September 2023

ಕುಡಿದು ದೇವಸ್ಥಾನದ ಗೋಡೆಗೆ ಮೂತ್ರ ಮಾಡಿದ್ದನ್ನು ಪ್ರಶ್ನಿಸಿದ ಬಾಲಕನ ಕೊಲೆಗೈದ ಪಾತಕಿ

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ 10ನೇ ತರಗತಿ ಬಾಲಕನನ್ನು ಅಪಘಾತ ಮಾಡಿ ಕೊಲೆ ಮಾಡಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಮೃತ ಬಾಲಕನನ್ನು ಅದಿಶೇಖರ್ (15) ಎಂದು ಗುರುತಿಸಲಾಗಿದೆ. ಸಂಬಂಧಿಕನೇ ಈತನನ್ನು ಕೊಲೆ ಮಾಡಿರುವುದು ಬಯಲಾಗಿದೆ. ಅರುಣ್ ಕುಮಾರ್ ಹಾಗೂ ದೀಪಾ ಮಗನಾಗಿರುವ ಅದಿಶೇಖರ್, ಆಗಸ್ಟ್ 31ರಂದು ಮೃತಪಟ್ಟಿದ್ದಾನೆ. ಈತ ಕತ್ತಕ್ಕಡ ಚಿನ್ಮಯ ಮಿನ್ ಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದನು. ಈ ಘಟನೆ ಪುಳಿಂಕೋಡ್ ದೇವಸ್ಥಾನದ ಬಳಿ ಸಂಜೆ […]

ಕುಡಿದು ದೇವಸ್ಥಾನದ ಗೋಡೆಗೆ ಮೂತ್ರ ಮಾಡಿದ್ದನ್ನು ಪ್ರಶ್ನಿಸಿದ ಬಾಲಕನ ಕೊಲೆಗೈದ ಪಾತಕಿ Read More »

ಸ್ಮಶಾನ ಸದೃಶವಾದ ಮೊರಾಕ್ಕೋ| ಶತಮಾನದ ಅತಿದೊಡ್ಡ ಭೂಕಂಪಕ್ಕೆ 2800 ಮಂದಿ ಬಲಿ

ಸಮಗ್ರ ನ್ಯೂಸ್: ಶತಮಾನದಲ್ಲೇ ದೇಶದ ಅತಿದೊಡ್ಡ ಭೂಕಂಪದಿಂದ ಸಾವಿನ ಸಂಖ್ಯೆ 2,800 ಕ್ಕೆ ಏರಿಕೆಯಾಗಿದ್ದು, ಹಲವರು ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 8) ತಡರಾತ್ರಿ ಹೈ ಅಟ್ಲಾಸ್ ಪರ್ವತಗಳಲ್ಲಿ ಸಂಭವಿಸಿದ 6.8 ತೀವ್ರತೆಯ ಭೂಕಂಪದಿಂದ ಬದುಕುಳಿದವರನ್ನು ಹುಡುಕುವ ಮೊರೊಕನ್ ಪ್ರಯತ್ನಗಳಿಗೆ ಸ್ಪೇನ್, ಯುಕೆ ಮತ್ತು ಕತಾರ್ನ ಶೋಧ ತಂಡಗಳು ಸೇರಿಕೊಂಡವು. ಸಾವಿನ ಸಂಖ್ಯೆ 2,862 ಕ್ಕೆ ಏರಿದೆ ಮತ್ತು 2,562 ಜನರು ಗಾಯಗೊಂಡಿದ್ದಾರೆ ಎಂದು ಸೋಮವಾರ ತಡರಾತ್ರಿ ವರದಿಯಾಗಿದೆ. ಭೂಕಂಪನ ವಲಯದ ಹೆಚ್ಚಿನ ಭಾಗವು

