September 2023

ಕೋಲ್ಹಾರ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆನರಾ ಬ್ಯಾಂಕ್ ಮ್ಯಾನೇಜರ್ ಗೆ ಮನವಿ

ಸಮಗ್ರನ್ಯೂಸ್:ಕೋಲ್ಹಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರೋಣಿಹಾಳ ಗ್ರಾಮದ ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳನ್ನು ಕನ್ನಡ ಭಾಷೆ ಮಾತನಾಡಲು ಬರುವಂತವರನ್ನು ಆಯ್ಕೆ ಮಾಡಬೇಕು. ಬ್ಯಾಂಕುಗಳಲ್ಲಿ ಪಾಸ್ ಬುಕ್ ಎಂಟ್ರಿ ಮಾಡುವ ಪ್ರಿಂಟಿಂಗ್ ಮಿಷನ್ ವನ್ನು ಹೆಚ್ಚುವರಿಯಾಗಿ ಅಳವಡಿಸಬೇಕು ಹಾಗೂ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜಾರಿಗೆ ಆಗಿದ್ದರಿಂದ ಬ್ಯಾಂಕಿನ ಕ್ಯಾಶ್ ಕೌಂಟರ್ ಗಳಲ್ಲಿ ದಿನವಿಡಿ ಸಾರ್ವಜನಿಕರ ಗದ್ದಲ ಇರುವುದರಿಂದ ಇನ್ನೊಂದು ಕ್ಯಾಶ್ ಕೌಂಟರ್ ಮತ್ತು ಹೊಸದಾಗಿ ಸಿಬ್ಬಂದಿಗಳನ್ನು ಭರ್ತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು […]

ಕೋಲ್ಹಾರ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆನರಾ ಬ್ಯಾಂಕ್ ಮ್ಯಾನೇಜರ್ ಗೆ ಮನವಿ Read More »

ಜೆಡಿಎಸ್ ನ ಇನ್ನೊಂದು ವಿಕೆಟ್ ಪತನ

ಸಮಗ್ರ ನ್ಯೂಸ್: ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಬೆಳವಣಿಗೆ ನಡೆಯುತ್ತಲೆ ಇದೆ, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತೆ ಇದೆ, ಮುಂಬರುವ ಲೋಕಸಭಾ ಚುನಾವಣೆಗೆ ಅಖಾಡಕ್ಕಿಳಿಯಲೆ ಬೇಕು. ಆದ್ರೆ, ಅದಕ್ಕೂ ಮುನ್ನ ಜೆಡಿಎಸ್​ ನಾಯಕರು ಒಬ್ಬೊಬ್ಬರಾಗಿಯೇ ಪಕ್ಷ ತೊರೆಯುತ್ತಿದ್ದಾರೆ. ಇದೀಗ ತುಮಕೂರಿನಲ್ಲಿ‌ ಜೆಡಿಎಸ್​ನ ಮತ್ತೊಂದು ವಿಕೆಟ್​ ಪತನವಾಗಿದೆ. ಅಲ್ಪಸಂಖ್ಯಾತ ಸಮುದಾಯದ ಮುಖಂಡ ಹಾಗೂ ಮಾಜಿ ಶಾಸಕ ಶಫಿ ಅಹಮದ್ ಜೆಡಿಎಸ್​ಗೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಹಾಗೂ ರಾಜ್ಯಾ

ಜೆಡಿಎಸ್ ನ ಇನ್ನೊಂದು ವಿಕೆಟ್ ಪತನ Read More »

ಹೊಸ ಟ್ರೇಡ್ ಮಾರ್ಕ್ ಗಳ ಮೊರೆಹೋದ ಬಜಾಜ್| ಈ ಹೆಸರುಗಳು‌ ಮಾರ್ಕೆಟ್ ಕ್ಯಾಚ್ ಮಾಡೋದು ಗ್ಯಾರಂಟಿ!!

ಸಮಗ್ರ ನ್ಯೂಸ್: ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಇದೀಗ ತನ್ನ ಮುಂಬರುವ ಉತ್ಪನ್ನಗಳಿಗೆ ಬೆರಳೆಣಿಕೆಯ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. ಜಿಂಗರ್, ಎಲಿಕ್ಸಿರ್, ಔರಾ, ಬಾಂಬರ್ ಇವು ಸದ್ಯ ಬಜಾಜ್ ತನ್ನ ಭವಿಷ್ಯದ ಉತ್ಪನ್ನಗಳ ಟ್ರೇಡ್‌ಮಾರ್ಕ್‌ಗಳು. ಈ ಹೊಸ ಹೆಸರುಗಳು ಯಾವ ಮಾದರಿಗಳಿಗೆ ನೀಡಬಹುದು ಎಂದು ತಿಳಿಯುವ ಮೊದಲು ಬಜಾಜ್ ಈ ಹಿಂದೆಯೂ ಕೆಲ ಟ್ರೇಡ್‌ಮಾರ್ಕ್ ಸಲ್ಲಿಸಿದ್ದ ಒಂದಷ್ಟು ಹೆಸರುಗಳನ್ನು ನೋಡೋಣ. ರೇಸರ್, ಹ್ಯಾಮರ್, ಸ್ವಿಂಗ್, ಜಿನೀ, ಫ್ರೀರೈಡರ್, ಕ್ಯಾಲಿಬರ್, ನ್ಯೂರಾನ್, ಟ್ವಿನ್ನರ್,

