September 2023

ಮಡಿಕೇರಿ: ಟ್ಯಾಂಕರ್ -ಬೈಕ್ ಅಪಘಾತ | ವಿದ್ಯಾರ್ಥಿ ಗಂಭೀರ

ಸಮಗ್ರ ನ್ಯೂಸ್: ಮಡಿಕೇರಿ ಸಮೀಪದ ಕಾಟಕೇರಿ ಬಳಿಕ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಉಡುಪಿಯಿಂದ ಬೈಕ್‌ನಲ್ಲಿ ಮಡಿಕೇರಿ ಕಡೆಗೆ ಬರುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದ್ದು ಮಡಿಕೇರಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ವಿಜೇಶ್ ಮತ್ತು ಶಿವಾನಂದ ಎಂಬಾತನ ಹೊಟ್ಟೆಭಾಗಕ್ಕೆ ಗಾಯವಾಗಿದ್ದು ಗಂಭೀರ ಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇಬ್ಬರು ಸವಾರರು ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದ್ದು, ಅಫಘಾತದಲ್ಲಿ ಬೈಕ್ ನ ಮುಂಭಾಗ ನಜ್ಜುಗುಜ್ಜಾಗಿದೆ.

ಮಡಿಕೇರಿ: ಟ್ಯಾಂಕರ್ -ಬೈಕ್ ಅಪಘಾತ | ವಿದ್ಯಾರ್ಥಿ ಗಂಭೀರ Read More »

ಚಿಕ್ಕಮಗಳೂರು : ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ವೈದ್ಯಾಧಿಕಾರಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸೆ. 20 ರಂದು ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಬಾಳೆಹೊನ್ನೂರು ಸರ್ಕಾರಿ ಅಸ್ಪತ್ರೆ ವಸತಿ ಗೃಹದಲ್ಲಿ ಈ ಘಟನೆ ನಡೆದಿದ್ದು, ಈ ಹಿಂದೆ ನರ್ಸ್ ಕೆನ್ನೆಗೆ ಹೊಡೆದು ಅಮಾನತ್ತಾಗಿದ್ದರು. ವೈದ್ಯ ಎಲ್ಡೋಸ್ ಅವರ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿ ಬಂದಿತ್ತು. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಲ್ಡೋಸ್ ವಿರುದ್ದ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ

ಚಿಕ್ಕಮಗಳೂರು : ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ Read More »

ಕಾವೇರಿ‌ ನದಿ ನೀರು ಬಿಕ್ಕಟ್ಟು| ಮೌನಕ್ಕೆ ಶರಣಾದ ಸ್ಯಾಂಡಲ್ ವುಡ್ ನಟರ ವಿರುದ್ಧ ಆಕ್ರೋಶ

ಸಮಗ್ರ ನ್ಯೂಸ್: ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​​ ನೀರನ್ನು ಹರಿಸಬೇಕೆಂಬ ಸೆ.12ರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಕಾವೇರಿ ಹೋರಟ ದಿನೇ ದಿನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈವರೆಗೂ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಸ್ಯಾಂಡಲ್​ವುಡ್​ ನಟರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ನಟರ

ಕಾವೇರಿ‌ ನದಿ ನೀರು ಬಿಕ್ಕಟ್ಟು| ಮೌನಕ್ಕೆ ಶರಣಾದ ಸ್ಯಾಂಡಲ್ ವುಡ್ ನಟರ ವಿರುದ್ಧ ಆಕ್ರೋಶ Read More »

ಬನ್ನೇರುಘಟ್ಟ: ಸಾಂಕ್ರಾಮಿಕ ರೋಗಕ್ಕೆ ಏಳು ಚಿರತೆ ಮರಿಗಳು ಬಲಿ| ಮುನ್ನೆಚರಿಕಾ ಕ್ರಮವಾಗಿ ಔಷಧಿ ಸಿಂಪಡಣೆ