ಸ್ಮಶಾನ ಸದೃಶವಾದ ಮೊರಾಕ್ಕೋ| ಶತಮಾನದ ಅತಿದೊಡ್ಡ ಭೂಕಂಪಕ್ಕೆ 2800 ಮಂದಿ ಬಲಿ Read More »

ಬಿಸ್ಕೆಟ್ ಪ್ಯಾಕ್‌ನಲ್ಲಿ ಒಂದು ಬಿಸ್ಕೆಟ್ ಕಡಿಮೆ| ಗ್ರಾಹಕನಿಗೆ 1 ಲಕ್ಷ ರೂ. ಪರಿಹಾರ

ಸಮಗ್ರ ನ್ಯೂಸ್: ಬಿಸ್ಕೆಟ್ ಪ್ಯಾಕ್‌ನಲ್ಲಿ ಜಾಹೀರಾತಿನಲ್ಲಿ ತೋರಿಸಿದ್ದಕ್ಕಿಂತ ಒಂದೇ ಒಂದು ಬಿಸ್ಕೆಟ್ ಕಡಿಮೆ ಇದ್ದದ್ದಕ್ಕೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ಗ್ರಾಹಕನಿಗೆ ಒಂದು ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ. ಚೆನ್ನೈ ಮೂಲದ ಪಿ ದಿಲ್ಲಿಬಾಬು ಎಂಬುವವರು ಸನ್‌ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್‌ ಪ್ಯಾಕೆಟೊಂದನ್ನು ಖರೀದಿಸಿದ್ದರು. ಬಿಸ್ಕೆಟ್ ಪ್ಯಾಕ್ ನ ಜಾಹೀರಾತಿನ ಮೇಲೆ 16 ಬಿಸ್ಕೆಟ್ ಎಂದು ನಮೂದಿಸಲಾಗಿತ್ತು. ಆದರೆ ಅದರಲ್ಲಿ 15 ಬಿಸ್ಕೆಟ್‌ ಮಾತ್ರ ಇತ್ತು. ಆದ್ದರಿಂದಬಿಸ್ಕೆಟ್ ಸಂಸ್ಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.ಈ ಬಗ್ಗೆ ಸ್ಪಷ್ಟನೆ

ಬಿಸ್ಕೆಟ್ ಪ್ಯಾಕ್‌ನಲ್ಲಿ ಒಂದು ಬಿಸ್ಕೆಟ್ ಕಡಿಮೆ| ಗ್ರಾಹಕನಿಗೆ 1 ಲಕ್ಷ ರೂ. ಪರಿಹಾರ Read More »

ಕೇರಳದಲ್ಲಿ ಮತ್ತೆ ನಿಫಾ ಭೀತಿ| ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಸಮಗ್ರ ನ್ಯೂಸ್: ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಎರಡು ಅಸಹಜ ಸಾವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸಚಿವಾಲಯ ನಿಫಾ ಸೋಂಕು ಭೀತಿಯ ಬಗ್ಗೆ ಎಚ್ಚರಿಕೆ ನೀಡಿದೆ. ಈ ಎರಡು ಸಾವುಗಳು ನಿಫಾ ವೈರಸ್ ನಿಂದ ಸಂಭವಿಸಿವೆ ಎಂದು ಶಂಕಿಸಲಾಗಿದ್ದು, ಮೃತರ ಪೈಕಿ ಒಬ್ಬರ ಸಂಬಂಧಿಕರು ಕೂಡಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಉನ್ನತ ಮಟ್ಟದ ಸಭೆ

ಕೇರಳದಲ್ಲಿ ಮತ್ತೆ ನಿಫಾ ಭೀತಿ| ಆರೋಗ್ಯ ಇಲಾಖೆಯಿಂದ ಎಚ್ಚರಿಕೆ Read More »

ಕೆಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನ| ಸೆ. 30 ಕೊನೆಯ ದಿನಾಂಕ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023ನ್ನು ನ. 26ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆ ಪ್ರಕಟನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗೆ ಆಹ್ವಾನಿಸಲಾಗಿದೆ. ಮೊದಲ ಪತ್ರಿಕೆ-I: ಸಾಮಾನ್ಯ ಪತ್ರಿಕೆಯು ಬೋಧನೆ ಮತ್ತು ಬುದ್ಧಿ ಸಾಮರ್ಥ್ಯ. ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಆಳೆಯುವಂತಹದ್ದಾಗಿರುತ್ತದೆ. ಈ ಪತ್ರಿಕೆಯು 50

ಕೆಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನ| ಸೆ. 30 ಕೊನೆಯ ದಿನಾಂಕ Read More »

ಕಡಾಯಿ ಪನ್ನೀರ್ ಮಸಾಲ

ಸಮಗ್ರ ನ್ಯೂಸ್: ಕಡಾಯಿ ಪನ್ನೀರ್ ಮಸಾಲ ಇದನ್ನ ಮನೇಲೇ ರುಚಿ ರುಚಿಯಾಗಿ ಮಾಡ್ಬೋದು. ಇದನ್ನ ಬೆಳ್ಳಿಗಿನ ತಿಂಡಿ ಚಪಾತಿ ಪರೋಟ ಜೊತೆ ತಿಂದ್ರೆ ಸೂಪರ್ ಆಗಿರುತ್ತದೆ. ಇನ್ನುನು ಇದನ್ನ ಹೇಗೆ ಮಾಡೋದು ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ. ಬೇಕಾಗುವ ಪದಾರ್ಥಗಳು:- ಪನ್ನೀರ್ ತುಂಡುಗಳು-200 ಗ್ರಾಂ, ಟೊಮೆಟೊ ಪ್ಯೂರಿ – 1 ಬಟ್ಟಲು ,ಕ್ಯಾಪ್ಸಿಕಂ – 1 (ಚಿಕ್ಕದ್ದಾಗಿ ಕತ್ತರಿಸಿದ್ದು), ಈರುಳ್ಳಿ – 1 , ಕ್ರೀಂ – 1 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ

ಕಡಾಯಿ ಪನ್ನೀರ್ ಮಸಾಲ Read More »

ಲೆಫ್ಟಿನೆಂಟ್ ಪದವಿಗೇರಿದ ಮುರುವಂಡ ತನುಷ್ ಅಪ್ಪಯ್ಯ

ಸಮಗ್ರ ನ್ಯೂಸ್: ಕೊಡಗಿನ ಮುರುವಂಡ ತನುಷ್ ಅಪ್ಪಯ್ಯ ಅವರು ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಭಾರತೀಯ ಸೇನೆಯಲ್ಲಿ ಸೆ .11 ರಂದು ತೇರ್ಗಡೆಯಾಗಿ ಲೆಫ್ಟಿನೆಂಟ್ ಪದವಿಗೇರಿದ್ದಾರೆ. ತನುಷ್ ಅಪ್ಪಯ್ಯ ಅವರು ಕೊಳತೋಡು ಬೈಗೋಡು ಗ್ರಾಮದವರಾಗಿದ್ದು, ಭವಿಷ್ಯದಲ್ಲಿ ಭಾರತೀಯ ಸೇನೆಯ ಉನ್ನತಾಧಿಕಾರಿಯಾಗಿ ಪದೋನ್ನತಿ ಪಡೆಯಲಿರುವ ಕೊಡಗಿನ ಸೇನಾಧಿಕಾರಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಇವರು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ (ಕಾಪ್ಸ್) ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದು. ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಲಹಾಬಾದ್

ಲೆಫ್ಟಿನೆಂಟ್ ಪದವಿಗೇರಿದ ಮುರುವಂಡ ತನುಷ್ ಅಪ್ಪಯ್ಯ Read More »

ಸುಳ್ಯ: ಭಾಲಾವಲೀಕಾರ್ ರಾಜಾಪುರ ಸಾರಸ್ವತ ಯುವ ಸಮಾಜ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ

