ಮೂಡುಬಿದಿರೆ: ಅ.6 ಮತ್ತು 7 ರಂದು ‘ಆಳ್ವಾಸ್ ಪ್ರಗತಿ -2023’ ಉದ್ಯೋಗ ಮೇಳ| ಪ್ರತಿಭಾನ್ವಿತರಿಗೆ ಸಿಗಲಿದೆ ಹಲವು ಉದ್ಯೋಗ
ಸಮಗ್ರ ನ್ಯೂಸ್: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್ 6 ಮತ್ತು 7ರಂದು ‘ಆಳ್ವಾಸ್ ಪ್ರಗತಿ 2023’ ಉದ್ಯೋಗ ಮೇಳ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲ ಕುರಿಯನ್, ‘ಗ್ರಾಮೀಣ ಭಾಗದ ಪ್ರತಿಭಾನ್ವಿತ ಯುವಕರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಪ್ರತಿಷ್ಠಾನವು ಉದ್ಯೋಗ ಮೇಳ ಆಯೋಜಿಸುತ್ತಾ ಬಂದಿದೆ.ಈ ವರ್ಷ 13ನೇ ಆವೃತ್ತಿಯ ಮೇಳ ನಡೆಯಲಿದೆ’ ಎಂದು ತಿಳಿಸಿದರು. ‘ಐಟಿ, ತಯಾರಿಕೆ, ಮಾರಾಟ, ಚಿಲ್ಲರೆ ವ್ಯಾಪಾರ, […]