ಸಮಗ್ರ ನ್ಯೂಸ್: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಏಳು ಚಿರತೆ ಮರಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದವು. ಬನ್ನೇರುಘಟ್ಟದಲ್ಲಿರುವ ಚಿರತೆ ಮರಿಗಳಿಗೆ ಫೆಲಿನ್ ಪ್ಯಾನ್ಲೂಕೋಪೇನಿಯಾ (Feline panleukopenia-FP) ಎಂಬ ಮಾರಕ ವೈರಸ್ ಗೆ ತುತ್ತಾಗಿದ್ದರಿಂದ ಆಗಸ್ಟ್‌ 22ರಿಂದ ಸೆಪ್ಟೆಂಬರ್‌ 5ರ ನಡುವೆ ಏಳು ಚಿರತೆ ಮರಿಗಳು ಪ್ರಾಣ ಕಳೆದುಕೊಂಡಿದ್ದವು. ಫೆಲೈನ್ ಪ್ಯಾನ್ಲ್ಯುಕೋಪೆನಿಯಾ (ಎಫ್‌ಪಿ) ಬೆಕ್ಕಿನ ಪಾರ್ವೊವೈರಸ್‌ನಿಂದ ಉಂಟಾಗುವ ಬೆಕ್ಕುಗಳ ವೈರಲ್ ಕಾಯಿಲೆಯಾಗಿದೆ. ಅಧಿಕಾರಿಗಳ ಪ್ರಕಾರ, ಮೊದಲ ಪ್ರಕರಣ ಏಕಾಏಕಿ ಆಗಸ್ಟ್ 22 ರಂದು ವರದಿಯಾಗಿತ್ತು. ಏಳು ಮರಿಗಳು

ಬನ್ನೇರುಘಟ್ಟ: ಸಾಂಕ್ರಾಮಿಕ ರೋಗಕ್ಕೆ ಏಳು ಚಿರತೆ ಮರಿಗಳು ಬಲಿ| ಮುನ್ನೆಚರಿಕಾ ಕ್ರಮವಾಗಿ ಔಷಧಿ ಸಿಂಪಡಣೆ Read More »

ಕಾರ್ಕಳ: ಸೌಜನ್ಯ ಪರ ಹೋರಾಟಕ್ಕೆ ಅನುಮತಿ ನೀಡದಂತೆ ಮನವಿ ಕೊಟ್ಟ ಜೈನ ಸಂಘಟನಾ‌ ಮುಖಂಡರು| ಉಡುಪಿ ಎಸ್.ಪಿ ಖಡಕ್ ವಾರ್ನಿಂಗ್

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು‌ ಹತ್ಯೆ ಪ್ರಕರಣದ ನೈಜ‌ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆಯಲಿರುವ ಪ್ರತಿಭಟನಾ ಸಭೆಗೆ ಅನುಮತಿ ನೀಡದಂತೆ ಕೆಲವು ಜೈನ ಸಂಘಟನೆಗಳ ಮುಖಂಡರಿಗೆ ಉಡುಪಿ ಎಸ್.ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸೆ.20ರಂದು ಎಸ್.ಪಿ ಕಚೇರಿಗೆ ಆಗಮಿಸಿದ ಮುಖಂಡರ ಜೊತೆಗೆ ಮಾತನಾಡಿದ ಎಸ್.ಪಿ ಡಾ. ಅರುಣ್ ಕೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಅದನ್ನು ನಿರಾಕರಿಸಲಾಗದು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯುಂಟಾಗದಂತೆ ಸಭೆ ನಡೆಸಲು ಅನುಮತಿ ನೀಡಿದ್ದೇವೆ.

ಕಾರ್ಕಳ: ಸೌಜನ್ಯ ಪರ ಹೋರಾಟಕ್ಕೆ ಅನುಮತಿ ನೀಡದಂತೆ ಮನವಿ ಕೊಟ್ಟ ಜೈನ ಸಂಘಟನಾ‌ ಮುಖಂಡರು| ಉಡುಪಿ ಎಸ್.ಪಿ ಖಡಕ್ ವಾರ್ನಿಂಗ್ Read More »