ಹೊಸ ಟ್ರೇಡ್ ಮಾರ್ಕ್ ಗಳ ಮೊರೆಹೋದ ಬಜಾಜ್| ಈ ಹೆಸರುಗಳು‌ ಮಾರ್ಕೆಟ್ ಕ್ಯಾಚ್ ಮಾಡೋದು ಗ್ಯಾರಂಟಿ!! Read More »

ಬೆಂಗಳೂರು ಬಂದ್ ನಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದ್ದೆಷ್ಟು ಗೊತ್ತೇ?

ಸಮಗ್ರ ನ್ಯೂಸ್: ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್ ನಿಂದ 1500 ಕೋಟಿ ರೂಪಾಯಿಯಷ್ಟು ವಹಿವಾಟು ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ.ನಷ್ಟು ಜಿ.ಎಸ್.ಟಿ. ನಷ್ಟವಾಗಿದೆ. ಒಂದು ದಿನದ ಬಂದ್ ನಿಂದಾಗಿ ರಾಜ್ಯದಲ್ಲಿ ಸುಮಾರು 4500 ಕೋಟಿ ರೂ.ಗೂ ಅಧಿಕ ವಹಿವಾಟು ಸ್ಥಗಿತಗೊಳ್ಳಲಿದ್ದು, ರಾಜ್ಯ ಸರ್ಕಾರಕ್ಕೆ ಸುಮಾರು 450 ಕೋಟಿ ರೂ. ಹೆಚ್ಚು ನಷ್ಟ ಉಂಟಾಗಲಿದೆ. ಅದರಲ್ಲಿ ಬೆಂಗಳೂರಿನ ಪಾಲು ಶೇಕಡ 60ರಷ್ಟು ಆಗಿರುತ್ತದೆ. ಬೆಂಗಳೂರು ಬಂದ್ ನಿಂದ ವಾಣಿಜ್ಯ ಚಟುವಟಿಕೆ, ಕೈಗಾರಿಕೆ ಉತ್ಪಾದನೆ

ಬೆಂಗಳೂರು ಬಂದ್ ನಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದ್ದೆಷ್ಟು ಗೊತ್ತೇ? Read More »

ಛಾಯಾಗ್ರಾಹಕರ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೊಸಿಯೇಷನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಜಂಟಿ ಕಾರ್ಯಕಾರಿ ಸಭೆ ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಹಾಲ್ ನಲ್ಲಿ ಸೆ. 26ರಂದು ನಡೆಯಿತು. ಜಿಲ್ಲಾಧ್ಯಕ್ಷ ಆನಂದ ಎನ್. ಬಂಟ್ವಾಳ್ ಹಾಗೂ ಎಲ್ಲಾ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 2024-25 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಸುಳ್ಯ ವಲಯದ ನಿಕಟ ಪೂರ್ವ ಅಧ್ಯಕ್ಷ ಹರೀಶ್ ಪಿ. ರಾವ್ ಇವರನ್ನು ಜಿಲ್ಲಾ ಛಾಯಾ ಗ್ರಾಹಕ ಮಾಧ್ಯಮ

ಛಾಯಾಗ್ರಾಹಕರ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ Read More »

ಮದುವೆ ಮಂಟಪದಲ್ಲಿ ಭೀಕರ ಅಗ್ನಿ ದುರಂತ| ಕನಿಷ್ಠ 100 ಮಂದಿ ಸಾವು

ಸಮಗ್ರ ನ್ಯೂಸ್: ಮದುವೆ ಮಂಟಪವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡ ಘಟನೆ ಉತ್ತರ ಇರಾನ್ ನ ಬಾಗ್ದಾದ್ ನಲ್ಲಿ ಸಂಭವಿಸಿದೆ. ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿರುವ ಉತ್ತರ ನಗರ ಮೊಸುಲ್ನ ಹೊರಗೆ ನಡೆದಿರುವ ಘಟನೆಯಾಗಿದೆ. ಬೆಂಕಿಯ ಕಾರಣದ ಬಗ್ಗೆ ತಕ್ಷಣದ ಮಾಹಿತಿ ತಿಳಿದು ಬಂದಿಲ್ಲ. ಟೆಲಿವಿಷನ್ ದೃಶ್ಯಾವಳಿಗಳು ಮದುವೆ ಮಂಟಪದ ಒಳಗೆ ಸುಟ್ಟುಹೋದ ಅವಶೇಷಗಳನ್ನು ತೋರಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮದುವೆ ಮಂಟಪದಲ್ಲಿ ಭೀಕರ ಅಗ್ನಿ ದುರಂತ| ಕನಿಷ್ಠ 100 ಮಂದಿ ಸಾವು Read More »

