳನ್ನು ತಪಾಸಣೆ ವೇಳೆ ವಶಕ್ಕೆ ಪಡೆದಿದೆ. ಭಾರತದಲ್ಲಿ ಭಯೋತ್ಪಾದನೆ ಹರಡುವ ಸಲುವಾಗಿ ದೇಶದಲ್ಲಿ ಯುವಕರನ್ನು ನೇಮಿಸಿ ಉಗ್ರಗಾಮಿಗಳನ್ನಾಗಿಸಲು ಭಾರತೀಯ ಉಪಖಂಡದಲ್ಲಿ ಅಲ್-ಖೈದಾ (ಎಕ್ಯೂಐಎಸ್) ಮತ್ತು ತೆಹರಿಕ್-ಇ-ತಾಲಿಬಾನ್ ನಡೆಸಿದ ಪಿತೂರಿಗೆ ಸಂಬಂಧಿಸಿದಂತೆ ಎನ್​ಐಎ ಗುರುವಾರ ಈ ದಾಳಿಗಳನ್ನು ನಡೆಸಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ

ಎನ್ಐಎ ನಿಂದ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ದಾಳಿ| ಉಗ್ರ ದಾಳಿಗೆ ಸಂಬಂಧಿಸಿದ ಡಿಜಿಟಲ್ ಉಪಕರಣಗಳ ವಶ Read More »

ಸೂರ್ಯನಿಗೆ ಬಳೆ ತೊಡಿಸಿದವರಾರು? ಪೊನ್ನಂಪೇಟೆಯಲ್ಲಿ ಕಂಡುಬಂದ ಅಪರೂಪದ ವಿದ್ಯಮಾನ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಅಪರೂಪದ ಬಾಹ್ಯಾಕಾಶ ವಿದ್ಯಮಾನವೊಂದು ಕಾಣಿಸಿಕೊಂಡಿದ್ದು ಸೂರ್ಯನ ಸುತ್ತ ಆಕರ್ಷಕ ಬಳೆಯ ರೀತಿ ಗೋಚರವಾಗಿದೆ. ಶುಕ್ರವಾರ ಮೂರು ಬಣ್ಣಗಳ ಬೃಹತ್ ಉಂಗುರದ ಮಾದರಿ ಪೊನ್ನಂಪೇಟೆ ತಾಲೂಕಿನ ಕೆಲವೆಡೆ ಕಾಣಿಸಿದೆ. ಬೆಳಕಿನ ವಕ್ರೀಭವನ ಮತ್ತು ಮೋಡದಲ್ಲಿನ ನೀರಿನ ಕಣಗಳಿಂದ ಉಂಗುರದ ರೀತಿ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ. ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಮತ್ತು ಶ್ರೀಮಂಗಲ ವ್ಯಾಪ್ತಿಯಲ್ಲಿ ಸೂರ್ಯ‌ನ ಸುತ್ತ ಉಂಗುರದ ಸ್ವರೂಪದಲ್ಲಿ ಕಾಣಿಸಿದೆ.

ಸೂರ್ಯನಿಗೆ ಬಳೆ ತೊಡಿಸಿದವರಾರು? ಪೊನ್ನಂಪೇಟೆಯಲ್ಲಿ ಕಂಡುಬಂದ ಅಪರೂಪದ ವಿದ್ಯಮಾನ Read More »