September 2023

ಡ್ರೈವರ್ ಇಲ್ಲದ ಕ್ಯಾಬ್ ಏರಿದ ಡಾಲಿ ಧನಂಜಯ್

ಸಮಗ್ರ ನ್ಯೂಸ್:ಸಿನಿಮಾ ನಟರೆಲ್ಲ ಸಿನಿಮಾ ಶೂಟಿಂಗ್, ಟ್ರೀಪ್ ಹೀಗೆ ನಾನಾ ಕಾರಣಕ್ಕೆ ಹೊರ ದೇಶಕ್ಕೆ ಹೋಗೋದು ಮಾಮೂಲಿ ಹಾಗೇ ಇಲ್ಲಿ ನಟ ಡಾಲಿ ಧನಂಜಯ್ ಕೂಡ ಸದ್ಯ ಅಮೆರಿಕದಲ್ಲಿದ್ದಾರೆ. ಅಷ್ಟೇ ಯಾಕೆ ಅವರು ಡ್ರೈವರ್ ಇಲ್ಲದ ಕ್ಯಾಬ್ ಏರಿದ್ದಾರೆ. ಅದು ಹೋಗುವ ವೇಗ ನೋಡಿ ಡಾಲಿ ಅಚ್ಚರಿಗೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಾರತಕ್ಕಿಂತ ಅಮೆರಿಕ ತಂತ್ರಜ್ಞಾನದಲ್ಲಿ ತುಂಬಾನೇ ಮುಂದಿದೆ. ಅಲ್ಲಿ ಡ್ರೈವರ್ ಇಲ್ಲದ ಕಾರುಗಳು ಬಂದಿವೆ. ಚಾಲಕ ರಹಿತ ಕ್ಯಾಬ್​ಗಳು ಅಮೆರಿಕದಲ್ಲಿವೆ. […]

ಡ್ರೈವರ್ ಇಲ್ಲದ ಕ್ಯಾಬ್ ಏರಿದ ಡಾಲಿ ಧನಂಜಯ್ Read More »

ಕರ್ನಾಟಕಕ್ಕೆ ಶಾಕ್ ಮೇಲೆ ಶಾಕ್| ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ನಿರ್ವಹಣಾ ಪ್ರಾಧಿಕಾರ ಆದೇಶ

ಸಮಗ್ರ ನ್ಯೂಸ್: ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಮತ್ತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದೆ. ಕಾವೇರಿ ಜಲನಯನ ತೀರಪ್ರದೇಶಗಳಾದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ಅಧಿಕಾರಿಗಳ ಸಭೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು ವಿಡಿಯೋ ಕಾನರೆನ್ಸ್ ಮೂಲಕ ನಡೆಸಿತು. ಈ ಸಭೆಯಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಹರಿಸಬೇಕು ಎಂದು ಆದೇಶಿಸಿದೆ. ಮುಂದಿನ 18 ದಿನಗಳವರೆಗೆ 3 ಸಾವಿರ ಕ್ಯುಸೆಕ್ ತಮಿಳುನಾಡಿಗೆ ನೀರು ಹರಿಸಬೇಕು ಆದೇಶದಲ್ಲಿ

ಕರ್ನಾಟಕಕ್ಕೆ ಶಾಕ್ ಮೇಲೆ ಶಾಕ್| ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ನಿರ್ವಹಣಾ ಪ್ರಾಧಿಕಾರ ಆದೇಶ Read More »

ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್

ಸಮಗ್ರ ನ್ಯೂಸ್: ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿದಿನ ದೂರದ ಊರುಗಳಿಂದ ಭಕ್ತರು ಹೋಗುತ್ತಾರೆ. ಅದೇ ರೀತಿ ನಮ್ಮ ರಾಜ್ಯದಿಂದಲೂ ತೆರಳುವ ಭಕ್ತರ ಸಂಖ್ಯೆಯೂ ಹೆಚ್ಚು, ಆದರೆ ಇದೀಗ ಆಂಧ್ರ ಪ್ರದೇಶದಲ್ಲಿರುವ ಪುಣ್ಯಕ್ಷೇತ್ರ ತಿರುಮಲಕ್ಕೆ ತೆರಳುವ ಕರ್ನಾಟಕದ ಭಕ್ತರಿಗೆ ರಾಜ್ಯದ ಮುಜರಾಯಿ ಇಲಾಖೆ ಸಂತಸದ ಸುದ್ದಿ ನೀಡಿದೆ. ತಿರುಪತಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಅಲ್ಲಿ ಉಳಿದುಕೊಳ್ಳಲು ಕೆಲವೊಮ್ಮೆ ಅತಿಥಿಗೃಹಗಳೇ ಸಿಗಲ್ಲ. ಅತಿಥಿಗೃಹ ಸೇರಿದಂತೆ ಅನೇಕ ಸಮಸ್ಯೆಗಳನ್ನು ಭಕ್ತರು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಗಮನಿಸಿದ ಕರ್ನಾಟಕ ಸರ್ಕಾರ

ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್ Read More »

₹2000 ನೋಟು ಬದಲಾವಣೆಗೆ ನಾಲ್ಕೇ ದಿನ ಬಾಕಿ| ಸೆ.30 ಕೊನೆಯ ದಿನ

ಸಮಗ್ರ ನ್ಯೂಸ್: ರಿಸರ್ವ್ ಬ್ಯಾಂಪ್ ಆಫ್ ಇಂಡಿಯಾ (ಆರ್‌ಬಿಐ) ಮೇ 19 ರಂದು 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಗಡುವು ಮುಗಿಯಲು ಕೆಲವೇ ನಾಲ್ಕು ದಿನಗಳು ಉಳಿದಿವೆ. ಈ ಗಡುವಿಗೂ ಮುನ್ನವೇ ನೀವು ನೋಟುಗಳನ್ನು ಬದಲಾವಣೆ ಮಾಡಬೇಕಾಗುತ್ತದೆ.2000 ರೂಪಾಯಿ ನೋಟುಗಳನ್ನು ಜನರು ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡುವಂತೆ ಅಥವಾ ಬದಲಾವಣೆ ಮಾಡಿಕೊಳ್ಳುವಂತೆ ಕೇಂದ್ರ ಬ್ಯಾಂಕ್ ವಿನಂತಿ ಮಾಡಿದೆ. ಜನರು ಸೆಪ್ಟೆಂಬರ್ 30 ರವರೆಗೆ

₹2000 ನೋಟು ಬದಲಾವಣೆಗೆ ನಾಲ್ಕೇ ದಿನ ಬಾಕಿ| ಸೆ.30 ಕೊನೆಯ ದಿನ Read More »

ಮದುವೆಯಾಗಿ ಏಳೇ ತಿಂಗಳಿಗೆ ಮಗು ಹಡೆದ ಸ್ವರಾ ಭಾಸ್ಕರ್

ಸಮಗ್ರ ನ್ಯೂಸ್: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಅವರು ಸೆಪ್ಟೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರು ಸ್ವರಾ ಅವರ ಪತಿಯಾಗಿದ್ದಾರೆ. ತಮಗೆ ಹೆಣ್ಣು ಮಗು ಜನಿಸಿದ ಮಾಹಿತಿಯನ್ನು ದಂಪತಿಯು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿರುವ ಸ್ವರಾ ಮತ್ತು ಫಹಾದ್ ಅವರು, ನಮ್ಮ ಪ್ರಾರ್ಥನೆ ಫಲಿಸಿತು. ಆಶೀರ್ವಾದ ಲಭಿಸಿತು. ಹಾಡು ಪಿಸುಗುಟ್ಟಿದೆ… ಅದು ಅತೀಂದ್ರಿಯ ಸತ್ಯ…. ಸೆಪ್ಟೆಂಬರ್ 23ರಂದು ನಮಗೆ

