September 2023

ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ 2023 ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ

ಸಮಗ್ರ ನ್ಯೂಸ್: ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಎಂಬ ಹಿರಿಮೆ ಹೊಂದಿರುವ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘವು 2023ರ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ”ಗೆ ಭಾಜನವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅ. 2ರಂದು ಸಂಜೆ 4.30 […]

ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ 2023 ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ Read More »

ಅಯೋಧ್ಯಾ ರಾಮ‌ ಮಂದಿರ/ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಸಾಧ್ಯತೆ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿ ಇದ್ದು, ಮುಂದಿನ ವರ್ಷದ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಾಧ್ಯತೆ ಇದೆ ಎಂದು ದೇವಾಲಯ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ಜನವರಿ 20ರಿಂದ 24ರವರೆಗೆ ನಡೆಯುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಮೂರ್ತಿ ಪ್ರತಿಷ್ಠಾಪನೆಯ ದಿನಾಂಕವನ್ನು ನಿರ್ಧರಿಸಿ, ಪ್ರಧಾನಿಯವರಿಗೆ ತಿಳಿಸಬೇಕಿದೆ ಎಂದು ಮಿಶ್ರಾ ಹೇಳಿದ್ದಾರೆ. ಈ ವರ್ಷದ ಅಂತ್ಯಕ್ಕೆ ನೆಲಮಹಡಿಯ ಕಾಮಗಾರಿ ಅಂತ್ಯಗೊಳ್ಳಲಿದ್ದು, ಜನವರಿ ತಿಂಗಳ

ಅಯೋಧ್ಯಾ ರಾಮ‌ ಮಂದಿರ/ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಸಾಧ್ಯತೆ Read More »

ದಸರಾ ಗಜಪಡೆಗೆ ಮತ್ತೆ 5 ಆನೆ ಎಂಟ್ರಿ

ಸಮಗ್ರ ನ್ಯೂಸ್: ಮೈಸೂರು ದಸರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅರಮನೆ ಆವರಣದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ದಸರಾ ಆನೆಗಳ ಒಂದು ತಂಡ ಅರಮನೆಯಲ್ಲಿದ್ದು, ಇನ್ನೊಂದು ತಂಡ ಜೊತೆಯಾಗಿದೆ. ದಸರಾ ಉತ್ಸವದವ ತಯಾರಿಯಲ್ಲಿ ಮತ್ತೆ 5 ಆನೆಗಳು ದಸರಾ ಗಜಪಡೆಯನ್ನ ಸೇರಿಕೊಂಡಿದೆ. ಈಗ 14 ಆನೆಗಳು ಅರಮನೆ ಆವರಣ ತಲುಪಿದ್ದು ಮುಂದಿನ ದಿನಗಳಲ್ಲಿ ಭರ್ಜರಿ ತಾಲೀಮಿನ ಜೊತೆಗೆ ದಸರಾ ಉತ್ಸವಕ್ಕೆ ಆನೆಗಳು ಸಿದ್ಧವಾಗಲಿದೆ ಮೈಸೂರು ದಸರಾದ ಅಂಬಾರಿ ಹೊಣೆ ಹೊತ್ತ ಕ್ಯಾಪ್ಟನ್ ಅಭಿಮನ್ಯು ಆಂಡ್

ದಸರಾ ಗಜಪಡೆಗೆ ಮತ್ತೆ 5 ಆನೆ ಎಂಟ್ರಿ Read More »

ಕಾಸರಗೋಡು: ನಿಂತಿದ್ದ ಪಿಕಪ್ ವ್ಯಾನ್ ಗೆ ಕೆಎಸ್ಅರ್ ಟಿಸಿ ಬಸ್ ಡಿಕ್ಕಿ| ಓರ್ವ ಮೃತ್ಯು

ಸಮಗ್ರ ನ್ಯೂಸ್: ಪಿಕಪ್ ವ್ಯಾನ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಸೆ 26 ರಂದು ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ನಡೆದಿದೆ. ಪಿಕಪ್ ವ್ಯಾನ್ ಚಾಲಕ ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಾಫ (43) ಅವರು ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೃತಪಟ್ಟಿದ್ದಾರೆ. ಅಡಿಕೆ ಗಿಡಗಳನ್ನು ಹೇರಿಕೊಂಡು ಬರುತ್ತಿದ್ದ ಪಿಕಪ್ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ನಡುವೆ ಎದುರಿನಿಂದ ಬರುತ್ತಿದ್ದ ಬಸ್ಸು ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ

ಕಾಸರಗೋಡು: ನಿಂತಿದ್ದ ಪಿಕಪ್ ವ್ಯಾನ್ ಗೆ ಕೆಎಸ್ಅರ್ ಟಿಸಿ ಬಸ್ ಡಿಕ್ಕಿ| ಓರ್ವ ಮೃತ್ಯು Read More »

ಬೆಳಗಾವಿ:ಅಭಿವೃದ್ಧಿ ಕಾಣದ ದೇವರಾಜ ಅರಸ ಕಾಲೋನಿಯ ನಾಗರಿಕರಿಂದ ಉಗ್ರ ಪ್ರತಿಭಟನೆ

ಸಮಗ್ರ ನ್ಯೂಸ್: ಸೆ.24;ಬೆಳಗಾವಿಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ದೇವರಾಜ ಅರಸ ಕಾಲೋನಿ ಕಳೆದ 40 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ಅಭಿವೃದ್ಧಿಯಿಂದ ವಂಚಿತವಾಗಿದೆ. 1982ರಲ್ಲಿ ಬುಡಾ ಕೈಗೆತ್ತಿಕೊಂಡ ಮೊದಲ ಯೋಜನೆಯಾದ ಸ್ಕೀಮ್ ನಂ 11 ಇದಾಗಿದೆ. ಈ ಕಾಲೋನಿ ಅಭಿವೃದ್ಧಿ ಕಾಣದೆ ನಗರ ಆಡಳಿತ ಮತ್ತು ಬುಡಾದ ಕಳಪೆ ಸಾಧನೆಗೆ ಸಾಕ್ಷಿ ಇದಾಗಿದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ದೇವರಾಜ ಅರಸ ಕಾಲೋನಿಯ ನಂತರ ಹುಟ್ಟಿಕೊಂಡಂತಹ ಅನೇಕ ಬಡಾವಣೆಗಳು, ಕಾಲೋನಿಗಳು ಅಭಿವೃದ್ಧಿಯ ಪರ್ವಗಳನ್ನೆ ಕಂಡಿದೆ. ಬೆಳಗಾವಿಯ

ಬೆಳಗಾವಿ:ಅಭಿವೃದ್ಧಿ ಕಾಣದ ದೇವರಾಜ ಅರಸ ಕಾಲೋನಿಯ ನಾಗರಿಕರಿಂದ ಉಗ್ರ ಪ್ರತಿಭಟನೆ Read More »

ಜಲವಿವಾದಗಳ ಪರಿಹಾರಕ್ಕಾಗಿ 122.76 ಕೋಟಿ ವಕೀಲರ ಶುಲ್ಕ/ ಮಾಹಿತಿ ಹಕ್ಕಿನಲ್ಲಿ ಬಹಿರಂಗ

ಸಮಗ್ರ ನ್ಯೂಸ್: ಕರ್ನಾಟಕದ ಕೃಷ್ಣಾ, ಕಾವೇರಿ ಮತ್ತು ಮಹದಾಯಿ ನದಿಗಳ ವಿಚಾರದಲ್ಲಿ ಹೊರ ರಾಜ್ಯಗಳೊಂದಿಗೆ ಇರುವ ವಿವಾದವನ್ನು ಬಗೆಹರಿಸಲು ವಕೀಲರ ಶುಲ್ಕವಾಗಿ 122.76 ಕೋಟಿ ಹಣವನ್ನು ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿದುಬಂದಿದೆ. ಕಾವೇರಿ, ಕೃಷ್ಣಾ ಮತ್ತು ಮಹದಾಯಿ ಜಲವಿವಾದ ನ್ಯಾಯಮಂಡಳಿಗಳಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲು ಇಷ್ಟು ಮೊತ್ತವನ್ನು ವಕೀಲರ ಶುಲ್ಕವಾಗಿ ಪಾವತಿ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಬೆಳಗಾವಿಯಲ್ಲಿ ಹೇಳಿದರು. ಕಾವೇರಿ ಜಲವಿವಾದಕ್ಕಾಗಿ ಅತ್ಯಧಿಕ 54.13 ಕೋಟಿ ವ್ಯಯಿಸಲಾಗಿದ್ದು,