ರಾಜ್ಯ ರಾಜಧಾನಿಯಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ

ಸಮಗ್ರ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರು ಈಗ, ರೋಗಗಳ ನಗರಿ ಎಂಬ ಹೊಸ ನಾಮಕರಣ ಆಗೂದರಲ್ಲಿ ಅಚ್ಚರಿ ಏನಿಲ್ಲ. ಇದಕ್ಕೆ ಕಾರಣ ಹೆಚ್ಚುತ್ತಿರುವ ಡೆಂಗ್ಯೂ ಕೇಸ್ ಗಳ ಸಂಖ್ಯೆ ಕಳೆದ ಒಂದೆರಡು ತಿಂಗಳಿನಿಂದ ಏರುಗತಿಯಲ್ಲಿದ್ದ ಪ್ರಕರಣಗಳ ಸಂಖ್ಯೆ ಈಗ ಆತಂಕಕಾರಿ ಗಡಿ ತಲುಪಿದೆ. ದಿನಕಳೆದಂತೆ ವಾತಾವರಣದಲ್ಲಿನ ಬದಲಾವಣೆ, ಮಳೆ ಬಿಸಿಲು ಸೇರಿದಂತೆ ಹಲವು ಕಾರಣಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಬೆಂಗಳೂರು ಡೆಂಘಿಯ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದ್ದಂತೆ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ Read More »

ಗೆಳೆಯರ ಬಳಗ ಸುರತ್ಕಲ್ 14ನೇ ವರ್ಷದ ಶಾರದಾ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಮಗ್ರನ್ಯೂಸ್: ಹಿಂದುತ್ವಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಹಿಂದೂ ಕಣ್ಮಣಿ ದಿವಂಗತ ಮಂಜುನಾಥ್ ಮಂಗಳೂರು ಇವರ ಸವಿನೆನಪಿಗಾಗಿ, ಗೆಳೆಯರ ಬಳಗ ಸುರತ್ಕಲ್ ವತಿಯಿಂದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ದಸರಾ ಮಹೋತ್ಸವಕ್ಕೆ 14ನೇ ವರ್ಷದ ಶಾರದಾ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ಮುಖಾಂತರ ಪೆರ್ಮುದೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎಂ.ಎಸ್.ಇ.ಝಡ್ ಕಾಲೋನಿ ಕೋಡಿಕೆರೆ ಕುಳಾಯಿ ಇಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ

ಗೆಳೆಯರ ಬಳಗ ಸುರತ್ಕಲ್ 14ನೇ ವರ್ಷದ ಶಾರದಾ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕಾವೇರಿಸುತ್ತಿರುವ ಕಾವೇರಿ/ ಇಂದು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ

ಸಮಗ್ರ ನ್ಯೂಸ್: ಕಾವೇರಿ‌ ನದಿ‌ ನೀರು ಹಂಚಿಕೆ ವಿವಾದ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು, ಈ ಕುರಿತು ಇಂದು ದೆಹಲಿಯಲ್ಲಿ ‌ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರು ಮತ್ತು ಸರ್ವಪಕ್ಷ ಸಂಸದರ ಸಭೆ ನಡೆಯುತ್ತಿದೆ. ಸೆಪ್ಟೆಂಬರ್‌ 15ರಂದು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿತ್ತು. ಆದರೆ ತಮಿಳುನಾಡು ಸರ್ಕಾರ ತಮ್ಮ ಭತ್ತದ ಬೆಳೆಗೆ ನೀರು ಸಾಕಾಗುತ್ತಿಲ್ಲ ಎಂದು ಮನವಿ ಮಾಡಿದ ಕಾರಣದಿಂದಾಗಿ, ಮತ್ತೆ

ಕಾವೇರಿಸುತ್ತಿರುವ ಕಾವೇರಿ/ ಇಂದು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ Read More »

1840ರ ಸುಬ್ರಹ್ಮಣ್ಯದ ಕಥೆ ಹೇಳುವ “ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ”