ಮದುವೆಯಾಗಿ ಏಳೇ ತಿಂಗಳಿಗೆ ಮಗು ಹಡೆದ ಸ್ವರಾ ಭಾಸ್ಕರ್ Read More »

ಸಂತ್ರಸ್ತನಿಗಾಗಿ ಮಿಡಿದ ಯುವ ಮನಸ್ಸುಗಳು

ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮದ ಶಿವಾಲ ಎಂಬಲ್ಲಿ ನೆಲೆಸಿರುವ ಸಚಿತ್ ಶಿವಾಲ ಎಂಬುವವರಿಗೆ ಕಿಡ್ನಿ ವೈಫಲ್ಯನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಕಲ್ಮಕಾರಿನ ಯುವಕರು ಧನ ಸಂಗ್ರಹ ಮಾಡಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಚಿತ್ ಶಿವಾಲ ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಈಗಾಗಲೇ ಎರಡು ಕಿಡ್ನಿಗಳು ಶೇ 80 ರಷ್ಟು ನಿಷ್ಕ್ರಿಯಗೊಂಡಿದ್ದು, ಅತೀ ಶೀಘ್ರದಲ್ಲೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡುವುದು ಅನಿವಾರ್ಯವಾಗಿದೆ. ಇದಕ್ಕಾಗಿ 16 ಲಕ್ಷದಷ್ಟು ಹಣದ ಅವಶ್ಯಕತೆ ಇದೆ.

ಸಂತ್ರಸ್ತನಿಗಾಗಿ ಮಿಡಿದ ಯುವ ಮನಸ್ಸುಗಳು Read More »

ಕಾವೇರಿ ಕಿಚ್ಚು: ರಾಮನಗರದಲ್ಲಿ ಸ್ಟಾಲಿನ್ ಅಣುಕು ತಿಥಿ

ಸಮಗ್ರ ನ್ಯೂಸ್: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಜಿಲ್ಲಾ ಕರ್ನಾಟಕ ಜನಪರ ವೇದಿಕೆ ರಾಮನಗರದಲ್ಲಿ ಬೆಳ್ಳಂಬೆಳಗ್ಗೆಯೇ ಪ್ರತಿಭಟನೆ ಆರಂಭಿಸಿದ್ದಾರೆ. ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ಆರಂಭಗೊಂಡಿದ್ದು, ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಶ್ರದ್ಧಾಂಜಲಿ ಕೋರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಟಾಲಿನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮತ್ತೆ ಹುಟ್ಟಿ ಬರಬೇಡಿ ಎಂದು ಘೋಷಣೆ ಕೂಗಿ ಸ್ಟಾಲಿನ್ ಅಣಕು ತಿಥಿ ಮಾಡುವ ಮೂಲಕ

ಕಾವೇರಿ ಕಿಚ್ಚು: ರಾಮನಗರದಲ್ಲಿ ಸ್ಟಾಲಿನ್ ಅಣುಕು ತಿಥಿ Read More »

ಕಾವೇರಿಗಾಗಿ ಸ್ಥಬ್ದಗೊಂಡ ಬೆಂಗಳೂರು/ ಸಿಲಿಕಾನ್ ಸಿಟಿ ಖಾಲಿ ಖಾಲಿ

ಸಮಗ್ರ ನ್ಯೂಸ್: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿದ ಬೆಂಗಳೂರು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸಿಲಿಕಾನ್ ಸಿಟಿ ಪೂರ್ತಿ ಸ್ಥಬ್ದಗೊಂಡಿದೆ. ಶಾಲಾ ಕಾಲೇಜುಗಳಿಗೆ ಈಗಾಗಲೇ ರಜೆ‌ ಘೋಷಣೆ ಮಾಡಲಾಗಿದ್ದು, ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆ ಜಾಗ್ರತೆ ವಹಿಸಿದೆ.