ಜಲವಿವಾದಗಳ ಪರಿಹಾರಕ್ಕಾಗಿ 122.76 ಕೋಟಿ ವಕೀಲರ ಶುಲ್ಕ/ ಮಾಹಿತಿ ಹಕ್ಕಿನಲ್ಲಿ ಬಹಿರಂಗ Read More »

ಸೌಜನ್ಯ ಪ್ರಕರಣ ಪರ ದನಿ ಎತ್ತದ ತುಳು ಚಿತ್ರನಟರ ವಿರುದ್ಧ ಪೋಸ್ಟರ್ ಅಭಿಯಾನ

ಸಮಗ್ರ ನ್ಯೂಸ್: ಹನ್ನೆರಡು ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ‌ ಕೊಲೆಯಾಗಿ‌ ಹೋದ ಧರ್ಮಸ್ಥಳ ಸಮೀಪದ ಪಾಂಗಾಳ ನಿವಾಸಿ ಕುಮಾರಿ ಸೌಜನ್ಯ ಪ್ರಕರಣದ ಕುರಿತಂತೆ ಮೌನಕ್ಕೆ ಶರಣಾಗಿರುವ ತುಳು ಚಿತ್ರರಂಗದ ನಟರ ವಿರುದ್ದ ಪೋಸ್ಟರ್ ಅಭಿಯಾನ ಆರಂಭಿಸಲಾಗಿದೆ. ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸೌಜನ್ಯ ಪರ ಪ್ರತಿಭಟನೆಗಳು ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಹಲವಾರು ನಟರು ಸೌಜನ್ಯಳ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ. ಆದರೆ ಕರಾವಳಿಯಲ್ಲೇ ನಡೆದ ಈ ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ ತುಳು ಚಿತ್ರರಂಗದ ದಿಗ್ಗಜರು ಮೌನಕ್ಕೆ ಶರಣಾಗಿದ್ದಾರೆ. ಇದೀಗ ಈ

ಸೌಜನ್ಯ ಪ್ರಕರಣ ಪರ ದನಿ ಎತ್ತದ ತುಳು ಚಿತ್ರನಟರ ವಿರುದ್ಧ ಪೋಸ್ಟರ್ ಅಭಿಯಾನ Read More »

ಸುಳ್ಯ:ಫ್ರೆಂಡ್ಸ್ ಕ್ಲಬ್ ಜಯನಗರ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಜಯನಗರದಲ್ಲಿ ಫ್ರೆಂಡ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ. ನೂತನ ಅಧ್ಯಕ್ಷರಾಗಿ ಸುರೇಶ್ ಕಾಮತ್ ಜಯನಗರ, ಉಪಾಧ್ಯಕ್ಷರಾಗಿ ರೋಪಿ ಜಯನಗರ, ಶರೀಫ್ ಜಯನಗರ, ಕಾರ್ಯದರ್ಶಿಯಾಗಿ ಜನಾರ್ಧನ ಜಿ. ಜಯನಗರ, ಜತೆ ಕಾರ್ಯದರ್ಶಿಯಾಗಿ ಸುಂದರ ಕುದ್ಪಾಜೆ, ಖಜಾಂಜಿಯಾಗಿ ಪ್ರಸನ್ನ ಕುದ್ಪಾಜೆ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಕುದ್ಪಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಲೋಕೇಶ್ ಕೊಡೆಂಕಿರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಜಯನಗರ, ನಿರ್ದೇಶಕರುಗಳಾಗಿ ನಿತಿನ್ ಕೊಯಿಂಗೋಡಿ, ಪ್ರಶಾಂತ್ ಜಯನಗರ, ಚೇತನ್ ಜಯನಗರ, ಪ್ರಕಾಶ್ ನಾರಾಜೆ,ಗಣೇಶ್ ಕುದ್ಪಾಜೆ, ಶಶಿಕುಮಾರ್ ಕುದ್ಪಾಜೆ,ಪ್ರವೀಣ್ ಕುದ್ಪಾಜೆ, ಗೌರವ ಸಲಹೆಗಾರರಾಗಿ