ಸಮಗ್ರ ನ್ಯೂಸ್ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ, ಮಿಷನರಿಗಳಾದ ರೆ. ಹರ್ಮನ್ ಮ್ಯೋಗ್ಲಿಂಗ್ ಮತ್ತು ರೆ. ಗಾಟ್ ಫ್ರೈಡ್ ವೈಗಲ್ ವರದಿಯ ಅನುವಾದಿತ ‘ಮಿಷನರಿ ಪ್ರವಾಸ – ಮಂಗಳೂರಿನಿಂದ‌ ಸುಬ್ರಹ್ಮಣ್ಯಕ್ಕೆ’ ಕೃತಿ 1840ರ ಸುಬ್ರಹ್ಮಣ್ಯದ‌ ಕಥೆಯನ್ನು ಹೇಳುತ್ತದೆ. 1840ರ ನವೆಂಬರ್ 18 ರಂದು ಮಂಗಳೂರಿನಿಂದ ಹೊರಡುವ ಮ್ಯೋಗ್ಲಿಂಗ್ ಮತ್ತು ವೈಗಲ್ ಫರಂಗಿಪೇಟೆ, ಬಂಟ್ವಾಳ, ಕಾರಿಂಜ, ಗುರುವಾಯನಕೆರೆ, ಧರ್ಮಸ್ಥಳ, ಕೊಕ್ಕಡ, ಕುಲ್ಕುಂದ ಮಾರ್ಗವಾಗಿ ಸುಬ್ರಹ್ಮಣ್ಯ ತಲುಪುತ್ತಾರೆ. ನಂತರ ಸುಳ್ಯ, ಅಡೂರು, ಕಾಸರಗೋಡು ಮಾರ್ಗವಾಗಿ ಮಂಗಳೂರು ತಲುಪುತ್ತಾರೆ.

1840ರ ಸುಬ್ರಹ್ಮಣ್ಯದ ಕಥೆ ಹೇಳುವ “ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ” Read More »

ಶಬರಿಮಲೆ ಯಾತ್ರೆ ತೆರಳಿದ್ದ ಸುಳ್ಯದ ವಕೀಲರಿಂದ ಪಂಪಾ ನದಿಯಲ್ಲಿ ಸ್ವಚ್ಛತಾ ಸೇವಾ ಕಾರ್ಯ

ಸಮಗ್ರ ನ್ಯೂಸ್: ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ದರ್ಶನಾರ್ಥಿ ಸುಳ್ಯದ ವಕೀಲರ ತಂಡದಿಂದ ಶಬರಿಮಲೆ ಯಾತ್ರೆಯ ಭಾಗವಾದ ಪವಿತ್ರ ಪಂಪಾ ನದಿಯಲ್ಲಿ ಭಕ್ತಾದಿಗಳು ಬಿಸಾಡಿದ ಪ್ಲಾಸ್ಟಿಕ್ ಚೀಲ, ಬಾಟಲಿಗಳು, ಬಟ್ಟೆಗಳು ಮುಂತಾದವುಗಳನ್ನು ಸ್ವಚ್ಛಗೊಳಿಸುವ ಸೇವಾ ಕಾರ್ಯ ನಡೆಸಿದರು. ಗುರುಸ್ವಾಮಿಯಾಗಿ ಸುಳ್ಯದ ಹಿರಿಯ ನ್ಯಾಯವಾದಿ ರಾಮಕೃಷ್ಣ ಅಮೈ ಅವರು ಈ ಕುರಿತು ಮಾತನಾಡಿ ನಾನು ಸುಮಾರು 30 ವರ್ಷಗಳಿಂದ ಶಬರಿ ಮಲೆ ಯಾತ್ರೆ ಮಾಡುತ್ತಾ ಬರುತ್ತಿದ್ದೇನೆ. ಹಿಂದಿನ ಕಾಲದಿಂದಲೂ ಪಂಪಾ ನದಿಯ ತೀರ ಮಲಿನಗೊಳಿಸುವ ಕಾರ್ಯ ಭಕ್ತಾದಿಗಳು ಮಾಡುತ್ತಿದ್ದಾರೆ ನಮ್ಮ

ಶಬರಿಮಲೆ ಯಾತ್ರೆ ತೆರಳಿದ್ದ ಸುಳ್ಯದ ವಕೀಲರಿಂದ ಪಂಪಾ ನದಿಯಲ್ಲಿ ಸ್ವಚ್ಛತಾ ಸೇವಾ ಕಾರ್ಯ Read More »