ಸಮಗ್ರ ನ್ಯೂಸ್: ಭಾಲಾವಲೀಕಾರ್ ರಾಜಾಪುರ ಸಾರಸ್ವತ ಯುವ ಸಮಾಜ ಸುಳ್ಯ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಪ್ರಯುಕ್ತ ಸೆ. 10ರಂದು ಆಟೋಟ ಹಾಗೂ ಮನೋರಂಜನಾ ಕಾರ್ಯಕ್ರಮವು ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರ ಸುಳ್ಯ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃಷ್ಣವೇಷ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳಲ್ಲಿ ಸಮಾಜ ಬಾಂಧವರು ಆಸಕ್ತಿಯಿಂದ ಭಾಗವಹಿಸಿದ್ದರು. ಸುಳ್ಯ ವಿಧಾನ ಸಭಾ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಮಾಜದ ವತಿಯಿಂದ ಅಭಿನಂದನಾ ಕಾರ್ಯಕ್ರಮವು ನಡೆಯಿತು. 2022-23ನೇ ಶೈಕ್ಷಣಿಕ ವರ್ಷದಲ್ಲಿ ಎಸ್

ಸುಳ್ಯ: ಭಾಲಾವಲೀಕಾರ್ ರಾಜಾಪುರ ಸಾರಸ್ವತ ಯುವ ಸಮಾಜ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ Read More »

ಮಂಗಳೂರು: ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಚಾಲನೆ| ಸಪ್ತಮಿ‌ ಗೌಡ ಬ್ರಾಂಡ್ ಅಂಬಾಸಿಡರ್

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಮೈತ್ರಿ ಮುಟ್ಟಿನ ಕಪ್ ಯೋಜನೆ ವಿತರಣಾ ಬೃಹತ್ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಚಾಲನೆ ನೀಡಿದರು. ರಾಜ್ಯ ಸರ್ಕಾರ ಆರಂಭಿಸಿರುವ ‘ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಕನ್ನಡ ಚಿತ್ರರಂಗದ ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ರಾಯಭಾರಿ ಆಗಿದ್ದಾರೆ. ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗಿಯಾದ ಸಪ್ತಮಿ ಗೌಡ ಮುಟ್ಟಿನ ಕಪ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ‘ತಾನು ಸ್ವಿಮ್ಮಿಂಗ್ ನಲ್ಲಿ

ಮಂಗಳೂರು: ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಚಾಲನೆ| ಸಪ್ತಮಿ‌ ಗೌಡ ಬ್ರಾಂಡ್ ಅಂಬಾಸಿಡರ್ Read More »

ರಾಜ್ಯ, ರಾಷ್ಟ್ರ ರಾಜಕಾರಣದ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ| ಯುಗಾದಿ ಬಳಿಕ ಭಾರೀ ಬದಲಾವಣೆ

ಸಮಗ್ರ ನ್ಯೂಸ್: ರಾಜ್ಯ ಹಾಗೂರಾಷ್ಟ್ರ ರಾಜಕಾರಣದ ಬಗ್ಗೆ ಇಂದು ಕೋಡಿಮಠದ ಶಿವಾನದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಅಸ್ಥಿರತೆ ಉಂಟಾಗಲಿದೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣ, ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿರತೆ ಉಂಟಾಗಲಿದೆ. ಯುಗಾದಿಯ ನಂತ್ರ ಏನಾಗುತ್ತೆ ಅಂತ ಕಾದು ನೋಡಿ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಅಚ್ಚರಿಯನ್ನು ಎದುರು ನೋಡುವಂತೆ ಹೇಳಿದ್ದಾರೆ.

ರಾಜ್ಯ, ರಾಷ್ಟ್ರ ರಾಜಕಾರಣದ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ| ಯುಗಾದಿ ಬಳಿಕ ಭಾರೀ ಬದಲಾವಣೆ Read More »