ಸುಳ್ಯ:ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಸಮಗ್ರ ನ್ಯೂಸ್: ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘ ಇದರ 2023- 24ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಸೆ. 26ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕಿ ಪ್ರಣವಿ ಎಂ. ವೈಜ್ಞಾನಿಕವಾಗಿ ವಿಕ್ರಂ ಲ್ಯಾಂಡರ್ ರೋವರ್ ಚಲನೆಯ ಮಾದರಿ ಮೂಲಕ ವಿಜ್ಞಾನ ಸಂಘದ ಪರದೆಯನ್ನು ಸರಿಸಿ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿಜ್ಞಾನ ಎಂಬುದು ಜ್ಞಾನದ ಒಂದು ಶಾಖೆ. ಇಂದು ಹಲವಾರು ವೈಜ್ಞಾನಿಕ

ಸುಳ್ಯ:ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ Read More »

ಮಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಸುಳ್ಯದ ಯುವಕ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಕಾಲೇಜು ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಇದೀಗ ಮಂಗಳೂರು ನಗರದ ಬೆಂದೂರ್ ವೆಲ್ ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಸಿಸಿಬಿ ಪೊಲೀಸರ ಸೆರೆಯಾಗಿದ್ದಾನೆ. ಮಂಗಳೂರಿನ ಕಾಲೋಜುವೊಂದರ ಪದವಿ ವಿದ್ಯಾರ್ಥಿಯಾಗಿರುವ ಸುಳ್ಯದ ಹಳಗೇಟಿನಲ್ಲಿರುವ ಆಲ್ಫಮ್ ಕಾರ್ನರ್ ಹೊಟೇಲ್ ನ ಮಾಲೀಕ ಡೆಲ್ಮಾ ಮುಸ್ತಫಾ ಎಂಬವರ ಮಗ ಲುಕುಮಾನುಲ್ ಹಕೀಂ (22) ಬಂಧಿತ ಆರೋಪಿಯಾಗಿದ್ದು. ಈತನಿಂದ 1

ಮಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಸುಳ್ಯದ ಯುವಕ ಪೊಲೀಸ್ ವಶಕ್ಕೆ Read More »

ಬೆಂಗಳೂರು: ಪೊಲೀಸರಿಗೆ ತಂದ ಊಟದಲ್ಲಿ ಇಲಿ ಪತ್ತೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ ಜೋರಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಆದರೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಲಾದ ಊಟದ ಪ್ಯಾಕೇಟ್‌ನಲ್ಲಿ ಇಲಿ ಪತ್ತೆಯಾದ ಘಟನೆ ಸೆ.26 ರಂದು ನಡೆದಿದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಸೇರಿದಂತೆ ಕೆಲ ಸಂಘಸಂಸ್ಥೆಗಳು ಸೇರಿ ಇಂದು ಬೆಂಗಳೂರು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದರು. ಇದರಿಂದ ರಾಜ್ಯ ರಾಜಧಾನಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಪ್ರತಿಭಟನೆಯ

ಬೆಂಗಳೂರು: ಪೊಲೀಸರಿಗೆ ತಂದ ಊಟದಲ್ಲಿ ಇಲಿ ಪತ್ತೆ Read More »

ಮಂಗಳೂರು: ರಿಕ್ಷಾಕ್ಕೆ ಡಿಕ್ಕಿ ಹೊಡೆದ ಆಂಬುಲೆನ್ಸ್

ಸಮಗ್ರ ನ್ಯೂಸ್: ರೋಗಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದ 108 ಆಂಬ್ಯುಲೆನ್ಸ್ ಟೈಲ್ಸ್ ಸಾಗಿಸುತ್ತಿದ್ದ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮತ್ತು ಮಗು ಗಾಯಗೊಂಡ ಘಟನೆ ಮಂಗಳೂರಿನ ಪಡೀಲ್ ನಲ್ಲಿ ನಡೆದಿದೆ. ಆಟೋ ರಿಕ್ಷಾದಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಆಟೋ ರಿಕ್ಷಾ ಚಾಲಕ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್ ಹಿಂದಿನಿಂದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಆಟೋ ರಿಕ್ಷಾದಲ್ಲಿದ್ದ ಟೈಲ್ಸ್ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಮಂಗಳೂರು: ರಿಕ್ಷಾಕ್ಕೆ ಡಿಕ್ಕಿ ಹೊಡೆದ ಆಂಬುಲೆನ್ಸ್ Read More »