ಸುಳ್ಯ:ಫ್ರೆಂಡ್ಸ್ ಕ್ಲಬ್ ಜಯನಗರ ಇದರ ನೂತನ ಪದಾಧಿಕಾರಿಗಳ ಆಯ್ಕೆ Read More »

ಹಿರಿಯ ನಟ ಬ್ಯಾಂಕ್ ಜನಾರ್ದನ್ ಗೆ ಹೃದಯಾಘಾತ

ಸಮಗ್ರ ನ್ಯೂಸ್ : ಸ್ಯಾಂಡಲ್​ವುಡ್​ನ ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಘಾತ ಆಗಿದೆ.ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಆತಂಕ ಕಾಡಲು ಆರಂಭವಾಗಿದೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ತಂದೆಯ ಆರೋಗ್ಯದ ಕುರಿತು ಬ್ಯಾಂಕ್ ಜನಾರ್ದನ್ ಪುತ್ರ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ. ಹೆದರುವ ಅಗತ್ಯವಿಲ್ಲ ಎಂದಿದ್ದಾರೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆರೋಗ್ಯವಾಗಿದ್ದಾರೆ. ಸದ್ಯ ಅವರಿಗೆ ಆಂಜಿಯೋಗ್ರಾಮ್ ಮಾಡಲಾಗುತ್ತಿದೆ

ಹಿರಿಯ ನಟ ಬ್ಯಾಂಕ್ ಜನಾರ್ದನ್ ಗೆ ಹೃದಯಾಘಾತ Read More »

ಬೆಂಗಳೂರು ಬಂದ್ ಹಿನ್ನೆಲೆ 13 ಫ್ಲೈಟ್ ರದ್ದು

ಸಮಗ್ರ ನ್ಯೂಸ್: ಬೆಂಗಳೂರು ಬಂದ್​ ಹಿನ್ನೆಲೆ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು ಇದರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಖಾಲಿಖಾಲಿಯಾಗಿದೆ.ಬಂದ್ ಬಿಸಿಯಿಂದ ಜನ ವಿಮಾನ ನಿಲ್ದಾಣದತ್ತ ಮುಖ ಮಾಡಿಲ್ಲ. ಹೆಚ್ಚಿನ ಪ್ರಯಾಣಿಕರಿಲ್ಲದ ಕಾರಣ ಕೊಚ್ಚಿ, ದೆಹಲಿ, ಮುಂಬೈ ಮತ್ತು ಮಂಗಳೂರು ವಿಮಾನಗಳನ್ನು ರದ್ದು ಮಾಡಲಾಗಿದೆ. ಏರ್ಲೈನ್ಸ್ ಸಿಬ್ಬಂದಿ ಕೊನೆ ಕ್ಷಣದಲ್ಲಿ 13 ಪ್ಲೈಟ್​ಗಳನ್ನ ರದ್ದು ಮಾಡಿದ್ದಾರೆ. ಏರ್ ಪೋರ್ಟಿನಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಕ್ಯಾಬ್ ಚಾಲಕರು ಅಳಲು ತೋಡಿಕೊಂಡಿದ್ದಾರೆ. ರಾತ್ರಿ ಒಂದು ಗಂಟೆಯಿಂದ ಪ್ರಯಾಣಿಕರಿಗಾಗಿ ಕಾಯುತ್ತಿದ್ದೇನೆ. ಬೆಳಗ್ಗೆಯಿಂದ ಒಂದೇ ಒಂದು

ಬೆಂಗಳೂರು ಬಂದ್ ಹಿನ್ನೆಲೆ 13 ಫ್ಲೈಟ್ ರದ್ದು Read More »