ಕಾವೇರಿಗಾಗಿ ಸ್ಥಬ್ದಗೊಂಡ ಬೆಂಗಳೂರು/ ಸಿಲಿಕಾನ್ ಸಿಟಿ ಖಾಲಿ ಖಾಲಿ Read More »

ಮನುಕುಲದ ಮೇಲೆ ಮತ್ತೊಂದು ಮಹಾನ್ ವೈರಾಣು ದಾಳಿ ಸಾಧ್ಯತೆ| ಕೊರೊನಾಕ್ಕಿಂತಲೂ ಅಪಾಯಕಾರಿ ಈ ವೈರಸ್

ಸಮಗ್ರ ನ್ಯೂಸ್: ಕೊರೊನಾ ವೈರಸ್ ಪ್ರಪಂಚದಾದ್ಯಂತ ವಿನಾಶವನ್ನು ಉಂಟು ಮಾಡಿತು. ಅನೇಕ ದೇಶಗಳಲ್ಲಿನ ಜನರು ನಿರಂತರವಾಗಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ತಜ್ಞರು ಹೊಸ ಸಾಂಕ್ರಾಮಿಕದ ಆಗಮನದ ಬಗ್ಗೆ ಭಯಪಡುತ್ತಿದ್ದಾರೆ. ಇದು ಕೋವಿಡ್-19 ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಮತ್ತು ಈ ಕಾರಣದಿಂದಾಗಿ ಕನಿಷ್ಠ 5 ಕೋಟಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದು ಎಂದು W.H.O ಹೇಳಿದ್ದು, ಇದಕ್ಕೆ Disease X ಎಂದು ಹೆಸರಿಸಿದೆ. 2019 ರಲ್ಲಿ ಹೊರಹೊಮ್ಮಿದ ಕೋವಿಡ್ -19 ಈಗಾಗಲೇ ಜಾಗತಿಕವಾಗಿ ಸುಮಾರು

ಮನುಕುಲದ ಮೇಲೆ ಮತ್ತೊಂದು ಮಹಾನ್ ವೈರಾಣು ದಾಳಿ ಸಾಧ್ಯತೆ| ಕೊರೊನಾಕ್ಕಿಂತಲೂ ಅಪಾಯಕಾರಿ ಈ ವೈರಸ್ Read More »

ಪಾಕಿಸ್ತಾನದಲ್ಲಿ ಭೀಕರ ರೈಲು ದುರಂತ

ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ರೈಲು ದುರಂತ ಸಂಭವಿಸುವುದು ಇದೆ ಮೊದಲಲ್ಲ. ಇಲ್ಲಿನ ಇಲಾಖೆಗೆ ಸೂಕ್ತ ತಂತ್ರಜ್ಞಾನ ಸೌಲಭ್ಯ ಇಲ್ಲದೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಹೀಗೆ ಇದೀಗ ಮತ್ತೊಂದು ಅಪಘಾತ ಉಂಟಾಗಿದೆ. ಈ ದುರ್ಘಟನೆ ನಡೆದಿದ್ದು ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದ ಶೇಖಾ‍ಪುರ ಜಿಲ್ಲೆಯ ಕಿಲಾ ಸತ್ತಾರ್ ಶಾ ರೈಲ್ವೆ ನಿಲ್ದಾಣದಲ್ಲಿ. ಈ ಭೀಕರ ದುರಂತದಲ್ಲಿ ಒಟ್ಟು 31 ಪ್ರಯಾಣಿಕರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿರುವ ರೈಲು ಮಿಯಾನ್ವಾಲಿ ಪ್ರದೇಶದಿಂದ ಲಾಹೋರ್‌ ಕಡೆಗೆ ತೆರಳುತ್ತಿತ್ತು. ಆದರೆ

ಪಾಕಿಸ್ತಾನದಲ್ಲಿ ಭೀಕರ ರೈಲು ದುರಂತ Read More »